ಲಂಡನ್: ನಕಲಿ ಕೀ ಬಳಸಲಿಲ್ಲ, ಕಾರಿನ ಬಾಗಿಲು ಒಡೆಯಲಿಲ್ಲ. ಆದ್ರೂ ಕಳ್ಳರು ತಮ್ಮ ಕೈಚಳಕ ತೋರಿಸಿ ಮಸಿರ್ಡಿಸ್ ಕಾರನ್ನ ಕೇವಲ ಒಂದೇ ನಿಮಿಷದಲ್ಲಿ ಕದ್ದು ಪರಾರಿಯಾಗಿರೋ ಘಟನೆ ಇಂಗ್ಲೆಂಡ್‍ನಲ್ಲಿ ನಡೆದಿದೆ.
ಇಲ್ಲಿನ ವೆಸ್ಟ್ ಮಿಡ್‍ಲ್ಯಾಂಡ್ಸ್ ಪೊಲೀಸರು ಘಟನೆಯ ಸಿಸಿಟಿವಿ ದೃಶ್ಯವನ್ನ ಬಿಡುಗಡೆ ಮಾಡಿದ್ದು, ಕಳ್ಳರ ಕೃತ್ಯ ನೋಡಿ ಜನ ದಂಗಾಗಿದ್ದಾರೆ.
Advertisement
Advertisement
ಬಿಳಿ ಬಣ್ಣದ ಕಾರ್ ವೊಂದರಲ್ಲಿ ಇಬ್ಬರು ಮುಸುಕುಧಾರಿಗಳು ಬಂದಿದ್ದಾರೆ. ಒಬ್ಬ ಮನೆ ಮುಂದೆ ನಿಲ್ಲಿಸಿದ್ದ ಮಸಿರ್ಡಿಸ್ ಕಾರಿನ ಮುಂದಿನ ಡೋರ್ ಬಳಿ ನಿಲ್ಲುತ್ತಾನೆ. ಮತ್ತೊಬ್ಬ ಮನೆಯ ಬಾಗಿಲ ಬಳಿ ಹೋಗೋದನ್ನ ವಿಡಿಯೋದಲ್ಲಿ ಕಾಣಬಹುದು.
Advertisement
Advertisement
ಇಬ್ಬರೂ ಮುಸುಕುಧಾರಿಗಳು ರಿಲೇ ಬಾಕ್ಸ್ ಗಳನ್ನ ಹೊಂದಿದ್ದರು. ಈ ಸಾಧನ ಮೆಟಲ್ ಹೊರತುಪಡಿಸಿ ಗೋಡೆ, ಬಾಗಿಲು ಹಾಗೂ ಕಿಟಕಿ ಮೂಲಕವೂ ಸಿಗ್ನಲ್‍ಗಳನ್ನ ಸ್ವೀಕರಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಒಬ್ಬ ಕಳ್ಳ ಮನೆಯೊಳಗಿದ್ದ ಕಾರ್ ಕೀ ಯಿಂದ ಸಿಗ್ನಲ್ ಪಡೆದಿದ್ದಾನೆ. ನಂತರ ಕಾರ್ ಡೋರ್ ಬಳಿ ಇದ್ದ ರಿಲೇ ಬಾಕ್ಸ್ ಗೆ ಆ ಸಿಗ್ನಲ್ ವರ್ಗಾವಣೆಯಾಗಿದೆ. ನಂತರ ಕೆಲವೇ ಸೆಕೆಂಡ್‍ಗಳಲ್ಲಿ ಕಾರ್ ಡೋರ್ ತೆರೆದಿದ್ದಾರೆ.
ಬಳಿಕ ಇಬ್ಬರೂ ಒಂದೊಂದು ಕಾರ್ ಏರಿ ಹೊರಟಿದ್ದಾರೆ. 60 ಸೆಕೆಂಡ್‍ಗೂ ಕಡಿಮೆ ಅವಧಿಯಲ್ಲಿ ಕಳ್ಳರು ತಮ್ಮ ಕೆಲಸ ಮುಗಿಸಿ ಸ್ಥಳದಿಂದ ಕಾರ್ ಸಮೇತ ಪರಾರಿಯಾಗಿದ್ದಾರೆ.
ಸೆಪ್ಟೆಂಬರ್ ತಿಂಗಳಿನಲ್ಲೇ ಈ ಕೃತ್ಯ ನಡೆದಿದ್ದರೂ ನವೆಂಬರ್ 26ರಂದು ಸಿಸಿಟಿವಿ ದೃಶ್ಯ ಬಿಡುಗಡೆಯಾಗಿದೆ.
ಕಳ್ಳತನವಾಗಿರೋ ಬೆನ್ಜ್ ಕಾರು ಇನ್ನೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.