ಬೆಂಗಳೂರು: ನಮ್ಮ ಮೆಟ್ರೋ (Namma Metro) ದರ ಏರಿಕೆ ಪರಿಣಾಮ ವೀಕೆಂಡ್‌ನಲ್ಲಿಯೂ ಜನರು ಮೆಟ್ರೋದಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ.
ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ್ದರಿಂದ ಜನರು ಇದೀಗ ಸ್ವಂತ ವಾಹನ ಹಾಗೂ ಬಿಎಂಟಿಸಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ವೀಕೆಂಡ್‌ನಲ್ಲಿಯೂ ಮೆಟ್ರೋದಲ್ಲಿ ಪ್ರಯಾಣಿಕರು ಇಲ್ಲದೇ ಖಾಲಿ ಹೊಡೆಯುತ್ತಿವೆ.ಇದನ್ನೂ ಓದಿ: ಎಲಾನ್ ಮಸ್ಕ್ ಅವರ 13ನೇ ಮಗುವಿಗೆ ಜನ್ಮ ನೀಡಿದ್ದೇನೆ: ಆಶ್ಲೇ ಹೇಳಿಕೆಗೆ ಮೌನ ಮುರಿದ ಮಸ್ಕ್
ಈ ಮೊದಲು ವೀಕೆಂಡ್‌ನಲ್ಲಿ ಓರಿಯನ್ ಮಾಲ್, ಇಸ್ಕಾನ್ ಟೆಂಪಲ್‌ಗೆ ಬರುವ ಜನರು ಹೆಚ್ಚಾಗಿ ಮೆಟ್ರೋದಲ್ಲಿ ಬರುತ್ತಿದ್ದರು. ಆದರೆ ಇವತ್ತು ಮೆಟ್ರೋದಲ್ಲಿ ಪ್ರಯಾಣಿಕರಿಲ್ಲ. ಹೀಗಾಗಿ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದ ಬಳಿ ಪ್ರಯಾಣಿಕರೇ ಇಲ್ಲದಂತಾಗಿದ್ದು, ಮೆಟ್ರೋದಲ್ಲಿ ಪ್ರಯಾಣ ಮಾಡಲು ಜನರ ಹಿಂಜರಿಯುತ್ತಿದ್ದಾರೆ.
ಕಳೆದ ಭಾನುವಾರ ನಮ್ಮ ಮೆಟ್ರೋ ಟಿಕೆಟ್ ದರ 46% ಅಂದರೆ ಮೆಟ್ರೋ ಪ್ರಯಾಣ ದರ ಗರಿಷ್ಠ 90 ರೂ., (30. ಕಿ.ಮೀ) ಕನಿಷ್ಠ 10 ರೂ.ಗೆ (0-2 ಕಿ.ಮೀ) ಏರಿಕೆಯಾಗಿತ್ತು.ಇದನ್ನೂ ಓದಿ: ಅಯೋಧ್ಯೆಗೆ ತೆರಳಿದ್ದ ಕಾರಿನ ಗ್ಲಾಸ್ ಒಡೆದು ಕಳ್ಳತನ – 10 ಮೊಬೈಲ್, 20,000 ರೂ. ದೋಚಿದ ಖದೀಮರು