ಮಧುರೈ: ಗೂಳಿ ಬೆದರಿಸುವ ಸ್ಪರ್ಧೆಯೆಂದರೆ ಒಂದು ರೀತಿಯಲ್ಲಿ 20-20 ಕ್ರಿಕೆಟ್ ಮ್ಯಾಚ್ ಇದ್ದಂತೆ. ಸ್ವಲ್ಪ ಸಮಯ ಹೆಚ್ಚು ಮನರಂಜನೆ ಜೊತೆಗೆ ಮರೆಯಲಾದ ನೆನಪುಗಳನ್ನು ಎರಡರಲ್ಲಿಯೂ ಕಾಣಬಹುದಾಗಿದೆ.
ಸಂಕ್ರಾಂತಿ ನಿಮಿತ್ತ ತಮಿಳುನಾಡಿನ ಅಲಂಗನಲ್ಲೂರ್ ನಲ್ಲಿ ಗುರುವಾರ ನಡೆದ ಜಲ್ಲಿಕಟ್ಟು (ಹೋರಿ ಬೆದರಿಸುವ ಸ್ಪರ್ಧೆ) ಅವಿಸ್ಮರಣಿಯ, ರೋಚಕ ಹಾಗೂ ತಮಾಷೆಗೆ ಸಾಕ್ಷಿಯಾಗಿದೆ. ಹೋರಿಯೊಂದು ಯುವಕನ ಚಡ್ಡಿ ಕಳೆದು ಯಾರ ಕೈಗೂ ಸಿಗದೆ ತಪ್ಪಿಸಿಕೊಂಡ ಓಡಿ ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Advertisement
ಅಲಂಗನಲ್ಲೂರ್ ನ ಟಿ.ರಾಜೇಶ್ ಎಂಬವರ ಮಾಲೀಕತ್ವದ ಹೋರಿಯು ಗುರುವಾರ ಬೆಳಗ್ಗೆ 11 ಗಂಟೆಗೆ ನಡೆದ ಜಲ್ಲಿಕಟ್ಟು ಸ್ಪರ್ಧೆಯ ನಾಲ್ಕನೇ ರೌಂಡ್‍ಗೆ ಕಣಕ್ಕೆ ಇಳಿದಿತ್ತು. ಈ ವೇಳೆ ಹಳಿದಿ ಬಟ್ಟೆ ಹಾಕಿಕೊಂಡು ನಿಂತಿದ್ದ ಯುವಕರು ಗೂಳಿಯನ್ನು ಹಿಡಿಯಲು ಭಾರೀ ಕಾತುರರಲ್ಲಿ ಕಾಯುತ್ತಿದ್ದರು.
Advertisement
Advertisement
ಗೂಳಿ ಹೊರಗೆ ಬರುತ್ತಿದ್ದಂತೆ ಯುವಕರು ಸ್ಪಲ್ಪ ದಾರಿ ಬಿಟ್ಟು ಹಿಡಿಯಲು ಪ್ಲಾನ್ ಮಾಡಿದ್ದರು. ಆದರೆ ಎಲ್ಲರನ್ನೂ ಹೆದರಿಸುತ್ತ ಬಂದ ಗೂಳಿ ತನ್ನ ಬಲಕ್ಕೆ ನಿಂತಿದ್ದ ಯುವಕರ ಗುಂಪಿನತ್ತ ನುಗ್ಗಿ ಯುವನ ಮೇಲೆ ಭಯ ಹುಟ್ಟಿಸಿ ಚಡ್ಡಿಯನ್ನು ಬಿಚ್ಚಿ ಗೆಲುವಿನ ಓಟವನ್ನು ಬೀರಿದೆ.
Advertisement
ಚಡ್ಡಿ ಹಾಗೂ ಒಳ ಉಡುಪು ಬಿಚ್ಚಿದ್ದರಿಂದ ಯುವಕ ಸಾರ್ವಜನಿಕರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಕಣದಿಂದ ಓಡಿದ್ದಾನೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದು ಯೂಟ್ಯಬ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ.
ಈ ವಿಡಿಯೋ ನೋಡಿದ ಕೆಲ ನೆಟ್ಟಿಗರು, ಪೆಟ್ಟಾ ಸಿನಿಮಾದಲ್ಲಿ ರಜನಿಕಾಂತ್ ಬಾಬಿ ಸಿಂಹಗೆ ಎಚ್ಚರಿಕೆ ಕೊಟ್ಟಂತೆ ಗೂಳಿ ಯುವಕನ ಚಡ್ಡಿ ಬಿಚ್ಚಿದೆ ಎಂದು ಕಮೆಂಟ್ ಮಾಡಿದ್ದಾರೆ. ಕೆಲವರು ವಿಡಿಯೋ ಅಪ್‍ಲೋಡ್ ಮಾಡಿದ್ದಕ್ಕೆ ಖಾರವಾಗಿ ಕಮೆಂಟ್ ಮಾಡಿ, ಯುವತಿಯೊಬ್ಬಳಿಗೆ ಈ ರೀತಿ ಆಗಿದ್ದರೆ ವೀಡಿಯೋ ಅಪ್‍ಲೋಡ್ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv