ಕೇಪ್ ಟೌನ್: ಭಾರತದ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಪಂದ್ಯಗಳು ಕೋವಿಡ್-19 ಭೀತಿಯಿಂದಾಗಿ ರದ್ದಾದ ಬಳಿಕ ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಟಗಾರರು ತವರಿಗೆ ಹಿಂದಿರುಗಿದ್ದಾರೆ. ಈ ವೇಳೆ ಆಟಗಾರರಿಗೆ 14 ದಿನಗಳ ಕಾಲ ಸೆಲ್ಫ್-ಐಸೋಲೇಶನ್ (ಸ್ವಯಂ ಏಕಾಂತವಾಸಿಯಾಗುವುದು) ಆಗುವಂತೆ ಸೂಚನೆ ನೀಡಲಾಗಿದೆ.
ವಿಶ್ವದಲ್ಲಿ ಕೋವಿಡ್-19 (ಕೊರೊನಾ) ಹರಡುವಿಕೆ ಹೆಚ್ಚಾಗುತ್ತಿರುವ ಈ ಹಿನ್ನೆಲೆಯಲ್ಲಿ ಆಟಗಾರರನ್ನು ಸೆಲ್ಫ್ ಐಸೋಲೇಶನ್‍ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. 10 ದಿನಗಳ ಕಾಲ ಭಾರತದಲ್ಲಿದ್ದ ದಕ್ಷಿಣ ಆಫ್ರಿಕಾ ಆಟಗಾರರು ಕೊರೊನಾ ಸೋಂಕಿನ ಕಾರಣ ಹೆಚ್ಚಿನ ಮುನ್ನೆಚ್ಚರಿಕೆಯನ್ನು ವಹಿಸಿದ್ದರು. ಆದರೂ ಸೋಂಕಿನ ಹರಡುವಿಕೆ ಕುರಿತು ಎಚ್ಚರಿಕೆ ಕೈಗೊಳ್ಳುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ.
Advertisement
Advertisement
ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯ ಮಳೆಯ ಕಾರಣ ಒಂದು ಎಸೆತ ಕೂಡ ಕಾಣದೆ ರದ್ದಾಗಿತ್ತು. ವಿಶ್ವದಾದ್ಯಂತ ಕೊರೋನಾ ವೈರಸ್ ಹರಡುವಿಕೆ ತೀವ್ರಗೊಂಡ ಹಿನ್ನೆಲೆಯಲ್ಲಿ ಉಳಿದ ಪಂದ್ಯಗಳು ರದ್ದುಗೊಳಿಸಲಾಗಿತ್ತು. ಪರಿಣಾಮ 10 ದಿನಗಳ ಕಾಲ ಭಾರತದಲ್ಲಿದ್ದ ಆಟಗಾರರು ದೆಹಲಿ, ಧರ್ಮಶಾಲಾ, ಲಕ್ನೋ ಹಾಗೂ ಕೋಲ್ಕತ್ತಾ ಸೇರಿದಂತೆ ದುಬೈಗಳಲ್ಲಿ ಸಂಚಾರಿಸಿದ್ದರು.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ದಕ್ಷಿಣ ಆಫ್ರಿಕಾ ತಂಡದ ಆಟಗಾರರೊಂದಿಗೆ ಇದ್ದ ವೈದ್ಯಕೀಯ ಅಧಿಕಾರಿ ಡಾ.ಶ್ವಾಯಿಬ್ ಮಂಜ್ರೋ ಅವರು, ಬೇರೆ ಬೇರೆ ಸ್ಥಳದಲ್ಲಿ ನಮ್ಮ ಪಂದ್ಯಗಳು ನಿಗಧಿಯಾಗಿದ್ದ ಕಾರಣ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆಟಗಾರರು ಕೂಡ ಈ ಬಗ್ಗೆ ಜಾಗೃತಿ ಹೊಂದಿದ್ದರು. ಆದರೆ ಅವರು ತವರಿನಲ್ಲಿದ್ದ ತಮ್ಮ ಕುಟುಂಬ ಸದಸ್ಯರ ಕುರಿತು ಹೆಚ್ಚಿನ ಯೋಚನೆ ಹೊಂದಿದ್ದರು ಎಂದು ತಿಳಿಸಿದ್ದಾರೆ.
Advertisement
ಭಾರತದಲ್ಲಿರೋ ವೇಳೆಯೇ ಆಟಗಾರರನ್ನು ಪ್ರತ್ಯೇಕವಾಗಿ ಇಟ್ಟು, ಪ್ರತ್ಯೇಕ ವಿಮಾನ ಹಾಗೂ ರೈಲ್ವೆ ಬೋಗಿಗಳಲ್ಲಿ ಪ್ರಯಾಣಿಸಿದ್ದರು. ಆದರೂ ನಾವು ತಜ್ಞರ ಸಲಹೆ ಮೇರೆಗೆ ಈ ಕ್ರಮ ಕೈಗೊಳ್ಳುತ್ತಿದ್ದೇವೆ. ಆಟಗಾರರಿಗೂ ಕೊರೊನಾ ಬಗ್ಗೆ ಸಂಪೂರ್ಣ ಜಾಗೃತಿ ಮೂಡಿಸಿದ್ದೇವೆ. ಇದರ ನಡವೆಯೂ 14 ದಿನಗಳ ಕಾಲ ಸಾರ್ವಜನಿಕರ ಸಂಪರ್ಕದಿಂದ ದೂರ ಉಳಿದು ಸೆಲ್ಫ್ ಐಸೋಲೇಶನ್‍ನಲ್ಲಿರುವಂತೆ ಸೂಚಿಸಿರುವಾಗಿ ಹೇಳಿದರು. ಇತ್ತ ಭಾರತ-ದಕ್ಷಿಣ ಆಫ್ರಿಕಾ ಸರಣಿ ಮಾತ್ರವಲ್ಲದೇ ಇಂಗ್ಲೆಂಡ್ ಸರಣಿಯೂ ರದ್ದಾಗಿದೆ. ಐಪಿಎಲ್ ಹಾಗೂ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಗಳನ್ನು ಮುಂದೂಡಲಾಗಿದೆ.
NEWS: The remaining two ODIs of the ongoing series between India and South Africa to be played behind closed doors #INDvsSA
Read More here ????https://t.co/OU1BLRfg0v pic.twitter.com/r0QQNTJUlX
— BCCI (@BCCI) March 12, 2020