ನವದೆಹಲಿ: ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆಯ ಸಚಿವ ಎಂಜೆ.ಅಕ್ಬರ್ ಹಾಕಿರುವ ಮಾನನಷ್ಟ ಮೊಕದ್ದಮೆ ಹಿನ್ನೆಲೆಯಲ್ಲಿ ಪತ್ರಕರ್ತೆ ಪ್ರಿಯಾ ರಮಣಿ ಸತ್ಯವೇ ನನ್ನ ರಕ್ಷಣೆ ಮಾಡಲಿದೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
#Metoo ಅಭಿಯಾನದ ಮೂಲಕ ತನ್ನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದರು. ಅಲ್ಲದೇ ಇಂದು ವಕೀಲ ಕರಣ್ ಜವಾಲ್ ರ ಮೂಲಕ ಪತ್ರಕರ್ತೆ ಪ್ರಿಯಾ ರಮಣಿ ಸೇರಿದಂತೆ ಒಟ್ಟು 11 ಜನರ ಮೇಲೆ ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
- Advertisement 2-
https://twitter.com/priyaramani/status/1051817717467045890
- Advertisement 3-
ಕೇಂದ್ರ ಸಚಿವರ ಕಾನೂನು ಹೋರಾಟಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಪ್ರಿಯಾ ರಮಣಿ, ಸಚಿವರ ಈ ನಡೆಯಿಂದ ನನಗೆ ಬಹಳ ನೋವಾಗಿದ್ದು, ಮಹಿಳೆಯರ ಮೇಲೆ ಅನವಶ್ಯಕವಾಗಿ ಆರೋಪ ಮಾಡಿ, ಅವರನ್ನು ರಾಜಕೀಯ ಪಿತೂರಿಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವ ಮೂಲಕ ಅವರ ನಿಲುವನ್ನ ಸ್ಪಷ್ಟ ಪಡಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಎಂಜೆ ಅಕ್ಬರ್
- Advertisement 4-
ಅಕ್ಬರ್ ರವರು ತಮ್ಮ ಮೇಲಿರುವ ಆರೋಪಗಳನ್ನು ತಳ್ಳಿಹಾಕಿ, ಆರೋಪ ಮಾಡಿದ ಮಹಿಳೆಯರನ್ನ ಬೆದರಿಸುತ್ತಿದ್ದಾರೆ. ಆರೋಪ ಮಾಡಿದವರಿಗೆ ಕಿರುಕುಳ ನೀಡುವ ಮೂಲಕ ಬಾಯಿ ಮುಚ್ಚಿಸುವ ಯತ್ನ ಮಾಡುತ್ತಿದ್ದಾರೆ. ನನ್ನ ಮೇಲೆ ಹಾಕಿರುವ ಮೊಕದ್ದಮೆಯ ವಿರುದ್ಧ ಹೋರಾಡಲು ನಾನು ಸಿದ್ದಳಿದ್ದೇನೆ. “ಸತ್ಯ ಮತ್ತು ಕೇವಲ ಸತ್ಯವೇ ನನ್ನನ್ನು ರಕ್ಷಣೆ” ಮಾಡಲಿದೆ ಎಂದು ಬರೆದುಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv