ಬೆಳಗಾವಿ: ಕನ್ನಡ ರಾಜ್ಯೋತ್ಸವ (Kannada Rajyotsava) ದಿನದಂದೇ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಕರಾಳ ದಿನಾಚರಣೆ ಮಾಡಿದ ಹಿನ್ನೆಲೆ, ಬೆಳಗಾವಿ ಮಾರ್ಕೆಟ್ ಪೊಲೀಸರು 150 ಜನರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮಹಾರಾಷ್ಟ್ರಕ್ಕೆ (Maharashtra) ಜೈಕಾರ ಹಾಕಿದ, ಭಾಷಾ ವಿಷಬೀಜ ಬಿತ್ತುವ ಕೆಲಸ, ದೊಂಬಿ ಎಬ್ಬಿಸುವ ಹುನ್ನಾರ ಆರೋಪಗಳ ಮೇಲೆ ಪಿಎಸ್‌ಐ ಹಾವಣ್ಣ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ರಾಜ್ಯೋತ್ಸವ ಮೆರವಣಿಗೆ ವೇಳೆ ಹಿಂಸಾಚಾರ; ದುಷ್ಕರ್ಮಿಗಳಿಂದ ಏಕಾಏಕಿ ಐವರಿಗೆ ಚಾಕು ಇರಿತ
ಎಂಇಎಸ್ ಮಾಜಿ ಶಾಸಕ ಮನೋಹರ ಕಿನೇಕರ್, ಶುಭಂ ಶೇಳಕೆ ಸೇರಿದಂತೆ 150 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕೇಸ್ ದಾಖಲಾಗ್ತಿದ್ದಂತೆ ಆರೋಪಿಗಳು ಬೆಳಗಾವಿಯಿಂದ ಪಲಾಯನ ಮಾಡಿದ್ದಾರೆ. ಎಸ್ಕೇಪ್ ಆದ ಆರೋಪಿಗಳನ್ನ ಬಂಧಿಸಲು ಬೆಳಗಾವಿ ಮಾರ್ಕೆಟ್ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಅನುಮತಿ ಇಲ್ಲದಿದ್ರೂ ಕರಾಳ ದಿನಾಚಣೆ – ಗಡಿಯಲ್ಲಿ ನಾಡದ್ರೋಹಿ ಎಂಇಎಸ್ ಪುಂಡಾಟ
ಬೆಳಗಾವಿಯಲ್ಲಿ (Belagavi) ರಾಜಕೀಯ ಅಸ್ತಿತ್ವ ಕಳೆದುಕೊಂಡಿರುವ ಎಂಇಎಸ್, ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಗಡಿಯಲ್ಲಿರುವ ಮರಾಠಿಗರನ್ನ ಕನ್ನಡಿಗರ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡ್ತಿದೆ. ಅದೇ ನಿಟ್ಟಿನಲ್ಲಿ ಬೆಳಗಾವಿ ನಗರದ ಸರ್ದಾರ ಮೈದಾನದಲ್ಲಿ ರಾಜ್ಯೋತ್ಸವದ ವಿರುದ್ಧ ಕರಾಳ ದಿನದ ರ‍್ಯಾಲಿ ನಡೆಸಿತ್ತು. ಸರ್ದಾರ್ ಮೈದಾನದಿಂದ ವಿವಿಧ ಭಾಗಗಗಳಲ್ಲಿ ಸಂಚರಿಸಿ ಕಡಗೆ ಮರಾಠ ಮಂಡಳದಲ್ಲಿ ಸಮಾವೇಶ ಮಾಡಿ ಕರಾಳ ದಿನಾಚರಣೆ ನಡೆಸಿತು. ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ 4 ತಾಲೂಕಿನ ಚುನಾವಣಾ ಫಲಿತಾಂಶ ಪ್ರಕಟ – ಜಾರಕಿಹೊಳಿ ಟೀಂಗೆ ಸ್ಪಷ್ಟ ಬಹುಮತ



