ಮೆಕ್ಸಿಕೊ: ಚಿಕ್ಕ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಹೇಳಿಕೊಡುವ ಪದ್ಧತಿ ಅನೇಕ ದೇಶಗಳಲ್ಲಿ ಜಾರಿಯಲ್ಲಿದೆ. ಅದರಲ್ಲೂ ಅಮೆರಿಕದಂತ ದೇಶಗಳಲ್ಲಿ ಇದಕ್ಕಾಗಿ ಪ್ರತ್ಯೇಕ ಕೋರ್ಸ್‌ಗಳನ್ನೇ ನಡೆಸುತ್ತಿದ್ದಾರೆ. ಮಕ್ಕಳ ಹಂತದಿಂದಲೇ ಲೈಂಗಿಕ ಶಿಕ್ಷಣದ ಬಗ್ಗೆ ತಿಳುವಳಿಕೆ ಮೂಡಿಸುವುದರಿಂದ ಅವರು ಹೆಚ್ಚು ಜಾಗೃತರಾಗುತ್ತಾರೆ ಎನ್ನುವ ಉದ್ದೇಶವೂ ಇದಾಗಿದೆ.
ಹಾಗೆಯೇ ಉತ್ತರ ಅಮೆರಿಕದ ಮೆಕ್ಸಿಕೊ ಶಾಲೆಯೊಂದರಲ್ಲಿ ತರತಿಯಲ್ಲೇ ಶಿಕ್ಷಕನೊಬ್ಬ ಮಕ್ಕಳಿಗೆ ಕಾಂಡೋಮ್ ಧರಿಸುವ ಬಗ್ಗೆ ಪಾಠ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ವೀಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ರಷ್ಯಾ 2 ಲಕ್ಷ ಉಕ್ರೇನ್ ಮಕ್ಕಳನ್ನು ಅಪಹರಿಸಿದೆ – ಝಲೆನ್ಸ್ಕಿ ಗಂಭೀರ ಆರೋಪ
ಶಿಕ್ಷಕನು ಕಾಂಡೋಮ್ ಧರಿಸುವ ಬಗ್ಗೆ ಹೇಳಿಕೊಡುತ್ತಿದ್ದಂತೆ ವಿದ್ಯಾರ್ಥಿಗಳು ಬಿದ್ದು-ಬಿದ್ದು ನಗಲು ಪ್ರಾರಂಭಿಸಿದ್ದಾರೆ. ಮೊದಲಿಗೆ ಶಿಕ್ಷಕರು ಮಾನವ ಗಾತ್ರದ ಬಟ್ಟೆಯನ್ನು ವಿದ್ಯಾರ್ಥಿಯೊಬ್ಬನಿಗೆ ಸುತ್ತಿದ್ದಾರೆ ನಂತರ ಅದನ್ನು ನಿಖರವಾಗಿ ಕಾಂಡೋಮ್ ಹೇಗೆ ಧರಿಸುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದನ್ನೂ ಓದಿ: 1 ಲೀಟರ್ ಅಡುಗೆ ಎಣ್ಣೆ 555 ರೂ., ಕೆಜಿ ತುಪ್ಪ 605 ರೂ.ಗೆ ದಿಢೀರ್ ಏರಿಕೆ
ಗರ್ಭನಿರೋಧಕ ಸಾಧನವನ್ನು ಹೇಗೆ ಸುಲಭವಾಗಿ ಬಳಸಬಹುದು ಎಂಬುದನ್ನು ಪ್ರದರ್ಶಿಸಲು ಶಿಕ್ಷಕರು ಸ್ವಯಂಸೇವಕ ವಿದ್ಯಾರ್ಥಿಯ ಕುತ್ತಿಗೆ ಮತ್ತು ದೇಹದ ಕೆಳಗೆ ದೈತ್ಯ ಬಟ್ಟೆಯ ಹೊದಿಕೆಯನ್ನು ಸುತ್ತಿ ಗುಪ್ತಾಂಗದ ಬಗ್ಗೆ ತಿಳಿಸಿದ್ದಾರೆ.
ಈಗಾಗಲೇ ಜಾಲತಾಣದಲ್ಲಿ ವೀಡಿಯೋ ಹರಿದಾಡಿದ್ದು, ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದಾರೆ. ಕೆಲವರು ಮಕ್ಕಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಚಿಕ್ಕ ವಯಸ್ಸಿನಿಂದಲೇ ತಿಳಿಸಿಕೊಡುವುದರಿಂದ ಅವರು ಜಾಗೃತರಾಗುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.