ಪುರುಷರಿಗೆ ಸೂಟ್ ಆಗುವಂತಹ ನೂತನ ಸ್ಟೈಲಿಶ್ ಗಡ್ಡಗಳು

Public TV
2 Min Read
Stylish Beard

ಟ್ಟೆಗಳು ಮತ್ತು ಇತರ ಫ್ಯಾಷನ್ ವಿಚಾರಗಳೊಂದಿಗೆ ಗಡ್ಡಗಳು ಕೂಡ ಪುರುಷರಿಗೆ ಸ್ಟೈಲಿಶ್ ಲುಕ್ ನೀಡುತ್ತದೆ. ಸ್ಟೈಲ್ ವಿಚಾರಕ್ಕೆ ಬಂದರೆ ಮಹಿಳೆಯರಿಗಿಂತ ಪುರುಷರಿಗೆ ಆಯ್ಕೆಗಳು ಬಹಳ ಕಡಿಮೆ. ಆದರೂ ಸ್ಟೈಲಿಶ್ ಗಡ್ಡಗಳು ಪುರುಷರ ಮುಖದಲ್ಲಿ ಬದಲಾವಣೆ ತರುವುದರ ಜೊತೆಗೆ ಅವರು ಸ್ಮಾರ್ಟ್ ಆಗಿ ಕಾಣಿಸಲು ಸಹಾಯಕವಾಗಿದೆ. ಕೆಲವರು ಕುರುಚಲು ಗಡ್ಡ ಹೊಂದಲು ಇಷ್ಟಪಟ್ಟರೆ, ಮತ್ತೆ ಕೆಲವರು ದೊಡ್ಡ ಗಡ್ಡ ಹೊಂದಲು ಇಷ್ಟ ಪಡುತ್ತಾರೆ. ಇನ್ನೂ ಕೆಲವರಿಗೆ ಫ್ರೆಂಚ್ ಗಡ್ಡ ಪ್ರೊಫೆಶನಲ್ ಲುಕ್ ನೀಡುತ್ತದೆ. ಒಟ್ಟಾರೆ ಗಡ್ಡದಲ್ಲಿ ಹಲವು ವಿಧವಾದ ಸ್ಟೈಲಿಶ್ ಗಡ್ಡಗಳಿದ್ದು, 2021ರಲ್ಲಿ ಗಡ್ಡವನ್ನು ಸ್ಟೈಲಿಶ್ ಗೊಳಿಸುವುದು ಟ್ರೆಂಡ್ ಆಗಿದೆ.

 Stylish Beard

ಫ್ರೆಂಚ್ ಗಡ್ಡ
ಫ್ರೆಂಚ್ ಸ್ಟೈಲಿಶ್ ಗಡ್ಡವನ್ನು ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಏಕೆಂದರೆ ಇದು ಸ್ಟೈಲಿಶ್ ಗಡ್ಡಗಳಲ್ಲಿ ಸಖತ್ ಫೇಮಸ್ ಆಗಿದೆ. ಇದನ್ನು ಗಲ್ಲದ ಅಕ್ಕ-ಪಕ್ಕ ಸಮನಾಗಿ ಕೂದಲನ್ನು ಕತ್ತರಿಸಿವಿನ್ಯಾಸಗೊಳಿಸಲಾಗಿದ್ದು, ಇದು ನಿಮಗೆ ಕ್ಲಾಸಿ ಲುಕ್ ನೀಡುತ್ತದೆ. ಜೊತೆಗೆ ನೀವು ಸಖತ್ ಹಾಟ್ ಮತ್ತು ಆ್ಯಟ್ರಕ್ಟಿವ್ ಆಗಿ ಕಾಣಲು ಸಹಾಯವಾಗಿದೆ.

Stylish Beard

ಉದ್ದಗಿನ ಗಡ್ಡ
ಇದೊಂದು ಉದ್ದವಾದ ಗಡ್ಡವಾಗಿದ್ದು, ದವಡೆಯವರೆಗೂ ಈ ಗಡ್ಡವನ್ನು ಜನರು ಬಿಡುತ್ತಾರೆ. ಈ ಗಡ್ಡ 2021ರ ಟ್ರೆಂಡ್ ಸೃಷ್ಟಿಸಿದ್ದು, ಇದು ನಿಮಗೆ ಸ್ಟೈಲಿಶ್ ಲುಕ್ ನೀಡುತ್ತದೆ. ಈ ಗಡ್ಡ ಬೆಳೆಸಲು ನಿಮಗೆ ಬಹಳ ತಾಳ್ಮೆ ಬೇಕಾಗುತ್ತದೆ. ಈ ರೀತಿಯ ಗಡ್ಡ ಬಿಡುವುದಾದರೆ ಹೆಚ್ಚು ಉದ್ದ ಬರುವಾಗ ಟ್ರಿಮ್ ಮಾಡಿ, ಎಣ್ಣೆ ಹಚ್ಚಿ ಆರೈಕೆ ಮಾಡಬೇಕು. ಈ ಗಡ್ಡದ ಸ್ಟೈಲ್ ನೋಡಲು ಆಕರ್ಷಕವಾಗಿ ಕಾಣುವುದು.

FotoJet 2 7

ಕುರುಚಲು ಗಡ್ಡ
ಪುರುಷರು ಬೇಗ ಸುಲಭವಾಗಿ ಟ್ರಿಮ್ ಮಾಡಿಕೊಳ್ಳಬಹುದಾದ ಮತ್ತು ಕೂಲ್ ಲುಕ್ ನೀಡುವಂತಹ ಸ್ಟೈಲಿಶ್ ಗಡ್ಡ ಇದಾಗಿದೆ. ಈ ರೀತಿ ಗಡ್ಡ ಬಿಟ್ಟವರು ಎರಡರಿಂದ ಮೂರು ದಿನಕ್ಕೊಮ್ಮೆ ಕತ್ತರಿಸಬೇಕು. ಈ ರೀತಿಯ ಸ್ಟೈಲ್ ಮಾಡುವವರು ಟ್ರಿಮ್ಮರ್ ಬಳಸುವ ಬದಲು ಕತ್ತರಿ ಬಳಸುವುದು ಸೂಕ್ತ.

Stylish Beard 3

ಚಿಕ್ಕಗಡ್ಡ
ಬೇಸಿಗೆ ಸಮಯದಲ್ಲಿ ಚಿಕ್ಕಗಡ್ಡ ಬಹಳ ಉತ್ತಮವಾಗಿರುತ್ತದೆ. ಇದು ಪುರಷರಿಗೆ ಕ್ರಿಯೆಟಿವ್ ಲುಕ್ ನೀಡುತ್ತದೆ. ಬೇಸಿಗೆಯಲ್ಲಿ ಮತ್ತು ಉದ್ಯೋಗ ಸ್ಥಳಗಳಲ್ಲಿ ಉದ್ದಗಿನ ಗಡ್ಡ ಬಿಡಲು ಸಾಧ್ಯವಾಗದಿದ್ದಲ್ಲಿ ಈ ಸ್ಟೈಲಿಶ್ ಗಡ್ಡವನ್ನು ಟ್ರೈ ಮಾಡಬಹುದಾಗಿದೆ. ಇತ್ತೀಚೆಗೆ ಈ ಗಡ್ಡ ಸಖತ್ ಟ್ರೆಂಡ್ ಆಗಿದೆ.

Stylish Beard 4

Share This Article
Leave a Comment

Leave a Reply

Your email address will not be published. Required fields are marked *