Connect with us

Latest

ಮಗಳನ್ನ ಕೊಡಲಿಯಿಂದ ಕೊಚ್ಚಿ ಕೊಂದ ತಂದೆ

Published

on

ಹೈದರಾಬಾದ್: ಮಾನಸಿಕ ಅಸ್ವಸ್ಥ ತಂದೆ ತನ್ನ ಮಗಳನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

10ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಶ್ರೀಜಾ ಕೊಲೆಯಾದ ದುರ್ದೈವಿ. ಕಾಮರೆಡ್ಡಿ ಜಿಲ್ಲೆಯ ತಾಡ್ವೈ ಮಂಡಲ್‍ನ ಎಂದ್ರಿಯಾಲ್ ಗ್ರಾಮದಲ್ಲಿ ಮಂಗಳವಾರದಂದು ಈ ಘಟನೆ ನಡೆದಿದೆ. ಬೆಡ್‍ಶೀಟ್ ಸುತ್ತುಕೊಂಡಿದ್ದ ಶ್ರೀಜಾಳನ್ನು ನೋಡಿ ತಾಯಿ ಸಾಯವ್ವ ಮಗಳು ಮಲಗಿರಬೇಕು ಎಂದುಕೊಂಡು ಆಕೆಯನ್ನು ಎಬ್ಬಿಸಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಆರೋಪಿ ತಂದೆ ಬಾಲ್‍ರಾಜ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಬಾಲಕಿ ಶ್ರೀಜಾ ಇನ್ನೂ ಶಾಲಾ ಸಮವಸ್ತ್ರದಲ್ಲೇ ಇದ್ದ ಕಾರಣ ಮಂಗಳವಾರ ಸಂಜೆ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಕೂಡಲೇ ಶ್ರೀಜಾಳ ತಾಯಿ ಸಾಯವ್ವ ಈ ಬಗ್ಗೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ತಾಡ್ವೈನ ಎಸ್‍ಐ ಅಂಜಯ್ಯ ಹಾಗೂ ಸದಾಶಿವನಗರ ಸರ್ಕಲ್ ಇನ್ಸ್ ಪೆಕ್ಟರ್ ನಾಗರಾಜು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.

ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ಬಾಲ್‍ರಾಜ್‍ಗಾಗಿ ಹುಡುಕಾಟ ನಡೆಸಿದ್ದಾರೆ. ಕೊಲೆಗೆ ಕಾರಣವೇನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ರೈತನಾಗಿದ್ದ ಬಾಲ್‍ರಾಜ್ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಸಣ್ಣ ಸಣ್ಣ ವಿಚಾರಕ್ಕೂ ತುಂಬಾ ಸಿಟ್ಟಾಗುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.

https://twitter.com/publictvnews/status/920851407489531904

Click to comment

Leave a Reply

Your email address will not be published. Required fields are marked *