ಕೊಪ್ಪಳ: ಜಿಲ್ಲೆಯ ಕಾರಟಗಿ ಎಎಸ್‍ಐ ವೆಂಕಟೇಶ್ ತಮ್ಮ ಪತ್ನಿಯನ್ನು ಮುಂದೆ ಬಿಟ್ಟು ಭರ್ಜರಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪವೊಂದು ಕೇಳಿ ಬರುತ್ತಿದೆ.
ಚಿಕ್ಕದಾಗಿ ಬಡ್ಡಿ ವ್ಯವಹಾರ ಮಾಡುತ್ತಾರೆ ಎಂದು ತಿಳಿದರೆ ತಪ್ಪು. ಅಸಲಿಗೆ ಎಎಸ್‍ಐ ಅವರ ಪತ್ನಿ ಪದ್ಮಾವತಿ 12 ಲಕ್ಷ ರೂ. ಸಾಲ ಪಡೆದಿದ್ದ ಗಂಗಾವತಿ ತಾಲೂಕಿನ ಉಳೇನೂರು ಗ್ರಾಮದ ಹೊನ್ನುರಪ್ಪನ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ.
ಇನ್ನು ರೈತ ಉಳಿದ 1 ಎಕರೆಯಲ್ಲಿ ಜಮೀನಿನಲ್ಲಿ ಉಳಿಮೆ ಮಾಡಲು ಹೋದ್ರೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕ್ತಿದ್ದಾರೆ ಅಂತ ನೊಂದ ಕುಟುಂಬ ಎಸ್‍ಪಿಗೆ ದೂರು ನೀಡಿದೆ. 12 ಲಕ್ಷದ ಬದಲು 35 ಲಕ್ಷ ರೂ.ಯ ಪತ್ರ ಬರೆಸಿಕೊಂಡು ಈಗ ರೈತನ 3 ಎಕರೆ ಜಮೀನನ್ನೇ ಕಬಳಿಸಿದ್ದಾರೆ ಎಂದು ಹೊನ್ನುರಪ್ಪರ ಮಗ ಅಂಬಣ್ಣ ಆರೋಪ ಮಾಡಿದ್ದಾರೆ.
ಎಎಸ್‍ಐ ವೆಂಕಟೇಶ್‍ರ ಪತ್ನಿ ಪದ್ಮಾವತಿಗೆ ಬೆನ್ನೆಲುಬಾಗಿರೋದು ಗಂಗಾವತಿ ತಾ.ಪಂ ಉಪಾಧ್ಯಕ್ಷ ಗವಿಸಿದ್ದಪ್ಪ, ಆತನ ಹೆಂಡ್ತಿ ಶಾರದಮ್ಮ ಉಳೇನೂರು ಗ್ರಾಪಂ ಅಧ್ಯಕ್ಷೆಯ ಬೆಂಬಲವಿದೆ ಎಂದು ರೈತ ಕುಟುಂಬ ಆರೋಪಿಸುತ್ತಿದೆ.