– ಪಿಲ್ಲರ್ ಸುತ್ತಲು 4 ಸ್ಟಕ್ಚರ್ ಅಳವಡಿಕೆ
ಬೆಂಗಳೂರು: ನಗರದ ಎಂಜಿ ರಸ್ತೆಯಲ್ಲಿ ಮೆಟ್ರೋ ಪಿಲ್ಲರ್ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ರಾತ್ರಿಯಿಡೀ ಬಿಎಂಆರ್ ಸಿಎಲ್ ಸಿಬ್ಬಂದಿಯಿಂದ ದುರಸ್ಥಿ ಕಾರ್ಯ ಮಾಡಲಾಯಿತು.
ರಾತ್ರಿ 11 ಗಂಟೆಗೆ ಮೆಟ್ರೋ ಸಂಚಾರ ಸ್ಥಗಿತವಾದ ಬಳಿಕ ದುರಸ್ಥಿ ಕಾರ್ಯ ಆರಂಭಿಸಿದ ಸಿಬ್ಬಂದಿ ಮುಂಜಾನೆವರೆಗೂ ದುರಸ್ಥಿ ಕಾರ್ಯ ಮಾಡಿದ್ರು. ಪಿಲ್ಲರ್ ಬಿರಕು ಬಿಟ್ಟಿರುವ ಸ್ಥಳದ ಎರಡು ಕಡೆ ರಸ್ತೆ ಬ್ಲಾಕ್ ಮಾಡಿ ಕೆಲಸ ಮಾಡಲಾಯಿತು ಬಿರಕುಕೊಂಡಿರುವ ಪಿಲ್ಲರ್ ಸುತ್ತಲು ನಾಲ್ಕು ಸಪೋರ್ಟಿಂಗ್ ಸ್ಟಕ್ಚರ್ ಗಳನ್ನ ಅಳವಡಿಸಿದ್ದಾರೆ. ಇದನ್ನೂ ಓದಿ: ನಮ್ಮ ಮೆಟ್ರೋ ಕಂಬದಲ್ಲಿ ಬಿರುಕು ಮೂಡಿದ್ಯಾಕೆ : ಇಲ್ಲಿದೆ ಪ್ರಮುಖ ಕಾರಣಗಳು
ಬಿಎಂಆರ್‍ಸಿಎಲ್ ಅಧಿಕಾರಿಗಳು ಪಿಲ್ಲರ್ ಬಿರಕುಗೊಂಡಿರೋದ್ರಿಂದ ಕೋಲ್ಕತ್ತಾ ಹಾಗೂ ದೆಹಲಿ ತಜ್ಞರರೊಂದಿಗೆ ಚರ್ಚೆ ಮಾಡಿ ಅವರ ಅಭಿಪ್ರಾಯದಂತೆ ದುರಸ್ಥಿ ಕಾರ್ಯ ಮಾಡಲಾಗಿದೆ ಎನ್ನಲಾಗುತ್ತಿದೆ. ದುರಸ್ಥಿ ಕಾರ್ಯ ಬರದಿಂದ ಸಾಗುತ್ತಿರುವ ಹಿನ್ನೆಲೆ ಎಂಜಿ ರಸ್ತೆಯಿಂದ ಹಲಸೂರು, ಇಂದಿರಾ ನಗರ ಮಾರ್ಗವಾಗಿ ಬೆನ್ನಿಗನಹಳ್ಳಿ ಒಡಾಡುವ ಟ್ರೈನ್ ಇಂದು ಕೊಂಚ ತಡವಾಗಿ ಆರಂಭವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಮೂರು ದಿನದ ಹಿಂದೆಯೇ ನನ್ನ ಗಮನಕ್ಕೆ ಬಂದಿದೆ: ಸಿಎಂ ಎಚ್‍ಡಿಕೆ
ಸದ್ಯ ಎಂಜಿ ರಸ್ತೆ ಮಾರ್ಗವಾಗಿ ಓಡಾಡುವ ಮೆಟ್ರೋದಲ್ಲಿ ಜನರ ಒಡಾಡಲು ಕೊಂಚ ಹಿಂದೇಟು ಹಾಕುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv