ಸ್ಯಾನ್ ಪೆಡ್ರೊ ಹುಮೆಲುಲಾ: ದಕ್ಷಿಣ ಮೆಕ್ಸಿಕೋ ಪಟ್ಟಣದ ಮೇಯರ್‌ವೊಬ್ಬರು (Mexican Mayor) ಮೊಸಳೆಯನ್ನು (Crocodile) ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಚಿತ್ರ ಘಟನೆ ಮೆಕ್ಸಿಕೋದಲ್ಲಿ (Mexico) ನಡೆದಿದೆ.
ಮೆಕ್ಸಿಕೋದ ಟೆಹುವಾಂಟೆಪೆಕ್ ಇಸ್ತಮಸ್‌ನಲ್ಲಿರುವ ಸ್ಯಾನ್ ಪೆಡ್ರೊ ಹುವಾಮೆಲುಲಾದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಅವರು ಅಲಿಸಿಯಾ ಆಡ್ರಿಯಾನಾ ಹೆಸರಿನ ಮೊಸಳೆಯನ್ನು ಮದುವೆಯಾಗಿದ್ದಾರೆ. ಆ ಮೂಲಕ ತಮ್ಮ ಪೂರ್ವಜರ ಆಚರಣೆಗಳನ್ನು ಮುಂದುವರಿಸಿದ್ದಾರೆ. ಇದನ್ನೂ ಓದಿ: ಫ್ರಾನ್ಸ್ ಧಗ ಧಗ – ಭದ್ರತೆಗೆ 45 ಸಾವಿರ ಪೊಲೀಸರ ನಿಯೋಜನೆ, 994 ಮಂದಿ ಅರೆಸ್ಟ್
Advertisement
Advertisement
ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ. ಹೀಗಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಪ್ರೀತಿ ಇಲ್ಲದೆ ನೀವು ಮದುವೆಯಾಗಲು ಸಾಧ್ಯವಿಲ್ಲ. ನಾನು ಈ ರಾಜಕುಮಾರಿ ಹುಡುಗಿಯೊಂದಿಗೆ ಮದುವೆಯಾಗಿದ್ದೇನೆ ಎಂದು ಸೋಸಾ ತಿಳಿಸಿದ್ದಾರೆ.
Advertisement
ಮದುವೆಯಂತಹ ಸಂಬಂಧಗಳ ಮೂಲಕ ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ಇಲ್ಲಿನ ಎರಡು ಸ್ಥಳೀಯ ಜನಾಂಗಗಳು ಪುರುಷ ಮತ್ತು ಹೆಣ್ಣು ಸರೀಸೃಪದೊಂದಿಗೆ ವಿವಾಹ ಮಾಡುವ ಪದ್ಧತಿ ಆಚರಿಸಿಕೊಂಡು ಬಂದಿದೆ. ಆದ್ದರಿಂದ ಮೆಕ್ಸಿಕೋ ಮೇಯರ್ ಮೊಸಳೆಯನ್ನು ವರಿಸಿದ್ದಾರೆ. ಇದನ್ನೂ ಓದಿ: 3 ಟ್ರಿಲಿಯನ್ ಡಾಲರ್ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿದ ಆಪಲ್
Advertisement
ಮದುವೆಯ ಸಮಾರಂಭಕ್ಕೆ ಮೊದಲು ಈ ಸರೀಸೃಪವನ್ನು ಮನೆ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ನಿವಾಸಿಗಳು ಅದನ್ನು ಹಿಡಿದುಕೊಂಡು ನೃತ್ಯ ಮಾಡುತ್ತಾರೆ. ವಿವಾಹ ಸಂದರ್ಭದಲ್ಲಿ ಅದಕ್ಕೂ ಬಣ್ಣಬಣ್ಣದ ಬಟ್ಟೆ ತೊಡಿಸಿರುತ್ತಾರೆ.
Web Stories