ಬೆಳಗಾವಿ ಕದನ, ಮರಾಠಿ ಜನರಿಗೆ ಪಾಠ – ಮತ್ತೆ ಕೆಣಕಿದ ಶಿವಸೇನೆ

Public TV
1 Min Read
Sanjay Raut

ಬೆಳಗಾವಿ: ಎಂಇಎಸ್‍ಗೆ ಬೆಳಗಾವಿ ಪಾಲಿಕೆ ಕೈತಪ್ಪಿದ್ದನ್ನು ಮಹಾರಾಷ್ಟ್ರದ ಶಿವಸೇನೆಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಎಂಇಎಸ್ ಸೋಲನ್ನು ಮರಾಠಿ ಭಾಷಿಕರ ಸೋಲು ಎಂದು ಬಿಂಬಿಸಿ ಮತ್ತೆ ಪ್ರಚೋದಿಸಲು ಬಿತ್ತಲು ಪ್ರಯತ್ನಿಸುತ್ತಿದೆ.

ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ‘ಬೆಳಗಾವಿ ಕದನ, ಮರಾಠಿ ಜನರಿಗೆ ಪಾಠ’ ಎಂಬ ಅಡಿ ಬರಹದಲ್ಲಿ ಸಂಪಾದಕೀಯ ಪ್ರಕಟ ಮಾಡಿದೆ. ಆಗ್ರಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರನ್ನು ಔರಂಗಜೇಬ್ ಬಂಧಿಸಿದ ಸುದ್ದಿ ಕೇಳಿ ಇಡೀ ಮಹಾರಾಷ್ಟ್ರ ಆತಂಕಕ್ಕೀಡಾಗಿತ್ತು. ಆದರೆ ಆ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಬಂಧನವನ್ನು ಮಹಾರಾಷ್ಟ್ರದಲ್ಲಿ ಕೆಲವರು ಸಂಭ್ರಮಿಸಿದರು. ಈಗಲೂ ಅದೇ ಆಗುತ್ತಿದೆ ಎಂದು ಬರೆದಿದೆ.  ಇದನ್ನೂ ಓದಿ: ಡ್ರಗ್ಸ್ ತೆಗೆದುಕೊಂಡಿಲ್ಲ, 12 ಕೋಟಿ ಮನೆ ಇಲ್ಲ, ಈಗಲೂ ವಿಚಾರಣೆಗೆ ಸಿದ್ಧ: ಅನುಶ್ರೀ 

ಮರಾಠಿ ಭಾಷಿಕರ ಸೋಲನ್ನು ಕೆಲವರು ಸಂಭ್ರಮಿಸುತ್ತಿದ್ದಾರೆ. ಇದರಿಂದ ನಾವು ಪಾಠ ಕಲಿಯಬೇಕು. ಶತ್ರುಗಳು ಹಾಗೂ ಮಿತ್ರರು ನಮ್ಮ ಮನೆಯಲ್ಲೇ ಇದ್ದಾರೆ. ಅವರನ್ನು ಗುರುತಿಸಿ ಬುದ್ದಿ ಕಲಿಸಬೇಕು ಎಂದು ಶಿವಸೇನೆ ಕರೆ ನೀಡಿದೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣದ ಬಗ್ಗೆ ಅಂದು ಕಣ್ಣೀರಿಟ್ಟು ಅನುಶ್ರೀ ಹೇಳಿದ್ದೇನು?

ಈ ಮಧ್ಯೆ, ಶಿವಸೇನೆ ಮುಖಂಡ ಸಂಜಯ್ ರಾವತ್ ಸೋಷಿಯಲ್ ಮೀಡಿಯಾದಲ್ಲಿ ಸರಣಿ ಪೋಸ್ಟ್ ಮಾಡಿ, ಮಹಾರಾಷ್ಟ್ರ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಬೆಳಗಾವಿಯಲ್ಲಿ ಗೆದ್ದ ಬಿಜೆಪಿ ಮರಾಠಿ ಭಾಷಿಕ ಸದಸ್ಯರನ್ನು ಮುಂಬೈಗೆ ಕರೆತನ್ನಿ. ಮರಾಠಿ ಅಸ್ಮಿತೆಯ ಪ್ರಮಾಣ ವಚನ ಬೋಧಿಸಿ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಎರಡು ಸಾಲಿನ ಠರಾವು ಪಾಸ್ ಮಾಡಿ ಅಂತಾ ಮಹಾರಾಷ್ಟ್ರದ ಬಿಜೆಪಿ ನಾಯಕರನ್ನು ರಾವುತ್ ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *