ಚೆನ್ನೈ: ಫೇಸ್‌ಬುಕ್ (Facebook) ಕಂಪನಿಯ ಮಾತೃ ಸಂಸ್ಥೆ ಮೆಟಾ (META) ಭಾರತದಲ್ಲಿ ತನ್ನ ಮೊದಲ ಡೇಟಾ ಸೆಂಟರ್ (Data Center) ಅನ್ನು ಚೆನ್ನೈನ ರಿಲಯನ್ಸ್ ಇಂಡಸ್ಟ್ರೀಸ್ ಕ್ಯಾಂಪಸ್‌ನಲ್ಲಿ ಸ್ಥಾಪನೆ ಮಾಡಲಿದೆ.
ಮಾರ್ಚ್ ಆರಂಭದಲ್ಲಿ ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ನಡೆದ ಚರ್ಚೆಯ ಬಳಿಕ ಮಾರ್ಕ್ ಜುಕರ್‌ಬರ್ಗ್ (Mark Zuckerberg) ನೇತೃತ್ವದ ಕಂಪನಿಯು ರಿಲಯನ್ಸ್ (Reliance Industries) ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಾಗಿದೆ.
- Advertisement -
ಅಂಬತ್ತೂರ್ ಇಂಡಸ್ಟ್ರಿಯಲ್ ಎಸ್ಟೇಟ್ 10-ಎಕರೆ ಕ್ಯಾಂಪಸ್ ಹೊಂದಿದೆ. ಬ್ರೂಕ್‌ಫೀಲ್ಡ್ ಅಸೆಟ್ ಮ್ಯಾನೇಜ್‌ಮೆಂಟ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಡಿಜಿಟಲ್ ರಿಯಾಲ್ಟಿ ಜಂಟಿಯಾಗಿ ಈ ಕ್ಯಾಂಪಸ್‌ನಲ್ಲಿ ಹೂಡಿಕೆ ಮಾಡಿದೆ.
ಭಾರತದಲ್ಲಿ ಫೇಸ್‌ಬುಕ್ 31.46 ಕೋಟಿ, ಇನ್‌ಸ್ಟಾಗ್ರಾಮ್ 35 ಕೋಟಿ, ವಾಟ್ಸಪ್‌ಗೆ 48 ಕೋಟಿ ಬಳಕೆದಾರರಿದ್ದಾರೆ. ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ಬಳಕೆದಾರರ ಸಂಖ್ಯೆ ದುಪ್ಪಟ್ಟು ಇರುವುದರಿಂದ ಈಗ ಇಲ್ಲೇ ಡೇಟಾ ಸೆಂಟರ್ ತೆರೆಯಲು ಮೆಟಾ ಮುಂದಾಗಿದೆ. ಇದನ್ನೂ ಓದಿ: Taiwan Earthquake – 7.4 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ
ಗೂಗಲ್ ದೇಶದಲ್ಲಿ ತನ್ನ ಮೊದಲ ಡೇಟಾ ಸೆಂಟರ್ ಸ್ಥಾಪಿಸಲು ಮುಂದಾಗಿದೆ. ನವಿ ಮುಂಬೈನಲ್ಲಿ 22.5 ಎಕರೆ ಭೂಮಿಯನ್ನು ಖರೀದಿ ಸಬಂಧ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.