ಮಂಗಳೂರು: ಸರ್ಕಾರ ಉಚಿತ ವಿದ್ಯುತ್ (200 Unit Free Electricity) ಕೊಡೋಕೆ ಮುಂದಾಗಿರೋ ನಡುವೆ ಮಂಗಳೂರಿನ ಉಳ್ಳಾಲ ನಿವಾಸಿಯೋರ್ವರಿಗೆ ಬರೋಬ್ಬರಿ 7 ಲಕ್ಷದ 71 ಸಾವಿರ ಬಿಲ್ (Electricity Bill) ಬಂದು ಶಾಕ್ ಕೊಟ್ಟಿದೆ.
ಉಳ್ಳಾಲಬೈಲ್ ನಿವಾಸಿ ಸದಾಶಿವ ಆಚಾರ್ಯ (Sadashiva Acharya) ಅವರಿಗೆ ಪ್ರತಿ ತಿಂಗಳು ಮೂರು ಸಾವಿರದಷ್ಟು ವಿದ್ಯುತ್ ಬಿಲ್ ಬರುತ್ತಿದ್ದು, ಇದೀಗ ಮೇ ತಿಂಗಳ ಹೊಸ ಬಿಲ್ ಬಂದಿದ್ದು ಅದರಲ್ಲಿ 99,338 ಯುನಿಟ್ ವಿದ್ಯುತ್ ಖರ್ಚಾಗಿದೆ ಎಂದು ಬರೋಬ್ಬರಿ 7 ಲಕ್ಷದ 71 ಸಾವಿರದ 72 ರೂ. ಎಂದು ನಮೂದಾಗಿದೆ.
Advertisement
Advertisement
ಬಿಲ್ ಮೊತ್ತ ನೋಡಿ ಶಾಕ್ ಆದ ಸದಾಶಿವ ಆಚಾರ್ಯ ಅವರು ಬಿಲ್ ರೀಡರ್ ಬಳಿ ಕೇಳಿದ್ದು, ಅದನ್ನೆಲ್ಲ ಮೆಸ್ಕಾಂ ಕಚೇರಿ (MESCOM Office) ಗೆ ಕೇಳಿ ಎಂದಿದ್ದಾರೆ. ಬಿಲ್ ರೀಡರ್ ನ ಎಡವಟ್ಟಿನಿಂದಾಗಿ ಈ ರೀತಿ ಬಿಲ್ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ಗೃಹಲಕ್ಷ್ಮಿಗೆ ಅರ್ಜಿ ಸ್ವೀಕಾರ ಪ್ರಕ್ರಿಯೆ ವಿಳಂಬ- ನಾಲ್ಕೈದು ದಿನದ ಬಳಿಕ ಆದೇಶವೆಂದ ಸಚಿವೆ
Advertisement
Advertisement
ಕಾಂಗ್ರೆಸ್‍ನ ಗ್ಯಾರಂಟಿ (Congress Guarantee) ಯೋಜನೆಗಳಲ್ಲಿ 200 ಯುನಿಟ್ ಉಚಿತ ವಿದ್ಯುತ್ ಯೋಜನೆಯೂ ಒಂದಾಗಿದೆ. ಆದರೆ ಸದ್ಯ ಈ ಯೋಜನೆಯಲ್ಲಿ ಜನ ಸಾಕಷ್ಟು ಗೊಂದಲಕ್ಕೀಡಾಗಿದ್ದಾರೆ. ಕೆಲವಡೆ ಇನ್ನೂ ಕೂಡ ವಿದ್ಯುತ್ ಬಿಲ್‍ಗಳು ಮಾಲೀಕರ ಮನೆ ಸೇರಿಲ್ಲ. ಇನ್ನೂ ಕಲವೆಡೆಗಳಲ್ಲಿ ವಿದ್ಯುತ್ ಬಿಲ್ ನಲ್ಲಿ ಏರಿಕೆ ಕಂಡು ಜನ ಬಿದಿಗಿಳಿದಿದ್ದಾರೆ. ವಿದ್ಯುತ್ ದರ ಏರಿಕೆ ಮಾಡಿರುವುದಾಗಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಬಟನೆ ನಡೆಸುತ್ತಿದ್ದಾರೆ.