LatestMain PostNational

ಕೇವಲ ತ್ರಿವರ್ಣ ಧ್ವಜ ಹಾರಿಸುವುದರಿಂದ ನಾವು ದೇಶಭಕ್ತರಾಗುವುದಿಲ್ಲ: ಉದ್ಧವ್ ಠಾಕ್ರೆ ಟಾಂಗ್

ಮುಂಬೈ: ಕೇವಲ ತ್ರಿವರ್ಣ ಧ್ವಜವನ್ನು ಹಾರಿಸುವುದರಿಂದ ನಾವು ದೇಶಭಕ್ತರಾಗುವುದಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದರು.

ಬಿಜೆಪಿ ನೇತೃತ್ವದ ಸರ್ಕಾರ ಆಯೋಜಿಸಿರುವ ಹರ್ ಘರ್ ತಿರಂಗ ಅಭಿಯಾನದ ಬಗ್ಗೆ ಮಾತನಾಡಿದ ಠಾಕ್ರೆ, ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿದೆ ಎಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಆದರೆ 75 ವರ್ಷಗಳ ಬಳಿಕವೂ ಪ್ರಜಾಪ್ರಭುತ್ವ ಎಷ್ಟು ಉಳಿದಿದೆ ಎಂಬುದನ್ನು ನಾವು ಯೋಚಿಸಬೇಕಿದೆ ಎಂದು ಹೇಳಿದರು. ಇದನ್ನೂ ಓದಿ: ಸ್ವಾವಲಂಬಿ ಭಾರತ ಕಟ್ಟಲು ಕೈಜೋಡಿಸಿ: ರಾಜ್ಯಪಾಲರ ಮನವಿ

ಕೇಂದ್ರ ಸರ್ಕಾರ ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಕೇಳಿದೆ. ಆದರೆ ನಾನೊಂದು ವ್ಯಂಗ್ಯ ಚಿತ್ರ ನೋಡಿದೆ. ಅದರಲ್ಲಿ ಬಡವನೊಬ್ಬ ಹೇಳುತ್ತಾನೆ, ನನ್ನ ಬಳಿ ತ್ರಿವರ್ಣ ಧ್ವಜವಿದೆ. ಆದರೆ ಅದನ್ನು ಸ್ಥಾಪಿಸಲು ಮನೆಯಿಲ್ಲ. ಇದು ಬಡವರ ಪರಿಸ್ಥಿತಿ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಿಎಂ ಚಾಲನೆ – ಭವ್ಯ ಭಾರತ ಕಟ್ಟಲು ಯುವಜನತೆ ಸನ್ನದ್ಧರಾಗುವಂತೆ ಕರೆ

ಇಂದಿಗೂ ಚೀನಾದವರು ಅರುಣಾಚಲ ಪ್ರದೇಶದಿಂದ ಭಾರತವನ್ನು ಪ್ರವೇಶಿಸುತ್ತಿದ್ದಾರೆ. ನಾವು ನಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾಕಿದ ತಕ್ಷಣ ಅವರು ಹಿಂತಿರುಗುವುದಿಲ್ಲ. ತ್ರಿವರ್ಣ ನಮ್ಮ ಹೃದಯದಲ್ಲಿಯೂ ಇರಬೇಕು ಎಂದರು.

Live Tv

Leave a Reply

Your email address will not be published.

Back to top button