ಮ್ಯಾಡ್ರಿಡ್: ಈ ವಿಡಿಯೋ ನೋಡಿದರೆ ಒಂದು ಕ್ಷಣ ನೀವು ಖಂಡಿತ ಬೆಚ್ಚಿ ಬೀಳುತ್ತೀರಿ.
ಈ ಘಟನೆ ಸ್ಪೇನ್‍ನ ಉತ್ತರ ಮ್ಯಾಡ್ರಿಡ್‍ನ ಎಸ್ಟ್ರೆಚೊ ಮೆಟ್ರೋ ರೈಲು ನಿಲ್ದಾಣದಲ್ಲಿ ನಡೆದಿದ್ದು, ಮಹಿಳೆಯೊಬ್ಬಳು ಮೊಬೈಲ್‍ನಲ್ಲಿ ತಲ್ಲೀನರಾಗಿದ್ದಾಗ ಅರಿವಿಲ್ಲದೆ ಪ್ಲಾಟ್‍ಫಾರ್ಮ್ ಅಂಚಿನಿಂದ ಹಳಿಗೆ ಬಿದ್ದಿದ್ದಾಳೆ. ತಕ್ಷಣವೇ ಮೆಟ್ರೋ ರೈಲು ಆಗಮಿಸಿದೆ.
Advertisement
ರೈಲು ಮಹಿಳೆಯ ಮೇಲೆ ಹರಿದಿದೆಯೇ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸಿಲ್ಲ. ಆದರೆ ಈ ಘಟನೆಯಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಮೆಟ್ರೋ ಡಿ ಮ್ಯಾಡ್ರಿಡ್ ಸ್ಪಷ್ಟಪಡಿಸಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
Advertisement
⚠ Por tu seguridad, levanta la vista del móvil cuando vayas caminando por el andén.#ViajaSeguro #ViajaEnMetro pic.twitter.com/0XeQHPLbHa
— Metro de Madrid (@metro_madrid) October 24, 2019
Advertisement
ಘಟನೆಯ ಸಿಸಿ ಟಿವಿ ದೃಶ್ಯಾವಳಿಯನ್ನು ಮೆಟ್ರೋ ಡಿ ಮ್ಯಾಡ್ರಿಡ್ ಬಿಡುಗಡೆಗೊಳಿಸಿದೆ. ರೈಲು ನಿಲ್ದಾಣಗಳಲ್ಲಿ ಈ ವಿಡಿಯೋ ಪ್ರಸಾರ ಮಾಡುವ ಮೂಲಕ ಪ್ರಯಾಣಿಕರಿಗೆ ಜಾಗೃತವಾಗಿ ಇರುವಂತೆ ಎಚ್ಚರಿಕೆ ನೀಡುತ್ತಿದೆ.
Advertisement
ಈ ಪ್ರಕರಣದಲ್ಲಿ ಮಹಿಳೆಗೆ ಏನೂ ಆಗಿಲ್ಲ, ಮಹಿಳೆ ಚೆನ್ನಾಗಿದ್ದಾರೆ ಎಂದು ಮಟ್ರೋ ಡಿ ಮ್ಯಾಡ್ರಿಡ್ ಈ ವಿಡಿಯೋ ತುಣುಕನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.