– ಆಧ್ಯಾತ್ಮಿಕ ಶುದ್ಧೀಕರಣ ಸಮಾರಂಭದಲ್ಲಿ ದುರಂತ
– ವಾಂತಿ ಬೇಧಿಯಿಂದ ಬಳಲಿ ಸಾವನ್ನಪ್ಪಿದ ನಟಿ
ವಾಷಿಂಗ್ಟನ್: ಆಘಾತಕಾರಿ ಘಟನೆಯೊಂದರಲ್ಲಿ ಮೆಕ್ಸಿಕನ್ ಶಾರ್ಟ್ ಫಿಲಂ ನಟಿ ಮಾರ್ಸೆಲಾ ಅಲ್ಕಾಜರ್ ರೊಡ್ರಿಗಸ್ (36) (Marcela Alcazar Rodriguez) ಸಾವನ್ನಪ್ಪಿದ್ದಾರೆ. ಆಧ್ಯಾತ್ಮಿಕ ಶುದ್ಧೀಕರಣ ಆಚರಣೆಯ ಭಾಗವಾಗಿ ನಡೆದ ಕಾರ್ಯಕ್ರಮದಲ್ಲಿ ʻಕಂಬೋʼ ಜಾತಿಗೆ ಸೇರಿದ ಕಪ್ಪೆಯ ವಿಷ ಸೇವಿಸಿ ನಟಿ ಪ್ರಾಣ ಕಳೆದುಕೊಂಡಿದ್ದಾರೆ.
ʻಕಾಂಬೋ’ ಎಂಬ ದಕ್ಷಿಣ ಅಮೆರಿಕಾದ (South American) ಆಧ್ಯಾತ್ಮಿಕ ಶುದ್ಧೀಕರಣ ಸಮಾರಂಭದಲ್ಲಿ ನಟಿ ಭಾಗವಹಿಸಿದ್ದರು. ಈ ಆಚರಣೆಯು ಕಪ್ಪೆ ವಿಷವನ್ನು (Frog Venom) ಸೇವಿಸುವುದನ್ನು ಒಳಗೊಂಡಿರುತ್ತದೆ. ಈ ಕಾರ್ಯಕ್ರಮದಲ್ಲಿ ಶುದ್ಧೀಕರಣದ ಭಾಗವಾಗಿ ಈ ಕಪ್ಪೆಯ ನೀರನ್ನು ಎಲ್ಲರಿಗೂ ನೀಡಲಾಗಿತ್ತು. ಆದ್ರೆ ಈ ಕಪ್ಪೆ ನೀರು ತುಂಬಾನೆ ವಿಷಕಾರಿ. ಇದನ್ನೂ ಓದಿ: ‘ಪುಷ್ಪ 2’ ಪ್ರದರ್ಶನದ ವೇಳೆ ಕಾಲ್ತುಳಿತ: ವಿಷಾದ ವ್ಯಕ್ತಪಡಿಸಿದ ರಶ್ಮಿಕಾ ಮಂದಣ್ಣ
Advertisement
Advertisement
ಕಪ್ಪೆ ನೀರು ಸೇವಿಸಿದ ಆಕೆಗೆ ತೀವ್ರ ಅನಾರೋಗ್ಯ ಕಾಡಿತ್ತು. ವಾಂತಿ, ಭೇದಿ ಕಾಣಿಸಿಕೊಂಡಿತ್ತು. ತಕ್ಷಣ ಆಕೆಯನ್ನ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಬಳಿಕ ಈ ಕಾರ್ಯಕ್ರಮದ ರುವಾರಿಯಾಗಿದ್ದ ಷಾಮನ್ ತಲೆಮರೆಸಿಕೊಂಡಿದ್ದು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.
Advertisement
Advertisement
ಈ ಕಾರ್ಯಕ್ರಮದಲ್ಲಿ ಕಪ್ಪೆಯ ನೀರು ನೀಡಿ ಇದನ್ನು ಕುಡಿದರೆ ದೇಹದಲ್ಲಿನ ಗಾಯಗಳು, ದೇಹ ಶುದ್ಧಿಗೆ ಸಹಕಾರಿಯಾಗುತ್ತದೆ ಎಂದು ನಂಬಲಾಗಿತ್ತು. ವಿಷಕಾರಿ ಕಪ್ಪೆ ಅಮೇಜಾನ್ ಕಾಡುಗಳಲ್ಲಿ ಮಾತ್ರವೇ ಕಂಡುಬರುತ್ತದೆ. ಹಾಗೆ ಇದನ್ನು ಹಿಡಿದು ತಂದು ನೀರಿನಲ್ಲಿ ಬಿಟ್ಟಿರುತ್ತಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಫಡ್ನವಿಸ್ ರಾಜ್ಯಭಾರ ಶುರು – ಡಿಸಿಎಂಗಳಾಗಿ ಶಿಂಧೆ, ಪವಾರ್ ಪದಗ್ರಹಣ
ಮೊದಲು 1 ಲೀಟರ್ ಕಪ್ಪೆ ನೀರನ್ನು ಕುಡಿಯಲು ಹೇಳಲಾಗುತ್ತದೆ. ಇದಾದ ಬಳಿಕ ದೇಹದ ಮೇಲೆ ಸಣ್ಣದಾಗಿ ತೂತು ಮಾಡಲಾಗುತ್ತದೆ. ಅದಕ್ಕೆ ಕಪ್ಪೆಯ ಲೋಳೆಯನ್ನು ಹಚ್ಚಿ ಪ್ರಾರ್ಥನೆ ಮಾಡಲಾಗುತ್ತದೆ. ಈ ನಟಿಗೂ ಕೂಡ ಇದೇ ವಿಧಾನದಲ್ಲಿ ನೀರು ಕುಡಿಸಿ ಅನಂತರ ಲೋಳೆಯನ್ನು ಕೈ ಮೇಲೆ ಹಾಕಲಾಗಿತ್ತು. ಆದ್ರೆ ಇದರಿಂದ ಆಕೆ ಆಸ್ಪತ್ರೆ ಸೇರಬೇಕಾಯಿತು.
ಈ ನೀರು ಕುಡಿದ ತಕ್ಷಣ ಆಕೆಯಲ್ಲಿ ರಕ್ತದೊಡ್ಡತ ಹೆಚ್ಚಾಗಿತ್ತು, ವಿಷ ನೇರವಾಗಿ ಹೃದಯ ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರಲು ಆರಂಭಿಸಿತ್ತು. ಆಕೆಯನ್ನು ಆಸ್ಪತ್ರೆಗೆ ಸೇರಿಸುವಾಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಮೂರ್ಛೆ, ತಲೆತಿರುಗುವಿಕೆ ಉಂಟಾಗಿತ್ತು, ತುಟಿಗಳು ಮತ್ತು ಮುಖ ಊದಿಕೊಂಡಿತ್ತು. ಆಕೆಯನ್ನ ಆಸ್ಪತ್ರೆಗೆ ದಾಖಲಿಸುವ ವೇಳೆಗೆ ತಡವಾಗಿದ್ದರಿಂದ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಜನರಿಗೆ ಕಾನೂನಿನ ಬಗ್ಗೆ ಗೌರವವೂ ಇಲ್ಲ, ಭಯವೂ ಇಲ್ಲ: ರಸ್ತೆ ಅಪಘಾತಗಳ ಬಗ್ಗೆ ಗಡ್ಕರಿ ಆತಂಕ