ಬೆಂಗಳೂರು: ಒಂದು ಕಡೆ ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಹಾಕಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಸ್ ನಡೆಸುತ್ತಿದ್ದರೆ ಬಡ್ಡಿ ದಂಧೆಕೋರರ ದರ್ಬಾರ್ ಮುಂದುವರಿದಿದೆ. ಸಾಲದ ಹಣಕ್ಕಾಗಿ ಕಂದಮ್ಮನನ್ನೇ ಅಪಹರಣ ಮಾಡಿದ ಅಮಾನವೀಯ ಕೃತ್ಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಕಂದಮ್ಮನ ಚಿಕಿತ್ಸೆಗೆಂದು ಪಡೆದ 30 ಸಾವಿರ ರೂ. ಸಾಲವನ್ನು ಹಿಂತಿರುಗಿಸಲಿ ಅಂತಾ ಲೇವಾದೇವಿಯೊಬ್ಬ ಮಗುವನ್ನೇ ಅಪಹರಣ ಮಾಡಿದ್ದಾನೆ. ಅಷ್ಟೇ ಅಲ್ಲದೇ ಆನೇಕಲ್ ತಾಲೂಕಿನ ಕಿತ್ತಾಗನಹಳ್ಳಿಯಲ್ಲಿ ವಾಸವಾಗಿದ್ದ ಬಾಡಿಗೆ ಮನೆಗೂ ಬೀಗ ಜಡಿದು ದಂಪತಿಯನ್ನು ಬೀದಿ ಪಾಲು ಮಾಡಿದ್ದಾನೆ.
Advertisement
ಭದ್ರಾವತಿಯ ಚಂದ್ರ ಮೂರ್ತಿ ಮಗುವನ್ನು ಕಿತ್ತುಕೊಂಡು ಹೋದ ಲೇವಾದೇವಿ. ವಿನಾಯಕ್ ದಂಪತಿ ಮಗು ಈಗ ಭದ್ರಾವತಿಯಲ್ಲಿದ್ದು, ಸಾಲ ಮರುಪಾವತಿ ಮಾಡಿ ಮಗುವನ್ನು ತಗೆದುಕೊಂಡು ಹೋಗಿ ಅಂತಾ ಚಂದ್ರ ಮೂರ್ತಿ ಪಟ್ಟು ಹಿಡಿದಿದ್ದಾನೆ ಎಂದು ದಂಪತಿ ಆರೋಪಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?:
ಹಾಸನ ಮೂಲದ ವಿನಾಯಕ್ ದಂಪತಿ ಐದು ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಆನೇಕಲ್ ಸಮೀಪದ ಕಿತ್ತಾಗನಹಳ್ಳಿಗೆ ಬಂದಿದ್ದರು. ಅಲ್ಲಿಯೇ ಒಂದು ಬಾಡಿಗೆ ಮನೆ ಮಾಡಿಕೊಂಡು ಗಾರೆ ಕೆಲಸ ಮಾಡುತ್ತ ಜೀವನ ನಡೆಸುತ್ತಿದ್ದರು. ಒಂದು ವರ್ಷದ ಹಿಂದೆ ಮಗುವಿನ ಜನನವಾಗಿದ್ದು, ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಮಗುವಿಗೆ ಚಿಕಿತ್ಸೆ ಕೊಡಿಸಲು ಭದ್ರಾವತಿಯ ಚಂದ್ರ ಮೂರ್ತಿ ಬಳಿ ವಿನಾಯಕ್ ದಂಪತಿ 30 ಸಾವಿರ ರೂ. ಸಾಲ ಪಡೆದಿದ್ದರು.
Advertisement
ಆರ್ಥಿಕವಾಗಿ ಕುಗ್ಗಿದ್ದ ವಿನಾಯಕ್ ಸಾಲ ಮರುಪಾವತಿ ಮಾಡಲು ಆಗಿರಲಿಲ್ಲ. ಇದಿಂದಾಗಿ ಚಂದ್ರ ಮೂರ್ತಿ ವಿನಾಯಕ್ ದಂಪತಿಯನ್ನು ಭದ್ರಾವತಿಗೆ ಕರೆಸಿಕೊಂಡಿದ್ದರು. ಮಗುವನ್ನು ಅಪಹರಣ ಮಾಡಿ, ಮಗು ಬೇಕಾದರೆ ಸಾಲ ಮರು ಪಾವತಿ ಮಾಡಿ ಅಂತಾ ಬೆದರಿಕೆ ಹಾಕಿದ್ದಾರಂತೆ. ಒಂಬತ್ತು ತಿಂಗಳ ಹೆತ್ತು ಹೊತ್ತು ಸಾಕಿದ ಮಗುವನ್ನು ಕಳೆದುಕೊಂಡ ತಂದೆ-ತಾಯಿ ದಿಕ್ಕು ತೋಚದೆ ಪಬ್ಲಿಕ್ ಟಿವಿ ಬಳಿ ಬಂದು ಮಗುವನ್ನು ಕೊಡಿಸುವಂತೆ ಬೇಡಿಕೊಳ್ಳುತ್ತಿದ್ದಾರೆ.
ಕಿತ್ತಾಗನ ಹಳ್ಳಿಯಲ್ಲಿ ಬಾಡಿಗೆಗೆ ಇದ್ದ ಮನೆಗೂ ಸಹ ಚಂದ್ರ ಮೂರ್ತಿ ಬೀಗ ಜಡಿದಿದ್ದು, ಇರುವುದಕ್ಕೂ ಮನೆಯಿಲ್ಲದಾಗಿದೆ. ಕೈಯಲ್ಲಿ ಬಿಡಿಗಾಸು ಇಲ್ಲದೇ ಐದು ದಿನಗಳಿಂದ ದೇವಸ್ಥಾನ, ಬಸ್‍ಸ್ಟ್ಯಾಂಡ್, ಆಸ್ಪತ್ರೆಗಳ ಬಳಿ ಮಲಗಿಯೇ ಕಾಲ ಕಳೆಯುತ್ತಿದ್ದಾರೆ. ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://youtu.be/eOPS66BnUYM