ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕೇಂದ್ರ ವಿದೇಶಾಂಗ ವ್ಯವಹಾರ ರಾಜ್ಯ ಸಚಿವ ಎಂ.ಜೆ.ಅಕ್ಬರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
#MeToo ಅಭಿಯಾನದ ಮೂಲಕ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿಯವರು ವಿರುದ್ಧ ಸಚಿವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಭಾನುವಾರ ನೈಜೀರಿಯಾದಿಂದ ವಾಪಾಸ್ಸಾದ ಅವರು ಇಂದು ತಮ್ಮ ವಕೀಲ ಕರಣ್ ಜವಾಲ್ ರ ಮೂಲಕ ಪತ್ರಕರ್ತೆ ಪ್ರಿಯಾ ರಮಣಿ ಸೇರಿದಂತೆ ಒಟ್ಟು 11 ಜನರ ಮೇಲೆ ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
MJ Akbar files defamation case against Priya Ramani
Read @ANI story | https://t.co/cOgfZeKGm7 pic.twitter.com/AjoELRqJgZ
— ANI Digital (@ani_digital) October 15, 2018
ಘಟನೆ ಕುರಿತು ಭಾನುವಾರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಇದಕ್ಕೆ ತಕ್ಕ ಉತ್ತರವನ್ನೇ ಹೇಳುತ್ತೇನೆ ಎಂದು ಹೇಳಿದ್ದರು. ಪತ್ರಕರ್ತೆ ಪ್ರಿಯಾ ರಮಣಿ ಮೇಲೆ ಐಪಿಸಿ ಸೆಕ್ಷನ್ 499 (ಮಾನಹಾನಿ) ಹಾಗೂ 500 (ಮಾನಹಾನಿ ದಂಡನೆ)ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಒಂದು ವೇಳೆ ಆರೋಪ ಸಾಬೀತಾದರೆ ಕನಿಷ್ಠ 2 ವರ್ಷಗಳ ಜೈಲು ಶಿಕ್ಷೆಯಾಗುತ್ತದೆ.
ಏನಿದು ಪ್ರಕರಣ?:
ಸಚಿವ ಅಕ್ಬರ್ ವಿರುದ್ಧ ಪತ್ರಕರ್ತೆ ಪ್ರಿಯಾ ರಮಣಿ ಅವರು ಮೊದಲು ಆರೋಪ ಮಾಡಿದ್ದರು. ಎಂಜಿ ಅಕ್ಬರ್ ಕತೆಯೊಂದಿಗೆ ಇದನ್ನು ಆರಂಭಿಸುತ್ತೇನೆ. ಆದರೆ ಅವರ ಹೆಸರನ್ನು ಉಲ್ಲೇಖಿಸಿಲ್ಲ, ಏಕೆಂದರೆ ಅವರೇನೂ ಮಾಡಿಲ್ಲ. ಈ ಬೇಟೆಗಾರನಿಂದ ಅನೇಕ ಮಹಿಳೆಯರಿಗೆ ಕೆಟ್ಟ ಅನುಭವ ಆಗಿರಬಹುದು. ಬಹುಶಃ ಅವರು ಅ ಹಂಚಿಕೊಳ್ಳಬಹುದು ಎಂದು ಬರೆದು ಅಕ್ಟೋಬರ್ 8 ರಂದು ಟ್ವೀಟ್ ಮಾಡಿದ್ದರು. ಇದನ್ನೂ ಓದಿ: #MeToo ಅಭಿಯಾನಕ್ಕೆ ಜಯ – ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್ ರಾಜೀನಾಮೆ?
https://twitter.com/priyaramani/status/1049279608263245824
ಅಷ್ಟೇ ಅಲ್ಲದೆ ತಮ್ಮ ಮೇಲಾದ ಲೈಂಗಿಕ ಕಿರುಕುಳ ಕುರಿತು 2017 ರ ಅಕ್ಟೋಬರ್ ನಲ್ಲಿ ಲೇಖನವೊಂದನ್ನು ಪ್ರಿಯಾ ರಮಣಿ ಬರೆದಿದ್ದರು. ಪ್ರಿಯಾ ರಮಣಿ ಆರೋಪದ ಬೆನ್ನಲ್ಲೇ ಪ್ರೇರಣಾ ಸಿಂಗ್ ಬಿಂದ್ರಾ, ಘಜಾಲಾ ವಹಾಬ್, ಶುತಾಪಾ ಪಾಲ್, ಅಂಜು ಭಾರ್ತಿ, ಸುಪರ್ಣಾ ಶರ್ಮಾ, ಶುಮಾ ರಾಹಾ, ಮಾಲಿನಿ ಭೂಪ್ತಾ, ಕನಿಕಾ ಗೆಹ್ಲೋಟ್, ಕಾದಂಬರಿ ಎಂ.ವಾಡೆ, ಮಜಿಲಿ ಡೆ ಪ್ಯೂ ಕಾಂಪ್ ಮತ್ತು ರೂಥ್ ಡೇವಿಡ್ ರವರು ಸಹ ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv