ಮ್ಯಾಡ್ರೀಡ್: ವಿಶ್ವದಾದ್ಯಂತ ಶೇ. 65ರಷ್ಟು ಮಹಿಳೆಯರು ಋತುಚಕ್ರದಲ್ಲಿ ನೋವಿನಿಂದ ಬಳಲುತ್ತಾರೆ. ಅದರಲ್ಲೂ ಕೆಲಸದ ಸಮಯದಲ್ಲಿ ತುಂಬಾ ಕಷ್ಟಪಡುತ್ತಿರುತ್ತಾರೆ. ಇದ್ದಕ್ಕಾಗಿ ಸ್ಪ್ಯಾನಿಷ್ ಕ್ಯಾಬಿನೆಟ್‍ನಲ್ಲಿ ಇದಕ್ಕೆ ಸಂಬಂಧಿಸಿದ ಮಸೂದೆಯೊಂದು ಜಾರಿಯಾಗಿದೆ.
ಮಸೂದೆಯ ಪ್ರಕಾರ, ಮುಟ್ಟಿನ ನೋವಿನಿಂದಾಗಿ ಮಹಿಳೆಯರಿಗೆ ಸಂಬಳ ಸಹಿತ ಅನಾರೋಗ್ಯ ರಜೆಯನ್ನು ತೆಗೆದುಕೊಳ್ಳುವ ಹಕ್ಕು ಇದೆ. ಈ ಮೂಲಕ ಯುರೋಪ್‌ನಲ್ಲಿ ಮುಟ್ಟಿನ ಸಮಸ್ಯೆಗೆ ರಜೆ ನೀಡುವ ಮೊದಲ ರಾಷ್ಟ್ರವಾಗಿ ಸ್ಪೇನ್ ಹೊರಹೊಮ್ಮಿದೆ. ಸಂಬಳ ಸಹಿತ ಮುಟ್ಟಿನ ರಜೆಯನ್ನು ತೆಗೆದುಕೊಳ್ಳುವ ಅವಕಾಶವಿರುವ ರಾಷ್ಟ್ರಗಳಲ್ಲಿ ದಕ್ಷಿಣ ಕೊರಿಯಾ ಹಾಗೂ ಇಂಡೋನೇಷ್ಯಾ ರಾಷ್ಟ್ರಗಳು ಸೇರಿವೆ.
Advertisement
Advertisement
ಕ್ಯಾಬಿನೆಟ್ ಸಭೆಯ ನಂತರ ಸ್ಪ್ಯಾನಿಷ್ ಸಚಿವ ಐರಿನ್ ಮೊಂಟೆರೊ ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳೆಯರು ಉತ್ತಮವಾಗಿ ಬದುಕಲು ಅನುವು ಮಾಡಿಕೊಡುವ ಕಾನೂನನ್ನು ನಾವು ಮಾಡುತ್ತಿದ್ದೇವೆ. ಇದರಿಂದಾಗಿ ನೋವಿನಲ್ಲಿ ಕೆಲಸ ಮಾಡಲು ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಂತ್ಯವಾಗಲಿದೆ ಎಂದರು. ಇದನ್ನೂ ಓದಿ: ಬೇಸಿಗೆಯ ಮಳೆಗೆ ಮುಳುಗಿದ ಬೆಂಗಳೂರು – ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
Advertisement
Aprobamos en #CMin la #LeySaludSexual que amplía los derechos sexuales y menstruales de las mujeres, garantiza el aborto en igualdad de condiciones y protege sus derechos en el ámbito reproductivo. Avanzamos en feminismo. Las mujeres deben poder decidir libremente sobre sus vidas pic.twitter.com/Olu0qQYzUm
— Pedro Sánchez (@sanchezcastejon) May 17, 2022
ಮುಟ್ಟಿನ ನೋವನ್ನು ಅನುಭವಿಸುತ್ತಿರುವ ಕೆಲಸಗಾರರು ತಮಗೆ ಬೇಕಾದಷ್ಟು ಕಾಲ ಮನೆಯಲ್ಲಿಯೇ ಇರವ ಹಕ್ಕನ್ನು ಹೊಂದಿರುತ್ತಾರೆ. ರಜೆಯ ಅವಧಿಯನ್ನು ಅಂದಾಜು ಮಾಡಲು ವೈದ್ಯರ ಸಮಾಲೋಚನೆ ಅಗತ್ಯವಿದೆ ಎಂದ ಅವರು, ಈ ಕಾನೂನಿಂದಾಗಿ ಸ್ಪ್ಯಾನಿಷ್ ಸರ್ಕಾರಕ್ಕೆ ವರ್ಷಕ್ಕೆ 25 ಮಿಲಿಯನ್ ಡಾಲರ್ ನಷ್ಟವಾಗುತ್ತದೆ. ಆದರೆ ಉದ್ಯೋಗದಾತರಿಗೆ ಅಲ್ಲ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶೀನಾ ಬೋರಾ ಹತ್ಯೆ ಕೇಸ್- ಇಂದ್ರಾಣಿಗೆ ಮುಖರ್ಜಿಗೆ ಜಾಮೀನು ಮಂಜೂರು