ಬೆಂಗಳೂರು: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಪದ್ಯದ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರವನ್ನು ವಿಸ್ತರಿಸಲಾಗಿದೆ.
Advertisement
ಜೂನ್ 19ರಂದು ಭಾರತ – ದಕ್ಷಿಣ ಆಫ್ರಿಕಾ ನಡುವಿನ ಕಡೆಯ ಟಿ20 ಪಂದ್ಯ ನಡೆಯಲಿದೆ. ಇದರಿಂದ ನಗರದ ವಿವಿಧೆಡೆ ವೀಕ್ಷಣೆಗೆ ಅವಕಾಶ ವಿರುತ್ತದೆ. ವೀಕ್ಷಣೆ ಮುಗಿದ ನಂತರ ಮನೆಗೆ ತೆರಳುವವರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಹೆಚ್ಚುವರಿ ಸಮಯ ನಿಗದಿಗೊಳಿಸಲಾಗಿದೆ. ಇದನ್ನೂ ಓದಿ: ಸೋನಿಯಾ ಗಾಂಧಿಗೆ ಮನೆ ಬೇಕಿದ್ರೆ ಇಂದೇ ಅರ್ಜಿ ಸಲ್ಲಿಸಿ: ಡಿಕೆಶಿಗೆ ಬಿಜೆಪಿ ಟಾಂಗ್
Advertisement
Advertisement
ಅಂದು ರಾತ್ರಿ 1.30ರ ವರೆಗೆ ಮೆಟ್ರೋ ಸಂಚಾರ ಇರಲಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಪೇಪರ್ ಟಿಕೆಟ್ ವ್ಯವಸ್ಥೆಯನ್ನು ಮಾಡಲಾಗಿದೆ. ರಾತ್ರಿ 10 ಗಂಟೆಯ ನಂತರ ಪೇಪರ್ ಟಿಕೆಟ್‌ಗೆ ಮಾನ್ಯತೆ ನೀಡಲಾಗುತ್ತದೆ. ಎಲ್ಲ ನಿಲ್ದಾಣಗಳಿಂದ 50 ರೂಪಾಯಿ ಟಿಕೆಟ್ ವ್ಯವಸ್ಥೆ ಮಾಡಲಿದ್ದು, ನೇರಳೆ ಮತ್ತು ಹಸಿರು ಮಾರ್ಗದಲ್ಲಿ ರಾತ್ರಿ 1.30ರ ವರೆಗೆ ಮೆಟ್ರೋ ರೈಲು ಸಂಚರಿಸಲಿದೆ.