ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸದಸ್ಯರ ಮೇಲೆ ಕೆ.ಜಿ ಹಳ್ಳಿ ಠಾಣೆಯಲ್ಲಿ ಎಫ್‍ಐಆರ್ ವಿಚಾರದ ಕುರಿತು ತನಿಖೆ ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ.
Advertisement
ಪಿಎಫ್‍ಐ ಕೇಂದ್ರ ಕಚೇರಿ ಮೇಲೆ ರಾಷ್ಟ್ರೀಯ ತನಿಖಾ ದಳ (NIA) ದಾಳಿ ನಡೆಸಿದ್ದ ವೇಳೆ ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್ (Metal Detector) ಪತ್ತೆಯಾಗಿವೆ. ಎಸ್‍ಕೆ ಗಾರ್ಡನ್ ಕಚೇರಿಯಲ್ಲಿ ಎರಡು ಎಚ್‍ಎಚ್‍ಎಂಡಿ ಮೆಟಲ್ ಡಿಟೆಕ್ಟರ್ ಪತ್ತೆಯಾಗಿದೆ.
Advertisement
Advertisement
ಪೊಲೀಸ್, ಭದ್ರತಾ ಏಜೆನ್ಸಿಗಳ ಬಳಿ ಇರುವಂತಹ ಮೆಟಲ್ ಡಿಟೆಕ್ಟರ್ ಇವುಗಳಾಗಿವೆ. ಸಾರ್ವಜನಿಕ ಸಭೆಯಲ್ಲಿ ಮೆಟಲ್ ಡಿಟೆಕ್ಟರ್ ಕಣ್ತಪ್ಪಿಸಿ ಹೋಗಲು ತರಬೇತಿ ನೀಡಲಾಗುತ್ತಿತ್ತು. ಗನ್, ಮಚ್ಚು, ಲಾಂಗ್ ಹೀಗೆ ಯಾವುದಕ್ಕೆ ಸೌಂಡ್ ಮಾಡುತ್ತೆ ಅಂತ ಪರೀಕ್ಷೆ ಮಾಡಲಾಗುತ್ತದೆ. ವಿಧ್ವಂಸಕ ಕೃತ್ಯ ಎಸಗುವ ವೇಳೆ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ.
Advertisement
ಇತ್ತ ದೇಶಾದ್ಯಂತ 5 ವರ್ಷ ಪಿಎಫ್‍ಐ ಬ್ಯಾನ್ ಬೆನ್ನಲ್ಲೇ ಹಲವು ಪಿಎಫ್‍ಐ ಮುಖಂಡರು, ಕಾರ್ಯಕರ್ತರು ದೇಶ ಬಿಟ್ಟಿದ್ದಾರೆ. ತನಿಖೆಗೆ ಹೆದರಿ ಪ್ರವಾಸದ ನೆಪದಲ್ಲಿ ಹಲವರು ವಿದೇಶಗಳಿಗೆ ದೌಡಾಯಿಸಿದ್ದಾರೆ. ಕೆಲವರು ಕರ್ನಾಟಕ, ಕೇರಳ, ತಮಿಳುನಾಡು ಅಂತಾರಾಜ್ಯ ಪ್ರವಾಸ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಸ್ಥಳೀಯ ಪೊಲೀಸರ ತನಿಖೆಯ ಬಿಸಿ ತಪ್ಪಿಸಿಕೊಳ್ಳಲು ತಿರುಗಾಟ ನಡೆಸುತ್ತಿದ್ದಾರೆ. ಪೊಲೀಸರು ಮತ್ತು ತನಿಖಾ ಸಂಸ್ಥೆಗಳಿಂದ ಹೆಚ್ಚಿನ ನಿಗಾ ವಹಿಸಲಾಗಿದೆ. ಇದನ್ನೂ ಓದಿ: PFI ಮೊಬೈಲ್ ರಿಟ್ರೀವ್ – ಹತ್ಯೆಯಾದವರು, ಹತ್ಯೆ ಮಾಡಿದವರ ವಿವರಕ್ಕೆ ಬಳಕೆಯಾಗ್ತಿತ್ತು ಒಂದು ವಿಶೇಷ ಆ್ಯಪ್