ವಿಜಯಪುರ: ಹುಚ್ಚು ನಾಯಿಯೊಂದು ಬಾಲಕನ ಮೇಲೆ ಹಾಡುಹಗಲೇ ದಾಳಿ ಮಾಡಿದೆ. ಬಾಲಕನನ್ನ ನಾಯಿ ಉರುಳಾಡಿಸಿ ಕಚ್ಚಿದ ಘಟನೆ ನಗರದ ಕೊಂಚಿ ಕೊರವರ ಓಣಿಯಲ್ಲಿ ನಡೆದಿದೆ
ಕೊಂಚಿಕೊರವ ಓಣಿ ನಿವಾಸಿ ವಿಷ್ಣು (9) ಹುಚ್ಚು ನಾಯಿ ದಾಳಿಗೊಳಗಾದ ಬಾಲಕ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು, ಅಂಗಡಿ ಹೋಗಿದ್ದ ಬಾಲಕನ ಮೇಲೆ ಹಾಡಹಗಲೇ ಹುಚ್ಚುನಾಯಿಯೊಂದು ದಾಳಿ ಮಾಡಿದೆ. ಬಾಲಕನನ್ನು ಉರುಳಾಡಿಸಿ ಕೈ, ರಟ್ಟೆ, ಬೆನ್ನಿನ ಭಾಗದಲ್ಲಿ ಕಚ್ಚಿದ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ ಆಗಿವೆ. ಇದನ್ನೂ ಓದಿ: ಮೆಟ್ರೋ ರೈಲ್ವೆ ಹಳಿಗೆ ತಳ್ಳಿದ ವ್ಯಕ್ತಿ – ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು
Advertisement
Advertisement
ಸ್ಥಳೀಯರು ಸಾವಿನ ದವಡೆಯಿಂದ ವಿಷ್ಣುನನ್ನ ಪಾರು ಮಾಡಿ, ನಂತರ ಹುಚ್ಚು ನಾಯಿಯನ್ನ ಹೊಡೆದು ಸಾಯಿಸಿದ್ದಾರೆ. ಏರಿಯಾದ ಬೇರೆ ನಾಯಿಗಳು ಹಾಗೂ ಜನರ ಮೇಲೂ ಈ ಹುಚ್ಚು ನಾಯಿ ದಾಳಿ ಮಾಡಿತ್ತು. ಇನ್ನು ಬೀದಿ ನಾಯಿಗಳ ಹಾವಳಿಗೆ ಜನರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಆಟವಾಡುತ್ತಾ ಚರಂಡಿಗೆ ಬಿದ್ದು ಪ್ರಾಣ ಬಿಟ್ಟ ಅಕ್ಕ, ತಮ್ಮ
Advertisement
ನಗರದ ಬೆಂಡಿಗೇರಿ ಓಣಿ, ಹಕ್ಕಿಂ ಚೌಕ್, ದೇಶಪಾಂಡೆ ಗಲ್ಲಿ ಸೇರಿದಂತೆ ಗೋಳಗುಮ್ಮಟ ಏರಿಯಾದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿನಾಯಿಗಳನ್ನು ಹಿಡಿಯಬೇಕು ಇಲ್ಲವೇ ಚುಚ್ಚುಮದ್ದು ನೀಡುವ ಕೆಲಸವಾದರು ಮಾಡಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.