ಬೆಳಗಾವಿ: ಮಹಾಮೇಳಾವ್‌ಗೆ ಅನುಮತಿ ನೀಡದ್ದಕ್ಕೆ ನಾಡದ್ರೋಹಿ MES ಸದಸ್ಯರು ಗಡಿ ವಿಚಾರದಲ್ಲಿ ಮತ್ತೆ ಕ್ಯಾತೆ ಮುಂದುವರಿಸಿದ್ದು, ಮಹಾರಾಷ್ಟ್ರಕ್ಕೆ ತೆರಳಿ ನಾಡದ್ರೋಹಿ ಘೋಷಣೆ ಕೂಗಿದ್ದಾರೆ.
ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದವನ್ನೇ ರಾಜಕೀಯವಾಗಿ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಮಹಾರಾಷ್ಟ್ರದ ಮಹಾವಿಕಾಸ್ ಆಘಾಡಿ ಪಕ್ಷವೂ ಕೊಲ್ಲಾಪುರದಲ್ಲಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಭೆ ಸೇರಿ ಮತ್ತೆ ಕ್ಯಾತೆ ಮುಂದುವರಿಸಿದ್ದಾರೆ. ಇತ್ತ ಮಹಾವಿಕಾಸ್ ಆಘಾಡಿ ಸಭೆಯಲ್ಲಿ ಬೆಳಗಾವಿಯ ಎಂಇಎಸ್ ನಾಯಕರು ಭಾಗಿಯಾಗಿದ್ದು ಬೈಕ್ ರ‍್ಯಾಲಿ ಮೂಲಕ ಬೆಳಗಾವಿಯಿಂದ (Belagavi) ಕೊಲ್ಲಾಪುರಕ್ಕೆ ತೆರಳಲು ಎಂಇಎಸ್ ಸದಸ್ಯರು ತೀರ್ಮಾನ ಮಾಡಿದ್ದಾರೆ.
Advertisement
Advertisement
ಡಿ. 26ರಂದು ಬೆಳಗಾವಿಯಿಂದ ಕೊಲ್ಲಾಪುರಕ್ಕೆ ತೆರಳಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದು, ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಟೋಲ್‌ಗೇಟ್‌ನಿಂದ ಬೈಕ್ ರ‍್ಯಾಲಿಗೆ ಎಂಇಎಸ್ ಸದಸ್ಯರು ತೀರ್ಮಾನ ಮಾಡಿದ್ದು, ಕೊಗನೊಳ್ಳಿ ಟೋಲ್‌ಗೇಟ್ ಬಳಿ ಎಂಇಎಸ್ ಕಾರ್ಯಕರ್ತರನ್ನು ಮಹಾವಿಕಾಸ್ ಆಘಾಡಿ ಮೈತ್ರಿಕೂಟ ಪಕ್ಷಗಳಾದ ಎಂಇಎಸ್‌ಗೆ ಶಿವಸೇನೆ ಉದ್ಧವ್ ಠಾಕ್ರೆ ಬಣ, ಎನ್‌ಸಿಪಿ, ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತ ಮಾಡಿಕೊಳ್ಳಲಿದ್ದಾರೆ. ಇದನ್ನೂ ಓದಿ: 2022ರಲ್ಲಿ ದಾಖಲೆಯ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲು
Advertisement
Advertisement
ಬಳಿಕ ಅಲ್ಲಿಂದ ಕೊಲ್ಲಾಪುರ ಡಿಸಿ ಕಚೇರಿಯವರೆಗೆ ಬೈಕ್ ರ‍್ಯಾಲಿ ನಡೆಸಲಿದ್ದಾರೆ. ಈ ವೇಳೆ ಕರ್ನಾಟಕ (Karnataka), ಮಹಾರಾಷ್ಟ್ರ (Maharashtra) ಗಡಿ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶ ಮಾಡಬೇಕದು ಆಗ್ರಹಿಸಿ ಕೊಲ್ಲಾಪುರ ಡಿಸಿ ಮುಖೇನ ಪ್ರಧಾನಿ ಮೋದಿಗೆ ಮನವಿ ಮಾಡಲಿದ್ದಾರೆ. ಇದನ್ನೂ ಓದಿ: ಸುರತ್ಕಲ್ ಬಳಿ ಚಾಕು ಇರಿದು ವ್ಯಕ್ತಿ ಕೊಲೆ – 4 ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ