ಬೆಂಗಳೂರು: #MeToo ಅಭಿಯಾನ ಸಖತ್ ಸದ್ದು ಮಾಡುತ್ತಿದೆ. ಈ ಅಭಿಯಾನದಿಂದ ದೊಡ್ಡವರ ಮುಖವಾಡವನ್ನು ಕಳಚಿದೆ. ಆದರೆ ಈಗ ಮೀ ಟೂಗೆ ಟಾಂಗ್ ಕೊಡುವುದಕ್ಕೆ ಕ್ರಿಸ್ಪ್ ಅನ್ನುವ ಸಂಘಟನೆಯಿಂದ ಮೆನ್ ಟೂ ಅಭಿಯಾನ ಶುರುವಾಗಿದೆ.
ಮಹಿಳೆಯರಿಂದ ದೌರ್ಜನ್ಯಕ್ಕೆ ಒಳಗಾದವರು, ಮೀಟೂನಲ್ಲಿ ಸುಳ್ಳು ಆರೋಪ ಎದುರಿಸುವವರು, ಹೆಂಡತಿ ಕೈಲಿ ಟಾರ್ಚರ್ ಅನುಭವಿಸಿದವರು, ಗರ್ಲ್‍ಫ್ರೆಂಡ್ ಕೈಲಿ ಚೀಟ್ ಆಗಿ ದೇವದಾಸ್ ಆದವರಿಗೆಲ್ಲ ಮೆನ್ ಟೂ ಅಭಿಯಾನ ವೇದಿಕೆ ಒದಗಿಸಲಿದೆ.
ಈಗಾಗಲೇ ಮೆನ್ ಟೂ ಅಭಿಯಾನಕ್ಕೆ ನೊಂದ ಪುರುಷರಿಂದ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಮಹಿಳೆಯರಿಂದ ಶೋಷಣೆಗೆ ಒಳಗಾದವರಿಗೆ ಫ್ರೀಯಾಗಿ ಕೌನ್ಸಿಲಿಂಗ್ ನೀಡಲಾಗುತ್ತಿದೆ. ಮೆನ್ ಟೂ ಸಕ್ಸಸ್ ಆಗುತ್ತೋ ಇಲ್ಲವೋ ಆದರೆ ನಮ್ ಗೋಳು ಯಾರಿಗೆ ಹೇಳೋಣ ಎನ್ನುತ್ತಿದ್ದ ಗಂಡಸರಿಗೆ ಮೆನ್ ಟೂ ಅಭಿಯಾನ ಫುಲ್ ಖುಷಿ ಕೊಟ್ಟಿದೆ.
ಈಗಾಗಲೇ ಮೀಟೂ ಅಭಿಯಾನ ವಿಶ್ವಾದ್ಯಂತ ಸದ್ದು ಮಾಡಿದೆ. ಬೇರೆ ಬೇರೆ ಕ್ಷೇತ್ರದಲ್ಲಿ ಖ್ಯಾತರಾಗಿರುವ ಸಾವಿರಾರು ನೊಂದ ಮಹಿಳೆಯರು ಈ ವೇದಿಕೆ ಮೂಲಕ ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಸದ್ಯ ಈ ಮೀಟೂ ಅಭಿಯಾನಕ್ಕೆ ಟಾಂಗ್ ಮೆನ್ ಟೂ ಅಭಿಯಾನ ಶುರುವಾಗಿದ್ದು, ಈಗ ಮಹಿಳೆಯರಿಂದ ಶೋಷಣೆಗೊಳಗಾದ ಪುರಷರು ತಮಗಾದ ಕಹಿ ಘಟನೆಗಳನ್ನು ಹೇಳಿಕೊಳ್ಳಲು ಈ ಅಭಿಯಾನದ ವೇದಿಕೆಯಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv