ಆಂಧ್ರ, ತೆಲಂಗಾಣದಲ್ಲಿ ರಿಲೀಸ್ ಆಗಲ್ಲ `ಮರ್ಸಲ್’ ಸಿನಿಮಾ

Public TV
1 Min Read
MERSAL 6

ಹೈದರಾಬಾದ್: ಜಿಎಸ್‍ಟಿ ಮತ್ತು ಡಿಜಿಟಲ್ ಇಂಡಿಯಾದ ಬಗ್ಗೆ ಟೀಕಿಸಿ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದ `ಮರ್ಸಲ್’ ಸಿನಿಮಾಕ್ಕೆ ಹೊಸ ಪ್ರಾಬ್ಲಂ ಶುರುವಾಗಿದೆ.

ಇಳಯ ದಳಪತಿ ನಟ ವಿಜಯ್ ಅಭಿನಯದ ತೆಲುಗು ಅವತರಣಿಕೆ ಅದರೊಂದಿಗೆ ಇನ್ನೂ ಸೆನ್ಸಾರ್ ಮಂಡಳಿ ಒಪ್ಪಿಗೆ ಸೂಚಿಸಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಆಂಧ್ರ ಮತ್ತು ತೆಲಂಗಾಣದಲ್ಲಿ ಮೂವಿ ರಿಲೀಸ್ ಆಗುತ್ತಿಲ್ಲ ಎಂಬುದಾಗಿ ತಿಳಿದುಬಂದಿದೆ.

ಜಿಎಸ್‍ಟಿ ಮತ್ತು ಡಿಜಿಟಲ್ ಇಂಡಿಯಾ ಕುರಿತ ಹೀರೋ ವಿಜಯ್ ಹೇಳಿಕೆಯನ್ನು ಮ್ಯೂಟ್ ಮಾಡಬೇಕು ಎನ್ನುವುದು ಬಿಜೆಪಿ ಆಗ್ರಹ. ಇದೇ ಕಾರಣಕ್ಕೆ ಸೆನ್ಸಾರ್ ಮಂಡಳಿಯೂ ಸಿನಿಮಾ ರಿಲೀಸ್ ಗೆ ಒಪ್ಪಿಗೆ ನೀಡುತ್ತಿಲ್ಲ. ಈಗಾಗಲೇ ತಮಿಳು ಭಾಷೆಯಲ್ಲಿ `ಮರ್ಸಲ್’ ಬರೋಬ್ಬರೀ 175 ಕೋಟಿ ರೂಪಾಯಿ ಬಾಚಿದೆ.

ಚಿತ್ರದ ಬಗ್ಗೆ ವಿವಾದವೇನು?: `ಮರ್ಸಲ್’ ಸಿನಿಮಾದಲ್ಲಿ ನಾಯಕ ನಟ ವಿಜಯ್ ಅವರು, ಔಷಧಿಗೆ ಶೇ. 12ರಷ್ಟು ಜಿಎಸ್‍ಟಿ ವಿಧಿಸಲಾಗಿದೆ ಆದರೆ ಹಲವಾರು ಜನರ ಸಾವಿಗೆ ಕಾರಣವಾಗುವ ಮದ್ಯದ ಮೇಲೆ ಜಿಎಸ್‍ಟಿ ಇಲ್ಲ ಎಂದು ಹೇಳುವ ದೃಶ್ಯವಿದೆ. ಅಷ್ಟೇ ಅಲ್ಲದೆ ಗೋರಖಪುರದಲ್ಲಿ ಆಮ್ಲಜನಕದ ಕೊರತೆಯಿಂದ ಮಕ್ಕಳು ಮೃತಪಟ್ಟ ಘಟನೆಗೂ ಈ ದೃಶ್ಯದಲ್ಲಿ ಸಂಬಂಧ ಕಲ್ಪಿಸಲಾಗಿದೆ. ಈ ಎಲ್ಲ ದೃಶ್ಯಗಳಿಗೆ ಕತ್ತರಿ ಹಾಕಬೇಕು ಇಲ್ಲವೇ ಮ್ಯೂಟ್ ಮಾಡಬೇಕು ಎಂದು ಬಿಜೆಪಿ ಪಟ್ಟು ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯ ಈ ಆಕ್ಷೇಪದ ವಿರುದ್ಧ ಸಾಮಾಜಿಕ ತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಮರ್ಸಲ್ ಬೆಂಬಲಿಗರು, ವಿಜಯ್ ಅಭಿಮಾನಿಗಳು #MersalVsModi   ಎಂಬ ಹ್ಯಾಶ್‍ಟ್ಯಾಗ್ ಬಳಸಿ ಕೇಂದ್ರ ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದರು.

MERSAL 9

MERSAL 8

MERSAL 7

MERSAL 5

MERSAL 4

MERSAL 3

MERSAL 2

MERSAL 1

MERSAL 15

MERSAL 14

MERSAL 13

MERSAL 12

MERSAL 11

MERSAL 10

Share This Article
Leave a Comment

Leave a Reply

Your email address will not be published. Required fields are marked *