Mumbai Vs Chennai ನಡುವಿನ ಪಂದ್ಯ ಭಾರತ-ಪಾಕ್ ಕಾದಾಟವಿದ್ದಂತೆ: ಭಜ್ಜಿ

Public TV
2 Min Read
harbhajan singh

ಮುಂಬೈ: ಐಪಿಎಲ್ 2022ರ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವಿದ್ದಂತೆ ಎಂದು ಮಾಜಿ ಆಟಗಾರ ಹರ್ಭಜನ್ ಸಿಂಗ್ ವ್ಯಂಗ್ಯವಾಡಿದ್ದಾರೆ.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ಮುಂಬೈ ಇಂಡಿಯನ್ಸ್ ಬಹಳ ಜನಪ್ರಿಯ ತಂಡವಾಗಿದೆ. ಚೆನ್ನೈ, ಮುಂಬೈ ವಿರುದ್ಧ ಆಡಿದಾಗಲೆಲ್ಲಾ ಇದು ಭಾರತ ಮತ್ತು ಪಾಕಿಸ್ತಾನದ ಪಂದ್ಯವಾಗಿರುತ್ತದೆ. ನಾನು ಮುಂಬೈ ತಂಡದಲ್ಲಿದ್ದಾಗ ಯಾವಾಗಲೂ ಚೆನ್ನೈ ತಂಡವನ್ನು ಸೋಲಿಸಲು ಬಯಸುತ್ತಿದ್ದೆ. ಅವರು ನಮ್ಮನ್ನು ಸೋಲಿಸಲು ಬಯಸಿದ್ದರು. ಆದರೆ ಇದು ನನಗೆ ಬೇರೆ ರೀತಿಯಲ್ಲಿತ್ತು. ಚೆನ್ನೈ ತಂಡ ಸೇರಿದ ನಂತರ ನಾನು ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಲು ಬಯಸಲಾರಂಭಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಫುಟ್‍ಬಾಲ್ ಅಂಗಳದಲ್ಲಿ ಕೆಜಿಎಫ್ ಕ್ರೇಜ್

ಹರ್ಭಜನ್ ಸಿಂಗ್ 2018ರ ಐಪಿಎಲ್ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಡ್ ಆಗಿದ್ದರು. ಈ ಮೊದಲು ಅವರು ಮುಂಬೈ ಇಂಡಿಯನ್ಸ್‍ಗಾಗಿ 10 ಆವೃತ್ತಿಗಳಲ್ಲಿ ಆಡಿದ್ದರು. ಮುಂಬೈ ಇಂಡಿಯನ್ಸ್ 10 ವರ್ಷಗಳ ನಂತರ ಅವರನ್ನು ತಂಡದಿಂದ ಕೈಬಿಟ್ಟಿತ್ತು. 2017ರ ಐಪಿಎಲ್ ಋತುವಿನ ನಂತರ ಅನುಭವಿ ಆಟಗಾರ ತಮ್ಮ ಬೌಲಿಂಗ್ ಫಾರ್ಮ್ ಕಳೆದುಕೊಂಡಿದ್ದರು. ಇದನ್ನೂ ಓದಿ: ಪೋಲಾರ್ಡ್ ವಿದಾಯ ಹೇಳಿದ್ದು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ: ಕ್ರಿಸ್‌ಗೇಲ್

ಮಯಾಂಕ್ ಮಾರ್ಕಾಂಡೆ, ರಾಹುಲ್ ಚಹಾರ್ ಮತ್ತು ಅನುಕುಲ್ ರಾಯ್ ಅವರಂತಹ ಕಿರಿಯ ಸ್ಪಿನ್ನರ್‍ಗಳ ಖರೀದಿಗೆ ಮುಂಬೈ ನಿರ್ಧರಿಸಿತ್ತು. ಇದರರ್ಥ ಹರ್ಭಜನ್ ಹೊಸ ತಂಡವನ್ನು ಹುಡುಕಬೇಕಾಗಿತ್ತು. ನಂತರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 2018ರ ಹರಾಜಿನಲ್ಲಿ ಮುಂಬೈ ತಂಡದ ಮಾಜಿ ನಾಯಕನನ್ನು ಮೂಲ ಬೆಲೆ 2 ಕೋಟಿಗೆ ಖರೀದಿಸಿತ್ತು.

ಎಮ್‍ಐ ಯಾವಾಗಲೂ ತಮ್ಮ ತಂಡದಲ್ಲಿ ಅನುಭವಿ ಆಟಗಾರರಿಗೆ ಹೂಡಿಕೆ ಮಾಡಲು ಇಚ್ಛಿಸುತ್ತದೆ. ಹಾಗಾಗಿ ಹರ್ಭಜನ್‍ರನ್ನು ಕೈ ಬಿಡಲಾಯಿತು. ನಂತರದಲ್ಲಿ ಅವರು ಎಂ.ಎಸ್ ಧೋನಿ ನೇತೃತ್ವದಲ್ಲಿ ಮೂರನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಎತ್ತಿಹಿಡಿಯಲು ಸಹಕಾರಿಯಾದರು.

Share This Article
Leave a Comment

Leave a Reply

Your email address will not be published. Required fields are marked *