ಬೆಳಗಾವಿ: ಎಂಇಎಸ್ ಸಂಘಟನೆ ಕಾಯಕರ್ತರು ವಿವಾದಾತ್ಮಕ ಬರಹವುಳ್ಳ ಟಿ-ಶರ್ಟ್ ಮಾರಾಟ ಮಾಡುತ್ತಿದ್ದ ಮೂವರನ್ನು ಶುಕ್ರವಾರ ಸಂಜೆ ಬೆಳಗಾವಿ ಪೊಲೀಸರು ನಗರದ ಮಾರುಕಟ್ಟೆಯಲ್ಲಿ ಬಂಧಿಸಿದ್ದಾರೆ.
Advertisement
ಈ ಟಿ-ಶರ್ಟ್‍ಗಳ ಮೇಲೆ “ನಾನು ಬೆಳಗಾವಿಯವನು ಮತ್ತು ಬೆಳಗಾವಿ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದು” ಎಂಬ ಸಂದೇಶ ಬಿಂಬಿಸುವ ಟಿ-ಶರ್ಟ್ ಮತ್ತು ಶಾಲುಗಳನ್ನು ನಗರದ ಖಡೇ ಬಜಾರ್ ಮತ್ತು ಗಣಪತಿ ಗಲ್ಲಿಯಲ್ಲಿ ಮಾರಾಟ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ದಿಗ್ವಿಜಯ್ ಪಾಟೀಲ್ ಮತ್ತು ಪ್ರಕಾಶ್, ಶಾಹಿಜಿರಾವ್ ಬೋಸ್ಲೆ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಪ್ರಕರಣ ಪತ್ತೆಯಾಗಿದ್ದು ಹೀಗೆ: ಎಂಇಎಸ್ ಸಂಘಟನೆ ಕಾರ್ಯಕರ್ತನೊಬ್ಬ ಟಿ-ಶರ್ಟ್ ಹಾಕಿಕೊಂಡು ಸೆಲ್ಫಿ ಕ್ಲಿಕಿಸಿಕೊಂಡು ಫೋಟೋವನ್ನು ಫೇಸ್ ಬುಕ್ ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದನು. ಸೆಲ್ಫಿ ಫೋಟೊದಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ.
Advertisement
ಇದೇ ತಿಂಗಳು 16 ರಂದು ನಗರದಲ್ಲಿ ಮರಾಠಾ ಮೋರ್ಚಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕಾಗಿ ಕರ್ನಾಟಕ ವಿರೋಧಿ ಟಿ-ಶರ್ಟ್‍ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆರೋಪಿಗಳ ವಿರುದ್ಧ ಕಲಂ 153 (ಎ) (ಗುಂಪುಗಳ ನಡುವೆ ದ್ವೇಷ ಭಾವನೆ ಕೆರಳಿಸುವ ಯತ್ನ) ಮತ್ತು ಕಲಂ 502 (ಪ್ರಚೋದನಕಾರಿ ಅಂಶ ಪ್ರಕಟಿಸಿ ಮಾರಾಟ ಮಾಟಲು ಯತ್ನ) ಅನ್ವಯ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.