40 ವರ್ಷಗಳ ಹಿಂದೆ ಅವರನ್ನು ಭೇಟಿಯಾಗಿದ್ದೆ- ಸಿಧು ಜೊತೆಗಿನ ಮೊದಲ ಭೇಟಿ ನೆನೆದ ರಾಗಾ

Public TV
2 Min Read
Punjab Navjot Singh Sidhu RAHUL

ಚಂಡೀಗಢ: 40 ವರ್ಷಗಳ ಹಿಂದೆ ಅವರನ್ನು ಭೇಟಿಯಾಗಿದ್ದೆ. ಅವರು ನನ್ನ ಶಾಲೆಯಲ್ಲಿ ಕ್ರಿಕೆಟ್ ಆಡಲು ಬಂದಿದ್ದರು ಎಂದು ನವಜೋತ್ ಸಿಂಗ್ ಸಿಧು ಜೊತೆಗಿನ ತಮ್ಮ ಹಳೆಯ ದಿನಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಚ್ಚಿಟ್ಟರು.

ಸಾಕಷ್ಟು ಸಸ್ಪೆನ್ಸ್ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಂಜಾಬ್‍ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಚರಂಜಿತ್ ಸಿಂಗ್ ಚನ್ನಿ ಅವರನ್ನು ಪಕ್ಷದ ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ದೆಹಲಿ ನಾಯಕರು ಪಂಜಾಬ್ ಲೂಟಿ ಮಾಡಲು ಬಂದಿದ್ದಾರೆ: ಚರಂಜಿತ್ ಚನ್ನಿ

rahul gandhi

ಸಿಎಂ ಅಭ್ಯರ್ಥಿಯ ಹೆಸರನ್ನು ಘೋಷಿಸುವ ಮೊದಲು ರಾಹುಲ್ ಗಾಂಧಿ ಅವರು, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರೊಂದಿಗಿನ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಸಿಧು ಅವರು ಸಹ ಪಕ್ಷದ ಸಿಎಂ ಆಭ್ಯರ್ಥಿಗಳ ಸ್ಪರ್ಧೆಯಲ್ಲಿ ಮುಂದಿದ್ದರು ಎಂದು ವಿವರಿಸಿದರು.

ಸಿಧು ಕುರಿತು ಮಾತನಾಡಿದ ಅವರು, ನಾನು ನವಜೋತ್ ಸಿಂಗ್ ಸಿಧು ಅವರನ್ನು 40 ವರ್ಷಗಳ ಹಿಂದೆ ಭೇಟಿಯಾಗಿದ್ದೆ. ಆದರೆ ಅವರಿಗೆ ನಾನೇ ರಾಹುಲ್ ಗಾಂಧಿ ಎಂದು ಗೊತ್ತಿರಲಿಲ್ಲ. ಅವರು ನಮ್ಮ ಶಾಲೆಗೆ ಕ್ರಿಕೆಟ್ ಪಂದ್ಯ ಆಡಲು ಬರುತ್ತಿದ್ದರು ಎಂದು ನೆನಪಿಸಿಕೊಂಡರು.

17 ವರ್ಷಗಳ ರಾಜಕೀಯ ಜೀವನದಲ್ಲಿ, ಸಿಧು ಯಾವುದೇ ಹುದ್ದೆಗಾಗಿ ಬದುಕಲಿಲ್ಲ. ಆದರೆ ಯಾವಾಗಲೂ ಅವರು ಪಂಜಾಬ್‍ನ ಸುಧಾರಣೆ ಮತ್ತು ಜನರ ಜೀವನದಲ್ಲಿ ಸುಧಾರಣೆಯನ್ನು ಬಯಸಿದ್ದರು ಎಂದು ಪ್ರಶಂಸಿದರು.

congress flag b

ಲೂಧಿಯಾನ ವರ್ಚುವಲ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಧು, ಈ ಹಿಂದೆ ತಾನು ಯಾವುದೇ ಹುದ್ದೆಗಾಗಿ ಬದುಕಿಲ್ಲ. ಚನ್ನಿಯನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುವ ನಿರ್ಧಾರವನ್ನು ನಾನು ಶ್ಲಾಘಿಸುತ್ತೇನೆ ಎಂದರು.

ರಾಹುಲ್ ನಾಯಕತ್ವ ಶ್ಲಾಘಿಸಿದ ಸಿಧು!
ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಶ್ಲಾಘಿಸಿದ ಅವರು, ಕಳೆದ ವರ್ಷ ದಲಿತರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಅವರೇ ಎಂದು ತಿಳಿಸಿದರು. ಇದು ಬದಲಾವಣೆಯ ಕ್ಷಣವಾಗಿದೆ. ಇದು ಜನರ ಜೀವನವನ್ನು ಉತ್ತಮಗೊಳಿಸುತ್ತದೆ ಎಂದು ವಿವರಿಸಿದರು.

Navjot singh sidhu 2

ನಮಗೆ ಏನೂ ಅಗತ್ಯವಿಲ್ಲ, ನಮಗೆ ಪಂಜಾಬ್‍ನ ಕಲ್ಯಾಣ ಮಾತ್ರ ಬೇಕು. ಪಂಜಾಬ್‍ನ ಮೇಲಿನ ನನ್ನ ಪ್ರೀತಿ ಯಾವಾಗಲೂ ಅದರ ಸುಧಾರಣೆಯನ್ನು ಬಯಸುತ್ತದೆ. ಫೆ.14 ರಂದು ಪಂಜಾಬ್ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಇದಕ್ಕೆ ನೀವು ಸಹಕರಿಸಬೇಕು ಎಂದು ಜನರಿಗೆ ಮನವಿ ಮಾಡಿಕೊಂಡರು. ಇದನ್ನೂ ಓದಿ:  ‘ಚುನವಿ ಹಿಂದೂ’ – ‘ಗಂಗಾ ಆರತಿ’ ಪೂಜೆಗೈದ ರಾಗಾ ವಿರುದ್ಧ ಬಿಜೆಪಿ ವ್ಯಂಗ್ಯ

2017 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ 77 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಸಂಪೂರ್ಣ ಬಹುಮತವನ್ನು ಗಳಿಸಿತ್ತು. 10 ವರ್ಷಗಳ ಅಧಿಕಾರದ ನಂತರ ಎಸ್‍ಎಡಿ-ಬಿಜೆಪಿ ಸರ್ಕಾರವನ್ನು ಹೊರಹಾಕಿತು ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *