ಯಾದಗಿರಿ: ವಿಪ್ ಉಲ್ಲಂಘಿಸಿದ್ದ ಗುರಮಿಠಕಲ್ ಪುರಸಭೆಯ ಕಾಂಗ್ರೆಸ್ ಪಕ್ಷದ ಮೂವರು ಸದಸ್ಯರ ಸದಸ್ಯತ್ವ ಅನರ್ಹಗೊಂಡಿದೆ. ಸದಸ್ಯತ್ವ ಅನರ್ಹಗೊಳಿಸಿ ಡಿಸಿ ಡಾ.ರಾಗಪ್ರಿಯಾ ಆದೇಶ ಹೊರಡಿಸಿದ್ದಾರೆ.
Advertisement
ಅಶನ್ನ ಬುದ್ಧ, ಅಶೋಕ ಕಲಾಲ, ಪವಿತ್ರ ಮನ್ನೆ ಅನರ್ಹಗೊಂಡ ಮೂವರು ಪುರಸಭೆ ಸದಸ್ಯರು. ಸೆಪ್ಟೆಂಬರ್ 2020ರಲ್ಲಿ ಗುರಮಿಠಕಲ್ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು, ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ನ ಮೂವರು ಗೈರಾಗಿದ್ದರು. ಕಾಂಗ್ರೆಸ್‍ನಿಂದ ಬಿ.ಫಾರ್ಮ್ ಪಡೆದು ಚುನಾವಣೆಯಲ್ಲಿ ಗೆದ್ದಿದ್ದರು, ಪುರಸಭೆ ಅಧ್ಯಕ್ಷ ಚುನಾವಣೆಯಲ್ಲಿ ವಿವಿಧ ಕಾರಣಗಳಿಂದ ಗೈರಾಗಿ, ವಿಪ್ ಉಲ್ಲಂಘಿಸಿದ್ದರು. ಇದನ್ನೂ ಓದಿ: ಹಳ್ಳಿಗರು ಹೇಳುವ ಸಮಯಕ್ಕೆ, ಹೇಳಿದ ಸ್ಥಳಕ್ಕೆ ಬರುತ್ತೆ ಕೋವಿಡ್ ಲಸಿಕೆ
Advertisement
Advertisement
ಈ ಬಗ್ಗೆ ಪುರಸಭೆ ಸದಸ್ಯ ಖಾಜಾ ಮೈನೂದ್ದೀನ್ ವಿಪ್ ಉಲ್ಲಂಘಿಸಿದವರನ್ನು ಅನರ್ಹಗೊಳಿಸಲು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಪಕ್ಷಾಂತರ ಕಾಯ್ದೆಯಡಿ ಮೂವರ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ಕಂಪನಿಗಳ ಖಾಸಗೀಕರಣ ಇಲ್ಲ: ಸುನೀಲ್ ಕುಮಾರ್
Advertisement