ಬೆಂಗಳೂರು: ಬೆಂಗಳೂರಲ್ಲಿ (Bengaluru) ನಿನ್ನೆ ನಡೆದ ಮೆಟ್ರೋ ಪಿಲ್ಲರ್ ದುರಂತಕ್ಕೆ ಸಂಬಂಧಿಸಿದಂತೆ ಹೆಸರುಗಳನ್ನು ಎಫ್ಐಆರ್ ದಾಖಲಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಮೆಟ್ರೋ (Metro) ದುರಂತಕ್ಕೆ ಸಂಬಂಧಿಸಂತೆ ನಿನ್ನೆ ಎಫ್ಐಆರ್ ಆಗಿತ್ತು. ಆದರೆ ಹೆಸರುಗಳನ್ನ ಉಲ್ಲೇಖಿಸಿ FIR ರಿಜಿಸ್ಟರ್ ಆಗಿರಲಿಲ್ಲ. ಆದ್ರೀಗ ಎಫ್ಐಆರ್ನಲ್ಲಿ ಹೆಸರು ಉಲ್ಲೇಖ ಆಗಿದೆ, 8 ಮಂದಿ ಹೆಸರನ್ನ ಸೇರಿಸಿ ಎಫ್ಐಆರ್ ದಾಖಲಾಗಿದೆ ಎಂದು ಸ್ಪಷ್ಟಪಡಿಸಿದರು.
Advertisement
Advertisement
ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿಯ ಜೆಐ ಪ್ರಭಾಕರ್, ಚೈತನ್ಯ, ಮಥಾಯಿ, ವಿಕಾಸ್ ಸಿಂಗ್, ಸೂಪರ್ ವೈಸರ್ ಲಕ್ಷ್ಮೀಪತಿ, BMRCL ಎಂಜಿನಿಯರ್ ವೆಂಕಟೇಶ್ ಶೆಟ್ಟಿ, ಮಹೇಶ್ ಬೆಂಡೆಕೇರಿ ಇವರ ಮೇಲೆ ಎಫ್ಐಆರ್ ಆಗಿದೆ ಎಂದು ಮಾಹಿತಿ ನೀಡಿದ್ರು. ಇವರ ಮೇಲೆ ಕ್ರಮ ಆಗಲಿದೆ, ನಿರ್ಲಕ್ಷ್ಯದಿಂದ ಪ್ರಾಣ ಹಾನಿಯಾಗಿದೆ. ಈ ರೀತಿ ಆಗಬಾರದು, ಅದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದೆ 8 ಕಿ.ಮೀ. ಶವ ಹೊತ್ತು ನಡೆದ ಗ್ರಾಮಸ್ಥರು!
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k