ಬೆಂಗಳೂರು: ಸನ್ನಿ ನೈಟ್ಸ್ ಗೆ ವಿರೋಧ ಆಯ್ತು, ಈಗ ಎಂಜಿ ರೋಡ್‍ನಲ್ಲಿ ಹೊಸ ವರ್ಷ ಆಚರಣೆಗೆ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಎಂಜಿ ರೋಡ್ ನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ನಡೆಸದಂತೆ ಗುರುವಾರ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ.
ಮಹಾತ್ಮಾ ಗಾಂಧಿ ರಸ್ತೆ ಎಂದು ಹೆಸರಿದೆ, ಅಲ್ಲಿ ಕುಡಿದು ಕುಪ್ಪಳಿಸಿ ನಮ್ಮ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿ ಈ ಆಚರಣೆಯೇ ಬಂದ್ ಮಾಡಬೇಕು ಎಂದು ಆಗ್ರಹಿಸಿ ಕಸ್ತೂರಿ ಕನ್ನಡ ಜನ ಪರ ವೇದಿಕೆ ಪ್ರತಿಭಟನೆ ನಡೆಸುವುದಾಗಿ ಹೇಳಿದೆ.
Advertisement
ಹೊಸ ವರ್ಷ ಆಚರಣೆಗೆ ಬಾಲಿವುಡ್ ನ ಹಾಟ್ ಬ್ಯೂಟಿ ಸನ್ನಿ ಲಿಯೋನ್ ಬೆಂಗಳೂರಿಗೆ ಬರುವ ಕುರಿತು ನಗರದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ ಹಿನ್ನೆಲೆಯಲ್ಲಿ ಸ್ವತಃ ಸನ್ನಿ ನಾನು ಬರಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: `ಸನ್ನಿ ನೈಟ್ಸ್’ಗಾಗಿ ಹೈ ಕೋರ್ಟ್ ಮೊರೆಹೋದ ಆಯೋಜಕರು
Advertisement
ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಸನ್ನಿ ಕಾರ್ಯಕ್ರಮಕ್ಕೆ ಪರ್ಮಿಷನ್ ಕೊಡಬಾರದು ಎಂದು ಆಗ್ರಹಿಸಿ ಕನ್ನಡ ಸಂಘಟನೆಗಳು ಪ್ರತಿಭಟಿಸಿತ್ತು. ನನ್ನ ಕಾರ್ಯಕ್ರಮ ನೋಡೋಕೆ ಬಂದ ಫ್ಯಾನ್ಸ್ ಗಳಿಗೆ ಏನೂ ಆಗಬಾರದು. ಅವರ ಸೇಫ್ಟಿ ಮುಖ್ಯ. ಹೀಗಾಗಿ ನಾನು ಕಾರ್ಯಕ್ರಮಕ್ಕೆ ಬರಲ್ಲ ಅಂತಾ ಟ್ವೀಟ್ ಮಾಡಿದ್ದಾರೆ.
Advertisement
ಟ್ವೀಟ್ ನಲ್ಲಿ ಬೆಂಗಳೂರಿನ ಪೊಲೀಸರು ಹೊಸ ವರ್ಷದ ಕಾರ್ಯಕ್ರಮಕ್ಕೆ ನನಗೆ ಹಾಗೂ ನನ್ನ ಕಾರ್ಯಕ್ರಮ ನೋಡಲು ಭಾಗವಹಿಸುವವರಿಗೆ ಸುರಕ್ಷತೆ ಒದಗಿಸಲು ಸಾಧ್ಯವಿಲ್ಲ ಎಂದು ಸಾರ್ವಜನಿಕವಾಗಿ ಈಗಾಗಲೇ ತಿಳಿಸಿದ್ದಾರೆ. ನನಗೆ ಸುರಕ್ಷತೆ ಮುಖ್ಯವಾಗಿರುವ ಕಾರಣ ನಾನು ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ. ದೇವರು ಒಳ್ಳೆಯದನ್ನು ಮಾಡಲಿ. ನಾನು ಎಲ್ಲರ ಸುರಕ್ಷತೆಯನ್ನು ಹಾರೈಸುತ್ತೇನೆ. ಹೊಸ ವರ್ಷದ ಶುಭಾಶಯಗಳು ಅಂತ ಹೇಳಿದ್ದಾರೆ.
Advertisement
ನಾನು ಬರಲ್ಲ: ನನ್ನ ಕಾರ್ಯಕ್ರಮ ನೋಡೋಕೆ ಬಂದ ಫ್ಯಾನ್ಸ್ ಗಳಿಗೆ ಏನೂ ಆಗಬಾರದು. ಅವರ ಸೇಫ್ಟಿ ಮುಖ್ಯ. ಹೀಗಾಗಿ ನಾನು ಕಾರ್ಯಕ್ರಮಕ್ಕೆ ಬರಲ್ಲ ಅಂತಾ ಸನ್ನಿ ಲಿಯೋನ್ ಟ್ವೀಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ ಬೆಂಗಳೂರಿನ ಪೊಲೀಸರು ಹೊಸ ವರ್ಷದ ಕಾರ್ಯಕ್ರಮಕ್ಕೆ ನನಗೆ ಹಾಗೂ ನನ್ನ ಕಾರ್ಯಕ್ರಮ ನೋಡಲು ಭಾಗವಹಿಸುವವರಿಗೆ ಸುರಕ್ಷತೆ ಒದಗಿಸಲು ಸಾಧ್ಯವಿಲ್ಲ ಎಂದು ಸಾರ್ವಜನಿಕವಾಗಿ ಈಗಾಗಲೇ ತಿಳಿಸಿದ್ದಾರೆ. ನನಗೆ ಸುರಕ್ಷತೆ ಮುಖ್ಯವಾಗಿರುವ ಕಾರಣ ನಾನು ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ. ದೇವರು ಒಳ್ಳೆಯದನ್ನು ಮಾಡಲಿ. ನಾನು ಎಲ್ಲರ ಸುರಕ್ಷತೆಯನ್ನು ಹಾರೈಸುತ್ತೇನೆ. ಹೊಸ ವರ್ಷದ ಶುಭಾಶಯಗಳು ಅಂತ ಹೇಳಿದ್ದಾರೆ.
ಸದ್ಯ ಕಾರ್ಯಕ್ರಮದ ಆಯೋಜಕರಾದ ಟೈಮ್ಸ್ ಕ್ರಿಯೇಷನ್ ಸಂಸ್ಥೆ ಪೊಲೀಸರು ಅನುಮತಿ ನೀಡದ್ದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದೆ.