ಹೈದರಾಬಾದ್: ಜಿಎಸ್ಟಿ ಮತ್ತು ಡಿಜಿಟಲ್ ಇಂಡಿಯಾದ ಬಗ್ಗೆ ಟೀಕಿಸಿ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದ `ಮರ್ಸಲ್’ ಸಿನಿಮಾಕ್ಕೆ ಹೊಸ ಪ್ರಾಬ್ಲಂ ಶುರುವಾಗಿದೆ.
ಇಳಯ ದಳಪತಿ ನಟ ವಿಜಯ್ ಅಭಿನಯದ ತೆಲುಗು ಅವತರಣಿಕೆ ಅದರೊಂದಿಗೆ ಇನ್ನೂ ಸೆನ್ಸಾರ್ ಮಂಡಳಿ ಒಪ್ಪಿಗೆ ಸೂಚಿಸಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಆಂಧ್ರ ಮತ್ತು ತೆಲಂಗಾಣದಲ್ಲಿ ಮೂವಿ ರಿಲೀಸ್ ಆಗುತ್ತಿಲ್ಲ ಎಂಬುದಾಗಿ ತಿಳಿದುಬಂದಿದೆ.
- Advertisement 2
ಜಿಎಸ್ಟಿ ಮತ್ತು ಡಿಜಿಟಲ್ ಇಂಡಿಯಾ ಕುರಿತ ಹೀರೋ ವಿಜಯ್ ಹೇಳಿಕೆಯನ್ನು ಮ್ಯೂಟ್ ಮಾಡಬೇಕು ಎನ್ನುವುದು ಬಿಜೆಪಿ ಆಗ್ರಹ. ಇದೇ ಕಾರಣಕ್ಕೆ ಸೆನ್ಸಾರ್ ಮಂಡಳಿಯೂ ಸಿನಿಮಾ ರಿಲೀಸ್ ಗೆ ಒಪ್ಪಿಗೆ ನೀಡುತ್ತಿಲ್ಲ. ಈಗಾಗಲೇ ತಮಿಳು ಭಾಷೆಯಲ್ಲಿ `ಮರ್ಸಲ್’ ಬರೋಬ್ಬರೀ 175 ಕೋಟಿ ರೂಪಾಯಿ ಬಾಚಿದೆ.
- Advertisement 3
ಚಿತ್ರದ ಬಗ್ಗೆ ವಿವಾದವೇನು?: `ಮರ್ಸಲ್’ ಸಿನಿಮಾದಲ್ಲಿ ನಾಯಕ ನಟ ವಿಜಯ್ ಅವರು, ಔಷಧಿಗೆ ಶೇ. 12ರಷ್ಟು ಜಿಎಸ್ಟಿ ವಿಧಿಸಲಾಗಿದೆ ಆದರೆ ಹಲವಾರು ಜನರ ಸಾವಿಗೆ ಕಾರಣವಾಗುವ ಮದ್ಯದ ಮೇಲೆ ಜಿಎಸ್ಟಿ ಇಲ್ಲ ಎಂದು ಹೇಳುವ ದೃಶ್ಯವಿದೆ. ಅಷ್ಟೇ ಅಲ್ಲದೆ ಗೋರಖಪುರದಲ್ಲಿ ಆಮ್ಲಜನಕದ ಕೊರತೆಯಿಂದ ಮಕ್ಕಳು ಮೃತಪಟ್ಟ ಘಟನೆಗೂ ಈ ದೃಶ್ಯದಲ್ಲಿ ಸಂಬಂಧ ಕಲ್ಪಿಸಲಾಗಿದೆ. ಈ ಎಲ್ಲ ದೃಶ್ಯಗಳಿಗೆ ಕತ್ತರಿ ಹಾಕಬೇಕು ಇಲ್ಲವೇ ಮ್ಯೂಟ್ ಮಾಡಬೇಕು ಎಂದು ಬಿಜೆಪಿ ಪಟ್ಟು ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯ ಈ ಆಕ್ಷೇಪದ ವಿರುದ್ಧ ಸಾಮಾಜಿಕ ತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಮರ್ಸಲ್ ಬೆಂಬಲಿಗರು, ವಿಜಯ್ ಅಭಿಮಾನಿಗಳು #MersalVsModi ಎಂಬ ಹ್ಯಾಶ್ಟ್ಯಾಗ್ ಬಳಸಿ ಕೇಂದ್ರ ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದರು.