ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಎಚ್ಚೆತ್ತಿರುವ ಕೇಂದ್ರ ಸರ್ಕಾರ ಕೇಂದ್ರ ಸೇನಾ ಪಡೆಗಳ ಕಾನ್ವಾಯ್ ನಿಯಮವನ್ನು ಬದಲಾವಣೆ ಮಾಡಿ ಆದೇಶ ನೀಡಿದೆ.
ಕೇಂದ್ರೀಯ ಶಸಸ್ತ್ರ ಪಡೆ(ಸಿಎಪಿಎಫ್), ಕೇಂದ್ರಿಯ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್), ರಾಷ್ಟ್ರೀಯ ಭದ್ರತಾ ಪಡೆ(ಎನ್‍ಎಸ್‍ಜಿ) ಯೋಧರ ಕಾನ್ವಾಯ್ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ದೆಹಲಿಯಿಂದ ಶ್ರೀನಗರ, ಶ್ರೀನಗರದಿಂದ ದೆಹಲಿ, ಜಮ್ಮುವಿನಿಂದ ಶ್ರೀನಗರ, ಶ್ರೀನಗರದಿಂದ ದೆಹಲಿಗೆ ತೆರಳುವ ಮಾರ್ಗದಲ್ಲಿ ಸೈನಿಕರನ್ನು ಕರೆದ್ಯೊಯಲು ರಸ್ತೆ ಮಾರ್ಗದ ಬದಲು ವಾಯುಮಾರ್ಗ ಬಳಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಸರ್ಕಾರ ನಿರ್ಧಾರ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಈ ತೀರ್ಮಾನದಿಂದ ಸುಮಾರು 7.80 ಲಕ್ಷ ಸಿಬ್ಬಂದಿ ಪ್ರಯೋಜನ ಪಡೆಯಲಿದ್ದಾರೆ. ಈ ಕುರಿತು ಗೃಹ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಮಾಹಿತಿ ನೀಡಿದೆ.
ಈ ಹಿಂದೆ ವಾಯುಮಾರ್ಗ ಬಳಸಲು ಹಿರಿಯ ಅಧಿಕಾರಿಗಳಿಗೆ ಸಿಮೀತವಾಗಿತ್ತು. ಸದ್ಯ ಹಿರಿಯ ಪೇದೆ, ಪೇದೆ, ಎಎಸ್‍ಐ ಎಲ್ಲಾ ಅಧಿಕಾರಿಗಳು ಕೂಡ ಸೇವೆಯನ್ನು ಪಡೆಯಬಹುದಾಗಿದೆ ಎಂದು ಕೇಂದ್ರ ಸಚಿವ ರಾಜ್‍ನಾಥ್ ಸಿಂಗ್ ಹೇಳಿದ್ದಾರೆ. ಇದು ಸೈನಿಕರ ಪ್ರಯಾಣ, ರಜೆ ಅವಧಿಯ ಪ್ರಯಾಣ ಅವಧಿಯಲ್ಲಿ ಸೈನಿಕರು ಸೇವೆಯಿಂದ ಮನೆಗೆ ತೆರಳುವ ವೇಳೆ ಸೌಲಭ್ಯ ಲಭ್ಯವಾಗಲಿದೆ.
The Ministry of Home Affairs has approved the entitlement of air travel on Delhi-Srinagar, Srinagar-Delhi, Jammu-Srinagar and Srinagar-Jammu sectors to all the personnel of Central Armed Paramilitary Forces.
— गृहमंत्री कार्यालय, HMO India (@HMOIndia) February 21, 2019
This facility is in addition to the existing air courier services for CAPFs that have been steadily extended in all sectors by the MHA to help the jawans cut down on travel time during their journey to and fro from home on leave.
— गृहमंत्री कार्यालय, HMO India (@HMOIndia) February 21, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv