Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Fashion

Met Gala 2025 | ಬಾಲಿವುಡ್ ತಾರೆಯರು ಕಾಣಿಸಿಕೊಂಡಿದ್ದು ಹೇಗೆ ಗೊತ್ತಾ?

Public TV
Last updated: May 14, 2025 10:21 pm
Public TV
Share
3 Min Read
Met Gala 2025
SHARE

ಇತ್ತೀಚೆಗಷ್ಟೆ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ನಡೆದ ಅತಿ ದೊಡ್ಡ ಫ್ಯಾಷನ್ ನೈಟ್ ಮೆಟ್ ಗಾಲಾ 2025ರ(Met Gala 2025) `ಸೂಪರ್‌ಫೈನ್: ಟೈಲರಿಂಗ್ ಬ್ಲ್ಯಾಕ್ ಸ್ಟೈಲ್’ ಥೀಮ್‌ನಲ್ಲಿ ಹಾಲಿವುಡ್ ಹಾಗೂ ಬಾಲಿವುಡ್‌ನ ಸ್ಟಾರ್ಸ್ ಬ್ಲೂ ಕಾರ್ಪೆಟ್‌ನಲ್ಲಿ ಮಿಂಚಿದ್ದರು. ಇದೊಂದು ಕಾಸ್ಟ್ಯೂಮ್‌ ಇನ್‌ಸ್ಟಿಟ್ಯೂಟ್‌ಗಾಗಿ ನಿಧಿ ಸಂಗ್ರಹಿಸಲು ಆಯೋಜಿಸಲಾಗುವ ಫ್ಯಾಷನ್ ಕಾರ್ಯಕ್ರಮ.

Met Galaಈ ಮೆಟ್ ಗಾಲಾ ಫ್ಯಾಷನ್ ನೈಟ್ ಮಾಡೆಲ್ಸ್, ಆಕ್ಟರ್ಸ್‌ಗಳು ತಮ್ಮ ಫ್ಯಾಷನ್ ಬಗೆಗಿನ ಆಸಕ್ತಿಯನ್ನು ತೋರಿಸುವ ಅತಿ ದೊಡ್ಡ ಕಾರ್ಯಕ್ರಮವಾಗಿದೆ. ಇದರಲ್ಲಿ ಖ್ಯಾತ ನಟ ನಟಿಯರು, ಸೆಲೆಬ್ರಿಟಿಗಳು ವಿಭಿನ್ನವಾದ ಉಡುಗೆ ತೊಟ್ಟು ಫ್ಯಾಷನ್ ನೈಟ್‌ನ ಮೆರುಗು ಹೆಚ್ಚಿಸುತ್ತಾರೆ.

ಭಾರತದಲ್ಲಿ ತಯಾರಾದ ಬ್ಲೂ ಕಾರ್ಪೆಟ್
ಈ ಬಾರಿಯ ಮೆಟ್ ಗಾಲಾದ ಇನ್ನೊಂದು ವಿಶೇಷವೇನೆಂದರೆ, ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಬದಲಾಗಿದೆ. ಬಿಳಿ ಹಾಗೂ ನೀಲಿ ಬಣ್ಣದ ಡ್ಯಾಫೋಡಿಲ್‌ಗಳಿಂದ ಅಲಂಕರಿಸಲ್ಲಟ್ಟ ಬ್ಲೂ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ಇನ್ನೊಂದು ವಿಷಯವೇನೆಂದರೆ ಈ ಬ್ಲೂ ಕಾರ್ಪೆಟ್ ತಯಾರಾಗಿದ್ದು ಭಾರತದಲ್ಲೇ. ಹೌದು, ಈ ಕಾರ್ಪೆಟ್‌ನ ಬೇಸ್ ಅನ್ನು ನೆಯ್ಟ್ ಹೋಮ್ಸ್ ಸಂಸ್ಥಾಪಕರಾದ ಶಿವನ್ ಸಂತೋಷ್ ಮತ್ತು ನಿಮಿಷಾ ಆರೀನಿವಾಸ್ ಅವರು ಕೇರಳದ(Kerala) ಅಲಪ್ಪುಳದಲ್ಲಿ ತಯಾರಿಸಿದ್ದಾರೆ.

Met Gala Blue Carpet

ಬೇಬಿ ಬಂಪ್‌ನೊಂದಿಗೆ ಬ್ಲ್ಯಾಕ್ ಗೌನ್‌ನಲ್ಲಿ ಮಿಂಚಿದ ಕಿಯಾರಾ
ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ(Kiara Advani) ಬೇಬಿ ಬಂಪ್‌ನೊಂದಿಗೆ ಗೋಲ್ಡ್ ವಿಥ್ ಬ್ಲ್ಯಾಕ್ ಕಲರ್‌ನ ಆಫ್-ಶೋಲ್ಡರ್ ಗೌನ್‌ನಲ್ಲಿ ಮೆಟ್ ಗಾಲಾದಲ್ಲಿ ಕಾಣಿಸಿಕೊಂಡರು. ಫ್ಯಾಷನ್ ಜಗತ್ತಿನ ಅತಿ ದೊಡ್ಡ ಕಾರ್ಯಕ್ರಮದಲ್ಲಿ ಕಿಯಾರಾ ಭಾರತೀಯ ವಸ್ತ್ರ ವಿನ್ಯಾಸಕ ಗೌರವ್ ಗುಪ್ತಾ ವಿನ್ಯಾಸಗೊಳಿಸಿದ್ದ ಗೌನ್ ಧರಿಸಿದ್ದರು. ಈ ಫ್ಯಾಷನ್ ನೈಟ್‌ನಲ್ಲಿ ಕಿಯಾರ ಪ್ರೆಗ್ನೆನ್ಸಿ ಗ್ಲೋನಲ್ಲಿ ಕಂಗೊಳಿಸಿದ್ದು ವಿಶೇಷವಾಗಿತ್ತು.

Kiyara

ಬಾಲಿವುಡ್ `ಕಿಂಗ್ ಖಾನ್’ ಐಕಾನಿಕ್ ಲುಕ್
ಮೆಟ್ ಗಾಲಾದ ಬ್ಲೂ ಕಾರ್ಪೆಟ್‌ನಲ್ಲಿ ಭಾಗವಹಿಸಿದ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಬಾಲಿವುಡ್‌ನ ಕಿಂಗ್ ಖಾನ್ ಎಂದೇ ಖ್ಯಾತಿ ಪಡೆದಿರುವ ನಟ ಶಾರುಖ್ ಖಾನ್(Shah Rukh Khan) ಪಾತ್ರರಾಗಿದ್ದಾರೆ. ಶಾರುಖ್ ಖಾನ್ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಮುಖರ್ಜ ವಿನ್ಯಾಸಗೊಳಿಸಿದ ಬ್ಲಾಕ್ ಸ್ಟೈಲೀಶ್ ಸೂಟ್‌ನಲ್ಲಿ ಮಿಂಚಿದ್ದರು. ಇನ್ನು ಡ್ರೆಸ್‌ಗೆ `K’ ಎಂಬ ಲಾಕೆಟ್ ಇರುವ ಚೈನ್ ಮ್ಯಾಚ್ ಮಾಡಿದ್ದರು.

Shah Rukh Khan 1

ಕ್ಲಾಸಿಕ್ ಹಾಲಿವುಡ್ ಸ್ಟೈಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಅವರು ಪತಿ ನಿಕ್ ಜೋನಸ್‌ರೊಂದಿಗೆ(Nik Jonas) ಕ್ಲಾಸಿಕ್ ಹಾಲಿವುಡ್ ಸ್ಟೈಲ್‌ನ ಬಿಳಿ ಹಾಗೂ ಕಪ್ಪು ಚುಕ್ಕೆಯ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು. 2017ರಲ್ಲಿ ಮೊದಲ ಬಾರಿಗೆ ಮೆಟ್ ಗಾಲಾದಲ್ಲಿ ಭಾಗವಹಿಸಿದ್ದರು. ಈ ಬಾರಿಯ ಮೆಟ್ ಗಾಲಾ ಅವರಿಗೆ 5ನೇ ಶೋ ಆಗಿದೆ. ಇನ್ನು ಪ್ರಿಯಾಂಕಾ ಅವರ ಪತಿ ನಿಕ್ ಜೋನಸ್ ಟೈಲರ್ಡ್ ಸೂಟ್‌ನಲ್ಲಿ ಪತ್ನಿಗೆ ಮ್ಯಾಚ್ ಮಾಡಿದ್ದರು.

Priyanka Chopra

ಮೆಟ್ ಗಾಲಾದಲ್ಲಿ ಕಾಣಿಸಿಕೊಂಡ ಅಂಬಾನಿ ಪುತ್ರಿ
ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯ ಏಕೈಕ ಪುತ್ರಿ ಇಶಾ ಅಂಬಾನಿ(Isha Ambani) ಸಹ ಮೆಟ್ ಗಾಲಾದಲ್ಲಿ ವಿಶಿಷ್ಟ ಉಡುಪು ಹಾಗೂ ಆಭರಣದಲ್ಲಿ ಎಲ್ಲರ ಗಮನ ಸೆಳೆದರು. ಇಶಾ ಅಂಬಾನಿ ಧರಿಸಿದ್ದ ಉಡುಪನ್ನು ಖ್ಯಾತ ಭಾರತೀಯ ವಸ್ತ್ರ ವಿನ್ಯಾಸಕಿ ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ್ದರು. ಇಶಾ ಧರಿಸಿದ್ದ ಬಿಳಿ ಬಣ್ಣದ ಕಾರ್ಸೆಟ್, ಕಪ್ಪು ಬಣ್ಣದ ಟೇಲರ್ಡ್ ಪ್ಯಾಂಟ್ ಹಾಗೂ ಉದ್ದದ ಅಲಂಕೃತ ಕೇಪ್ ಉಡುಪಿನ ಪ್ರಮುಖ ಆಕರ್ಷಣೆಯಾಯಿತು. ಈ ಡ್ರೆಸ್‌ಗೆ ದುಬಾರಿ ಬೆಲೆಯ ಆಭರಣಗಳನ್ನು ಧರಿಸಿ ಕ್ಲಾಸಿಕ್ ಲುಕ್ ನೀಡಿದ್ದರು.

Isha Ambani

ಪಂಜಾಬಿ ಸ್ಟೈಲ್‌ ಡ್ರೆಸ್‌ನಲ್ಲಿ ದಿಲ್ಜಿತ್ ದೋಸಾಂಜ್
ಪಂಜಾಬ್‌ನ ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್(Diljit Dosanjh) ಪೇಟ ಧರಿಸಿ ಥೇಟ್ ಪಂಜಾಬಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಇವರು ತಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಮೆಟ್ ಗಾಲಾ ಫ್ಯಾಷನ್ ನೈಟ್‌ನಲ್ಲಿ ಪ್ರತಿನಿಧಿಸಿದ್ದರು. ಇವರ ಈ ವಸ್ತ್ರ ವಿನ್ಯಾಸವನ್ನು ಪ್ರಬಲ್ ಗುರುಂಗ್ ಅವರು ಮಾಡಿದ್ದಾರೆ. ಬಿಳಿ ಹಾಗೂ ಗೋಲ್ಡ್ ಬಣ್ಣದ ಶೆರ್ವಾಣಿ ವಿನ್ಯಾಸದ ಉಡುಪು ಧರಿಸಿದ್ದ ದಿಲ್ಜಿತ್, ಹಸಿರು ಬಣ್ಣದ ಹರಳುಗಳಿರುವ ಜ್ಯುವೆಲರಿಯನ್ನು ಮ್ಯಾಚ್ ಮಾಡಿದ್ದರು.

Diljit Singh

ಗಾರಾ ಉಡುಪಿನಲ್ಲಿ ನತಾಶಾ ಪೂನಾವಾಲ್ಲಾ
ನತಾಶಾ ಪೂನಾವಾಲ್ಲಾ(Natasha Poonawalla) ಅವರು ಮೆಟ್ ಗಾಲಾದಲ್ಲಿ ಪಾರ್ಸಿಯ ಗಾರಾ ಉಡುಪಿನಲ್ಲಿ ಮಿಂಚಿದರು. ಈ ಉಡುಪಿನ ಕೇಂದ್ರಬಿಂದುವೇನೆಂದರೆ ಫಿಶ್‌ಟೇಲ್ ಸ್ಕರ್ಟ್ ಹಾಗೂ 2 ವಿಂಟೇಜ್ ಗಾರಾ ಸೀರೆಯಲ್ಲಿ ಈ ವಸ್ತ್ರ ವಿನ್ಯಾಸವನ್ನು ಮಾಡಲಾಗಿತ್ತು. ಇದರ ಸ್ಕರ್ಟ್‌ನ ಸಂಪೂರ್ಣ ವಿನ್ಯಾಸವನ್ನು ಕೈ ಕಸೂತಿಯಿಂದಲೇ ಮಾಡಲಾಗಿದೆ. ಇದರಲ್ಲಿ ಇನ್ನೊಂದು ವಿಶೇಷವೆಂದರೆ ಕತ್ತಿನ ಭಾಗಕ್ಕೆ ಕಮಲದ ಆಕಾರವನ್ನು ಹೋಲುವ ಮಳೆಹನಿಯಂತೆ ನೇತಾಡುವ ಮುತ್ತುಗಳನ್ನು ಜೋಡಿಸಲಾಗಿತ್ತು. ನತಾಶಾ ಪೂನಾವಾಲ್ಲಾ ಅವರ ಮೆಟ್ ಗಾಲಾದ ವಸ್ತ್ರ ವಿನ್ಯಾಸವನ್ನು ಮನೀಶ್ ಮಲ್ಹೋತ್ರಾ ಮಾಡಿದ್ದಾರೆ.

Natasha

ಈ ಬಾರಿ ನ್ಯೂಯಾರ್ಕ್‌ನಲ್ಲಿ ನಡೆದ ಮೆಟ್ ಗಾಲಾ ಫ್ಯಾಷನ್ ನೈಟ್‌ನಲ್ಲಿ ಬಾಲಿವುಡ್ ತಾರೆಯರು ವಿಭಿನ್ನ ಹಾಗೂ ವಿಶಿಷ್ಟ ವಸ್ತ್ರ ವಿನ್ಯಾಸದಲ್ಲಿ ಕಂಗೊಳಿಸಿದರು. ಈ ಮೆಟ್ ಗಾಲಾದಲ್ಲಿ ದೇಶ-ವಿದೇಶದ ಫ್ಯಾಷನ್ ಮಾಡೆಲ್ಸ್, ಸೆಲೆಬ್ರಿಟಿಸ್ ಭಾಗಿಯಾಗಿದ್ದರು.

TAGGED:bollywoodcostumefashionKiara Advanimet gala 2025priyankaShah Rukh Khanಕಿಯಾರಾ ಅಡ್ವಾಣಿಫ್ಯಾಷನ್ಮೆಟ್‌ ಗಾಲಾ 2025ಶಾರುಖ್ ಖಾನ್
Share This Article
Facebook Whatsapp Whatsapp Telegram

Cinema News

rajinikanth upendra
`ಭಾಷಾ’ಗಿಂತ `ಓಂ’ ಸಿನಿಮಾ ಹತ್ತು ಪಟ್ಟು ಬೆಟರ್- ಉಪ್ಪಿ ಹೊಗಳಿದ ರಜನಿಕಾಂತ್
Cinema Latest Main Post South cinema
darshan pavithra gowda
ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್, ಪವಿತ್ರಾ ಗೌಡ ಸೇರಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು
Bengaluru City Cinema Court Latest Main Post Sandalwood
Darshan 11
ರೇಣುಕಾಸ್ವಾಮಿ ಕೊಲೆ ಕೇಸ್ – ಇಂದು ಕೋರ್ಟ್‌ಗೆ ಹಾಜರಾಗಲಿರುವ ‘ಡಿ’ ಗ್ಯಾಂಗ್
Bengaluru City Cinema Court Latest Sandalwood Top Stories
Vishnuvardhan Memorial 3
ದಾದಾ ಅಂತ್ಯಕ್ರಿಯೆ ಸ್ಥಳದಲ್ಲೇ ಸ್ಮಾರಕ ನಿರ್ಮಿಸಲಿ – ಫಿಲ್ಮ್ ಚೇಂಬರ್‌ಗೆ ವಿಷ್ಣು ಅಭಿಮಾನಿಗಳ ಸಂಘ ಮನವಿ
Cinema Latest Sandalwood Top Stories
Actor Jaggesh at mantralaya 1
ರಾಯರ ಮಧ್ಯಾರಾಧನೆಯಲ್ಲಿ ನಟ ಜಗ್ಗೇಶ್ ಭಾಗಿ
Cinema Districts Latest Raichur Sandalwood Top Stories

You Might Also Like

SATISH JARKIHOLI 1
Bengaluru City

ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರು ಹಗೆ ಸಾಧಿಸ್ತಾರೆ ಎಚ್ಚರಿಕೆಯಿಂದ ಇರಬೇಕು: ಸತೀಶ್ ಜಾರಕಿಹೊಳಿ

Public TV
By Public TV
2 minutes ago
Tamil Poet Vairamuthu
Latest

ಸೀತೆಯಿಂದ ಬೇರ್ಪಟ್ಟ ನಂತರ ಶ್ರೀರಾಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ: ತಮಿಳು ಕವಿ ವಿವಾದಾತ್ಮಕ ಹೇಳಿಕೆ

Public TV
By Public TV
8 minutes ago
Chinnaswamy Stadium
Bengaluru City

1,650 ಕೋಟಿ ವೆಚ್ಚ, 60,000 ಆಸನ ಸಾಮರ್ಥ್ಯ – ಬೆಂಗ್ಳೂರಲ್ಲಿ ತಲೆ ಎತ್ತಲಿದೆ ಚಿನ್ನಸ್ವಾಮಿಗಿಂತಲೂ ಬೃಹತ್‌ ಸ್ಟೇಡಿಯಂ

Public TV
By Public TV
21 minutes ago
jawaharlal nehru port mumbai
Latest

ಬಾಂಗ್ಲಾ ಸರಕುಗಳ ಮೇಲೆ ಕಠಿಣ ನಿರ್ಬಂಧ ವಿಧಿಸಿದ ಭಾರತ

Public TV
By Public TV
21 minutes ago
Sunil Kumar
Bengaluru City

ವಿಧಾನಸಭೆಯಲ್ಲೂ ಧರ್ಮಸ್ಥಳ ಪ್ರಕರಣ ಸದ್ದು – ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಸದಸ್ಯರ ಪಟ್ಟು

Public TV
By Public TV
42 minutes ago
Mantralaya Raghavendra Mutt
Districts

ಮಂತ್ರಾಲಯದಲ್ಲಿ ಅದ್ದೂರಿಯಾಗಿ ನಡೆದ ಮಹಾರಥೋತ್ಸವ – ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ

Public TV
By Public TV
44 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?