ಬೆಂಗಳೂರು: ಬಿಎಂಆರ್‌ಸಿಎಲ್ (BMRCL) ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ ಬೆನ್ನಲ್ಲೇ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿದೆ.
ಗುರುವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮಹಿಳಾ ಐಪಿಎಲ್ ಪಂದ್ಯ ವೀಕ್ಷಣೆ ಸಂದರ್ಭದಲ್ಲೂ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಆರ್‌ಸಿಬಿ ಹಾಗೂ ಗುಜರಾತ್ ನಡುವಿನ ಕ್ರಿಕೆಟ್ ಪಂದ್ಯ ವೀಕ್ಷಿಸಲು ಬಹುತೇಕ ಜನರು ಮೆಟ್ರೋ ಮೂಲಕವೇ ಬಂದಿದ್ದರು. ಆದರೆ ಈ ಹಿಂದಿಗಿಂತ ಕಡಿಮೆ ಸಂಖ್ಯೆಯಲ್ಲಿ ಜನರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಇದನ್ನೂ ಓದಿ: ಮಾ.1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
Advertisement
Advertisement
ಮಹಾ ಶಿವರಾತ್ರಿದಂದು ಮೆಟ್ರೋ ಪ್ರಯಾಣಿಕರ ಸಂಖ್ಯೆ 5.20 ಲಕ್ಷಕ್ಕಿಳಿದಿದೆ. ದರ ಏರಿಕೆಗಿಂತ ಮೊದಲು ವಾರದ ದಿನಗಳಲ್ಲಿ ಸರಾಸರಿ 8.5 ಲಕ್ಷ ಪ್ರಯಾಣಿಕರ ಓಡಾಟವಿತ್ತು. ದರ ಏರಿಸಿದ ಬಳಿಕ ಪ್ರತಿದಿನ ಸರಾಸರಿ 1.20 ಲಕ್ಷದಷ್ಟು ಕಡಿಮೆಯಾಗಿತ್ತು. ಮಂಗಳವಾರದಂದು 7.82 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಇದನ್ನೂ ಓದಿ: ನೌಕರರ ಖಾತೆಗೆ ಕನ್ನ – ಮಂಡ್ಯ ಡಿಸಿಸಿ ಬ್ಯಾಂಕ್ ವಿರುದ್ಧ ಗಂಭೀರ ಆರೋಪ
Advertisement
ಪ್ರತಿ ಭಾನುವಾರ ಮತ್ತು ರಜಾ ದಿನಗಳಲ್ಲಿ 7 ಲಕ್ಷದ ಆಸುಪಾಸಿನಲ್ಲಿ ಪ್ರಯಾಣಿಕರ ಸಂಖ್ಯೆ ಇರ್ತಿತ್ತು. ದರ ಏರಿಕೆಯ ಬಳಿಕ ಸೋಮವಾರದಿಂದ ಶುಕ್ರವಾರದವರೆಗೆ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ 7.74 ಲಕ್ಷದಷ್ಟು ಇರುತ್ತಿತ್ತು. ಆದ್ರೆ ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ – 2 ದಿನದ ಹಿಂದೆ ಬೆಂಗಳೂರಿಗೆ 10,000 ಫಾರಂ ಕೋಳಿ ಸಾಗಾಟ
Advertisement
ಮೆಟ್ರೋ ದರ ಏರಿಕೆಯಾಗಿ ಇವತ್ತಿಗೆ 20 ದಿನವಾಗಿದೆ. ದರ ಏರಿಕೆ ಹಿನ್ನೆಲೆ ಸುಮಾರು ಒಂದು ಲಕ್ಷದವರೆಗೂ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಮೆಟ್ರೋ ದರ ಏರಿಕೆಗೂ ಮುನ್ನ 8.5 ಲಕ್ಷ ಪ್ರಯಾಣಿಕರು ಸಂಚಾರ ಮಾಡುತ್ತಿದ್ದರು. ದರ ಏರಿಕೆ ಆದ ಮೇಲೆ 7.5 ರಿಂದ 7.6 ಲಕ್ಷದವರೆಗೂ ಕುಸಿದಿದೆ. ದರ ಏರಿಕೆಗೂ ಮುನ್ನ ಫೆ.03 ರಂದು 8.7 ಲಕ್ಷ ಪ್ರಯಾಣಿಕರು ಸಂಚಾರ ಮಾಡಿದ್ದರು. ಇದನ್ನೂ ಓದಿ: ಮಹಾ ಕುಂಭ ಮೇಳ | ಡೇರೆಯಲ್ಲಿ ಅಗ್ನಿ ಅವಘಡ – ಓರ್ವನಿಗೆ ಗಾಯ
ಕಳೆದ ಹತ್ತು ದಿನಗಳಲ್ಲಿ ಇಳಿಕೆಯಾಗಿರುವ ಮೆಟ್ರೋ ಪ್ರಯಾಣಿಕರ ಸಂಖ್ಯೆ
ಫೆ. 15 – 6.9 ಲಕ್ಷ ಪ್ರಯಾಣಿಕರು ಸಂಚಾರ
ಫೆ. 16 – 5.6 ಲಕ್ಷ ಪ್ರಯಾಣಿಕರು ಸಂಚಾರ
ಫೆ. 19 – 7.6 ಲಕ್ಷ ಪ್ರಯಾಣಿಕರು ಸಂಚಾರ
ಫೆ. 20 – 7.56 ಲಕ್ಷ ಪ್ರಯಾಣಿಕರು ಸಂಚಾರ
ಫೆ. 21 – 7.89 ಲಕ್ಷ ಪ್ರಯಾಣಿಕರು ಸಂಚಾರ
ಫೆ. 22 – 6.75 ಲಕ್ಷ ಪ್ರಯಾಣಿಕರು ಸಂಚಾರ
ಫೆ. 23 – 4.94 ಲಕ್ಷ ಪ್ರಯಾಣಿಕರು ಸಂಚಾರ
ಫೆ. 24 – 8.02 ಲಕ್ಷ ಪ್ರಯಾಣಿಕರು ಸಂಚಾರ
ಫೆ. 25 – 7.83 ಲಕ್ಷ ಪ್ರಯಾಣಿಕರು ಸಂಚಾರ
ಫೆ. 26 – 5.02 ಲಕ್ಷ ಪ್ರಯಾಣಿಕರು ಸಂಚಾರ