ಶಿವಮೊಗ್ಗ: ಮೆಸ್ಕಾಂ ಇಲಾಖೆಯ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಇಲಾಖೆಯ ಅವ್ಯವಹಾರ ಬಯಲಿಗೆಳೆದಿದ್ದಾರೆ.
Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾಮಗಾರಿಯಲ್ಲಿ 12 ಕೋಟಿ 21 ಲಕ್ಷ ವ್ಯತ್ಯಾಸವಾಗಿದ್ದು, 2017 ರಲ್ಲಿ ಕಾಮಗಾರಿ ಆರಂಭವಾಗಿದೆ. ನಿಗದಿಯಂತೆ 2020 ರಲ್ಲಿ ಕಾಮಗಾರಿ ಮುಕ್ತಾಯವಾಗಬೇಕಿತ್ತು. ನಿನ್ನೆಯವರೆಗೂ ಕಾಮಗಾರಿ ಮುಗಿದಿಲ್ಲ ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಅಂಕಲ್ ಅಂದಿದ್ದೆ ತಪ್ಪಾಯ್ತು – ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಅಂಗಡಿ ಮಾಲೀಕ
Advertisement
ಕಾಮಗಾರಿ ಮುಗಿಯದಿರುವ ಬಗ್ಗೆ ಸಚಿವ ಈಶ್ವರಪ್ಪ ಪೋಟೋ ಪ್ರದರ್ಶನ ಮಾಡಿದ್ದಾರೆ. ಕಾಮಗಾರಿ ಮುಗಿಯದಿದ್ದರೂ, ಕಾಮಗಾರಿ ಮುಗಿದಿದೆ ಎಂದು ಎರಡು ತಿಂಗಳ ಹಿಂದೆಯೇ ಸರ್ಟಿಫಿಕೇಟ್ ಕೊಟ್ಟಿದ್ದೀರಿ ಎಂದು ಗುಡುಗಿದ್ದಾರೆ.
Advertisement
ನಿಮಗೆ ಹೇಳುವವರು ಕೇಳುವವರು ಯಾರು ಇಲ್ಲವೇ? ಈ ರೀತಿಯ ಅವ್ಯವಹಾರ ನಮ್ಮ ಜಿಲ್ಲೆಯಲ್ಲಿ, ರಾಜ್ಯದಲ್ಲಿ ಎಷ್ಟು ಆಗಿರಬಹುದು. ಈ ರೀತಿಯ ಸರ್ಟಿಫಿಕೇಟ್ ಕೊಡೋದಕ್ಕೆ ನೀವು ಇಷ್ಟೆಲ್ಲಾ ಓದ್ದಿದ್ದೀರಿ. ನಿಮ್ಮ ಅಪ್ಪ, ಅಮ್ಮ ನಿಮ್ಮನ್ನು ಓದಿಸಿ, ಕೆಲಸ ಕೊಡಿಸಿರೋದು ಈ ರೀತಿ ಸರ್ಟಿಫಿಕೇಟ್ ಕೊಡೋದಕ್ಕ? ಸರಕಾರದ ದುಡ್ಡು, ಸಾಮಾನ್ಯ ಜನರ ದುಡ್ಡು ಇದು, ಕೆಲಸ ಮಾಡದೇ ಹಣ ಪಡೆಯುತ್ತಾರೆ ಅಂದ್ರೆ ಹೇಗೆ? ಸರಿಯಾಗಿ ಕೆಲಸ ಮಾಡಲು ಏನು ರೋಗ ಆಗಿದೆ ಅಂತಾ ಕೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತನ್ನ ಬರ್ತ್‌ಡೇ ಪಾರ್ಟಿ ಸಿದ್ಧತೆಗೆ ಫಾರ್ಮ್‌ಹೌಸ್‌ಗೆ ಹೋಗಿದ್ದ ಸಲ್ಲುಗೆ ಹಾವು ಕಡಿತ!