ಬಾಗಲಕೋಟೆ: ರಾಮದುರ್ಗದಲ್ಲಿ ಶಿಕ್ಷಕಿಯ ಕುಟುಂಬವೊಂದು ಬಡ್ಡಿ ಹಾವಳಿಗೆ ಬೆಂದು ಹೋಗಿದ್ದು, ನೀಡಿದ್ದ ಸಾಲ ಮರುಪಾವತಿಸಿಲ್ಲ ಎಂದು ಮನೆಯಿಂದ ಹೊರಹಾಕಲಾಗಿದೆ.
ರಮೇಶ ಕರಡಿಗುಡ್ಡ, ಅನ್ನಪೂರ್ಣ ಕರಡಿಗುಡ್ಡ ಬಡ್ಡಿ ಹಾವಳಿಗೆ ಬೆಂದ ಕುಟುಂಬದ ಸದಸ್ಯರು. ದುರಳರು ಮನೆಯಲ್ಲಿ ಇರುವ ವಸ್ತುಗಳನ್ನು ಹೊರಗೆ ಹಾಕಿದ್ದಲ್ಲದೆ ಮನೆಯವರನ್ನೂ ಸಹ ಹೊರಗೆ ಹಾಕಿದ್ದಾರೆ. ಇದನ್ನೂ ಓದಿ: ಹಾವು ತಪ್ಪಿಸಲು ಹೋಗಿ ತುಂಗಾ ನಾಲೆಗೆ ಬಿದ್ದ ಕಾರು – ಮಹಿಳೆ ಸಾವು
Advertisement
Advertisement
ಈ ವೇಳೆ ಕುಟುಂಬ ಮನೆ ಮುಂದೆ ಗೃಹೋಪಯೋಗಿ ವಸ್ತುಗಳನ್ನು ಇಟ್ಟುಕೊಂಡು ಕಣ್ಣೀರಿಡುತ್ತಿದ್ದಾರೆ. ಕರಡಿಗುಡ್ಡ ಕುಟುಂಬದವರು 2017ರಲ್ಲಿ ಸುರಕೋಡ ಎಂಬುವವರ ಬಳಿ 9 ಲಕ್ಷ ರೂ. ಸಾಲ ಪಡೆದಿದ್ದರು. ಆ ಸಾಲದ ಬಡ್ಡಿ ತೀರಿಸಲು 2018ರಲ್ಲಿ ಸಂಭಂದಿ ವಿಠ್ಠಲ ಕರಡಿಗುಡ್ಡ ಬಳಿ 15 ಲಕ್ಷ ರೂ. ಸಾಲ ಪಡೆದಿದ್ದರು. ರಮೇಶ್ ಅಣ್ಣನ ಮಗ ವಿಠ್ಠಲ್‍ಗೆ ಮನೆ ಪತ್ರ ನೀಡಿ ಎರಡೂವರೆ ಪರ್ಸೆಂಟ್‍ರಷ್ಟು ಬಡ್ಡಿಯ ಮೇಲೆ ಸಾಲ ಪಡೆದಿದ್ದರು. ಇದನ್ನೂ ಓದಿ: ಅಜ್ಮೀರ್ ದರ್ಗಾಕ್ಕೆ ಚಾದರ ಕಳಿಸಿಕೊಟ್ಟ ಪ್ರಧಾನಿ ಮೋದಿ
Advertisement
ಸಾಲ ನೀಡಿದ ನಾಲ್ಕೇ ತಿಂಗಳಲ್ಲಿ ವಿಠ್ಠಲ್ ರಮೇಶರವರ ಮನೆಯನ್ನು ಬಾಗಲಕೋಟೆ ಮೂಲದ ಪುಂಡಲಿಕ ಸತ್ಯಪ್ಪ ಮೇಟಿಗೆ ಮಾರಾಟ ಮಾಡಲು ಹೊರಟಿದ್ದರು ಎಂಬ ಆರೋಪ ವ್ಯಕ್ತವಾಗಿದೆ. ಬೆಳ್ಳಂಬೆಳಗ್ಗೆ ಮೂವತ್ತರಿಂದ ನಲವತ್ತು ಜನ ರಮೇಶ ಕರಡಿಗುಡ್ಡರವರ ಮನೆಗೆ ನುಗ್ಗಿ ಗಲಾಟೆ ಮಾಡಲಾರಂಭಿಸಿದ್ದಾರೆ. ಈ ಕುರಿತು ಮೇಟಿ ಕುಟುಂಬದ ಸದಸ್ಯರು ವಿಠ್ಠಲ ಕರಡಿಗುಡ್ಡ ಕುಟುಂಬ ಸದಸ್ಯರ ವಿರುದ್ಧ ಆರೋಪ ಮಾಡಿದ್ದಾರೆ.
Advertisement
ಸಾಲ ನೀಡುವಂತೆ ಮನೆಯಲ್ಲಿರುವ ವಸ್ತುಗಳನ್ನು ಹೊರಗೆ ಹಾಕಿ ದಬ್ಬಾಳಿಕೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಅಂತಾ ಶಿಕ್ಷಕಿ ಅನ್ನಪೂರ್ಣ ಕರಡಿಗುಡ್ಡ ಆರೋಪಿಸಿದ್ದಾರೆ.