ಮೆಕ್ಸಿಕೋ ಸಿಟಿ: ನೇಪಾಳದ (Nepal) ನಂತರ, ಮೆಕ್ಸಿಕೋದಲ್ಲಿ (Mexico)ಸರ್ಕಾರದ ವಿರುದ್ಧ Gen-Z ಗಳು ಪ್ರತಿಭಟನೆಗೆ ಇಳಿದಿದ್ದಾರೆ. ಹೆಚ್ಚುತ್ತಿರುವ ಅಪರಾಧ, ಭ್ರಷ್ಟಾಚಾರ ಮತ್ತು ಭಾರೀ ಹಿಂಸಾಚಾರವನ್ನು ಖಂಡಿಸಿ ಮೆಕ್ಸಿಕೋ ಸಿಟಿಯಲ್ಲಿ ಬೀದಿಗಿಳಿದಿದ್ದಾರೆ.
ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರ ಸರ್ಕಾರವು ಡ್ರಗ್ ಕಾರ್ಟೆಲ್ (Drug Cartel) ಚಟುವಟಿಕೆಗಳನ್ನು ನಿಗ್ರಹಿಸಲು ವಿಫಲವಾಗಿದೆ ಎಂದು ಪ್ರತಿಭಟನೆಕಾರರು ದೂರಿದ್ದಾರೆ.
In Mexico City, what started as a small protest by Gen Z against the government over its collision with the cartels has quickly grown into a movement much larger than anything the country has seen in years. Makes Jan 6 look like a small protest. pic.twitter.com/QLw4tiLk4v
— Ian Miles Cheong (@ianmiles) November 16, 2025
ಮೈಕೋಕಾನ್‌ನಲ್ಲಿ ಮಾದಕವಸ್ತು ಕಳ್ಳಸಾಗಣೆದಾರರ ವಿರುದ್ಧ ಸಕ್ರಿಯ ಅಭಿಯಾನವನ್ನು ಮುನ್ನಡೆಸುತ್ತಿದ್ದ ಮೇಯರ್ ಕಾರ್ಲೋಸ್ ಮಾಂಜೊ ಅವರ ಹತ್ಯೆಯ ನಂತರ ಪ್ರತಿಭಟನೆ ಈಗ ದೇಶಾದ್ಯಂತ ಹರಡಿದೆ.
ಯುವ ಜನತೆಗೆ ಹೋರಾಟಕ್ಕೆ ವಿರೋಧ ಪಕ್ಷಗಳ ನಾಯಕರಿಂದ ಬೆಂಬಲ ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲೂ ಬೆಂಬಲ ಸಿಕ್ಕಿದ್ದರಿಂದ ಪ್ರತಿಭಟನೆಗೆ ಈಗ ಭಾರೀ ಬಲ ಬಂದಿದೆ.
🚨🇲🇽 | #URGENTE PATRIOTAS MEXICANOS DERRIBARON EL MURO FRENTE AL PALACIO NACIONAL DE MÉXICO: La masiva manifestación se abre camino hacia el Palacio de Gobierno. pic.twitter.com/maCtrk0FHC
— La Derecha Diario (@laderechadiario) November 15, 2025
ಆರಂಭದಲ್ಲಿ ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿತ್ತು. ಆದರೆ ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲುಗಳು, ಪಟಾಕಿ ಎಸೆದ ಪರಿಣಾಮ ಇದು ವಿಕೋಪಕ್ಕೆ ತಿರುಗಿತು. ಭದ್ರತಾ ಪಡೆಗಳು ಅಶ್ರುವಾಯು ಮತ್ತು ಲಾಠಿ ಪ್ರಹಾರ ನಡೆಸಿ ಪ್ರತಿಭಟನೆಯನ್ನು ನಿಯಂತ್ರಿಸಿದ್ದಾರೆ.
ಏನಿದು Gen-Z ಪ್ರತಿಭಟನೆ?
1990 ರ ದಶಕದ ಅಂತ್ಯದಿಂದ 2010 ರ ದಶಕದ ಆರಂಭದವರೆಗೆ ಜನಿಸಿದವರನ್ನು Gen-Z ಗಳು ಎಂದು ಕರೆಯಲಾಗುತ್ತದೆ. ಅಸಮಾನತೆ, ಭ್ರಷ್ಟಾಚಾರದ ವಿರುದ್ಧ ಜಾಗತಿಕ ಶಕ್ತಿಯಾಗಿ ಬೆಳೆದಿದೆ. ಈ ವರ್ಷದ ಆರಂಭದಲ್ಲಿ, ಸಾಮಾಜಿಕ ಮಾಧ್ಯಮ ನಿಷೇಧದ ನಂತರ ನೇಪಾಳದಲ್ಲಿ ನಡೆದ ಬೃಹತ್ ಜೆನ್-ಝಡ್ ಪ್ರತಿಭಟನೆಗಳು ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ರಾಜೀನಾಮೆಗೆ ಕಾರಣವಾಗಿತ್ತು.

