ದುಬೈ: ಮುಂಬೈ ದಾಳಿಗೆ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿದ ಡೆಲ್ಲಿ ತಂಡಕ್ಕೆ ಆಧಾರವಾದ ಶ್ರೇಯಸ್ ಅಯ್ಯರ್ ಕಡೆಯವರೆಗೆ ಹೋರಾಡಿ 4 ವಿಕೆಟ್‍ಗಳ ಜಯ ತಂದುಕೊಟ್ಟರು.
Advertisement
130ರನ್‍ಗಳ ಟಾರ್ಗೆಟ್ ಬೆನ್ನುಹತ್ತಿದ ಡೆಲ್ಲಿ ಕೂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಟಾಪ್ ಆಡರ್ ಬ್ಯಾಟ್ಸ್‌ಮ್ಯಾನ್‌ಗಳಾದ ಪೃಥ್ವಿ ಶಾ, ಧವನ್, ಸ್ಮಿತ್ ಒಂದಕ್ಕಿ ಮೊತ್ತಕ್ಕೆ ಔಟ್ ಆದರು ಡೆಲ್ಲಿ ನಾಯಕ ರಿಷಬ್ ಪಂತ್ ತಂಡಕ್ಕೆ ಆಸರೆಯಾಗುವ ಸೂಚನೆ ನೀಡಿದರು ಸಹ 26ರನ್(22 ಎಸೆತ, 3 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ನಂತರ ಅಯ್ಯರ್ ಜೊತೆ ಸೇರಿದ ರವಿಚಂದ್ರನ್ ಅಶ್ವಿನ್ ಕಡೆಯ 6 ಬಾಲ್‍ಗೆ 4 ರನ್ ಅವಶ್ಯಕತೆ ಇದ್ದಾಗ 19 ಓವರ್ ನ ಮೊದಲ ಎಸೆತವನ್ನೇ ಸಿಕ್ಸರ್‌ಗಟ್ಟಿ ಡೆಲ್ಲಿಗೆ ಜಯ ತಂದುಕೊಟ್ಟರು. ಅಯ್ಯರ್ 33ರನ್(33 ಎಸೆತ, 2 ಬೌಂಡರಿ) ಮತ್ತು ಅಶ್ವಿನ್ 20ರನ್ (21 ಎಸೆತ, 1 ಸಿಕ್ಸ್) ಸಿಡಿಸಿ ಅಜೇಯರಾಗಿ ಉಳಿದರು. ಇದನ್ನೂ ಓದಿ: 14ನೇ ಐಪಿಎಲ್‍ಗೆ ಗುಡ್‍ಬೈ ಹೇಳಿದ ಗೇಲ್
Advertisement
Advertisement
ಅವೇಶ್, ಪಟೇಲ್ ಮಾರಕ ದಾಳಿ
ಟಾಸ್ ಸೋತು ಮೊದಲು ಬ್ಯಾಟಿಂಗ್‍ಗೆ ಬಂದ ಮುಂಬೈ ತಂಡಕ್ಕೆ ಎದುರಾಳಿ ತಂಡದ ಬೌಲರ್ ಗಳಾದ ಅವೇಶ್ ಖಾನ್ ಮತ್ತು ಅಕ್ಷರ್ ಪಟೇಲ್ ಮಾರಕ ದಾಳಿ ಸಂಘಟಿಸಿದರು. ಆರಂಭದಲ್ಲೇ ರೋಹಿತ್ ಶರ್ಮಾ 7ರನ್(10 ಎಸೆತ, 1 ಬೌಂಡರಿ) ಬಾರಿಸಿ ಅವೇಶ್ ಖಾನ್‍ಗೆ ವಿಕೆಟ್ ಒಪ್ಪಿಸಿದರೆ, ಡಿ ಕಾಕ್ 19ರನ್(18 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಅಕ್ಷರ್ ಪಟೇಲ್‍ಗೆ ವಿಕೆಟ್ ನೀಡಿ ಔಟ್ ಆದರು, ಆ ಬಳಿಕ ಬಂದ ಸೂರ್ಯಕುಮಾರ್ ಯಾದವ್ 33ರನ್(26 ಎಸೆತ, 2 ಸಿಕ್ಸ್, 2 ಬೌಂಡರಿ)ಚಚ್ಚಿ ಸಿಡಿಯುವ ಸೂಚನೆ ನೀಡಿದರು ಕೂಡ ಪಟೇಲ್ ಅವಕಾಶ ನೀಡದೆ ವಿಕೆಟ್ ಕಿತ್ತು ಪೇವಿಲಿಯನ್ ಕಳುಹಿಸಿದರು.
Advertisement
ಕುಸಿದ ಮುಂಬೈ
ವಿಕೆಟ್ ಕಳೆದುಕೊಂಡು ಸಾಗಿದ ಮುಂಬೈ ತಂಡಕ್ಕೆ ಕಡೆಯಲ್ಲಿ ಹಾರ್ದಿಕ್ ಪಾಂಡ್ಯಾ 17ರನ್(18 ಎಸೆತ, 2 ಬೌಂಡರಿ) ಮತ್ತು ಕೃನಾಲ್ ಪಾಂಡ್ಯಾ 13ರನ್(15 ಎಸೆತ 1 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದರು. ಅಂತಿಮವಾಗಿ ಮುಂಬೈ ತಂಡ ನಿಗದಿತ ಓವರ್ ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿತು. ಇದನ್ನೂ ಓದಿ: ರೋಚಕ ಘಟ್ಟ ತಲುಪಿದ ಐಪಿಎಲ್ – ಪ್ಲೇ ಆಫ್‍ಗೆ ಏರಲು ಯಾವ ತಂಡ ಏನು ಮಾಡಬೇಕು?
ಡೆಲ್ಲಿ ಪರ ಅವೇಶ್ ಖಾನ್ ಮತ್ತು ಅಕ್ಷರ್ ಪಟೇಲ್ 3 ವಿಕೆಟ್ ಕಿತ್ತು ಮಿಂಚಿದರೆ, ಅನ್ರಿಚ್ ನಾಟ್ರ್ಜೆ ಮತ್ತು ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು.