ಚಂಡಿಗಢ: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದಾರೆ ಎಂದು ಶಂಕಿಸಿ ನಾಲ್ವರಿಗೆ ಸಾರ್ವಜನಿಕರು ಚೆನ್ನಾಗಿ ಥಳಿಸಿದ ಘಟನೆ ಫತೇಬಾದ್ ಜಿಲ್ಲೆಯ ಧಯೊರ್ ಗ್ರಾಮದಲ್ಲಿ ನಡೆದಿದೆ.
ಈ ಸಂಬಂಧ ನಮಗೆ ಫೋನ್ ಕರೆ ಬಂದಿದೆ. ಆದರೆ ನಾವು ಅಲ್ಲಿ ತೆರಳಿ ನೋಡಿದಾಗ ಗೋವುಗಳು ಮೃತಪಟ್ಟಿದ್ದವು. ಇದರೊಂದಿಗೆ ನಾಲ್ವರು ಅಲ್ಲಿದ್ದರು ಎಂದು ಪೊಲೀಸ್ ಅಧಿಕಾರಿ ಸುರಜ್‍ಮಲ್ ತಿಳಿಸಿದ್ದಾರೆ.
Advertisement
ಗೋವುಗಳು ಮೃತಪಟ್ಟಿರುವುದರಿಂದ ಸ್ಥಳೀಯರು ನಾಲ್ವರ ಜೊತೆ ಜಗಳವಾಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ ಬಳಿಕ ಆ ನಾಲ್ವರು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲದೆ ಸತ್ತ ಗೋವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಯಿತು ಎಂದು ಅವರು ವಿವರಿಸಿದರು.
Advertisement
Advertisement
ಮೃತಪಟ್ಟ ಗೋವುಗಳನ್ನು ಮಣ್ಣಿನಡಿ ಹಾಕಲು ತೆಗೆದುಕೊಂಡು ಹೋಗುತ್ತಿದ್ದೆವು. ಆದರೆ ಈ ವೇಳೆ ಗ್ರಾಮಸ್ಥರು ನಮ್ಮನ್ನು ತಡೆದಿದ್ದಾರೆ. ಅಲ್ಲದೆ ನಮ್ಮ ಮೈಮೇಲಿನ ಬಟ್ಟೆ ಬಿಚ್ಚಿಸಿ ಕೋಲಿನಿಂದ ಹಲ್ಲೆ ನಡೆಸಿದ್ದಾರೆ. ಇಷ್ಟು ಮಾತ್ರವಲ್ಲದೆ ಗ್ರಾಮಸ್ಥರು ಒತ್ತಾಯಪೂರ್ವಕವಾಗಿ ಮೂತ್ರ ಕುಡಿಸಿದ್ದಾರೆ ಎಂದು ನಾಲ್ವರಲ್ಲಿ ಓರ್ವ ಆರೋಪಿಸಿದ್ದಾನೆ.
Advertisement
ಸುಮಾರು 30 ಮಂದಿ ಗ್ರಾಮಸ್ಥರು ನಮ್ಮ ಮೇಲೆ ದಾಳಿ ಮಾಡಿದ್ದಾರೆ. ಆದರೆ ನಾವು ಯಾವುದೇ ಗೋವನ್ನು ಕೊಂದಿಲ್ಲ. ಈಗಾಗಲೇ ಸತ್ತಿರುವ ಹಸುಗಳನ್ನು ಮಣ್ಣು ಮಾಡುವುದಷ್ಟೇ ನಮ್ಮ ಕೆಲಸವಾಗಿತ್ತು ಎಂದು ಥಳಿತಕ್ಕೊಳಗಾದವರು ತಿಳಿಸಿದ್ದಾರೆ. ಸದ್ಯ ಘಟನೆ ಸಂಬಂಧ ತನಿಖೆ ಮುಂದುವರಿದಿದೆ.
Sub Inspector Surajmal: A scuffle had erupted between villagers&these men. The carcasses & hide were seized by police & the 4 men were admitted to a hospital. Postmortem of the cow & calf have been done. Case registered against the 4 men,further investigation is underway. (09.06) pic.twitter.com/tbNnMAmCcb
— ANI (@ANI) June 9, 2019