ಬೆಳಗಾವಿ: ಪರಿಷತ್‍ನಿಂದ ಕಾಂಗ್ರೆಸ್ ಸದಸ್ಯರನ್ನ ಅಮಾನತುಗೊಳಿಸಿದ್ದು ಕೆಟ್ಟ ಪದ್ದತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
Advertisement
ಪರಿಷತ್‍ನಿಂದ ಕಾಂಗ್ರೆಸ್‍ನ 15 ಸದಸ್ಯರನ್ನು ಅಮಾನತುಗೊಳಿಸಿದ ಹಿನ್ನೆಲೆ ಸುವರ್ಣಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ಪಾರ್ಲಿಮೆಂಟ್‍ನಲ್ಲಿ ಮಾಡಿದ್ದಂತೆ ಇಲ್ಲಿಯೂ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಮಾರಕವಾಗಿದ್ದು, ಕಾಂಗ್ರೆಸ್ ಪಕ್ಷದವರು ಇದನ್ನ ತೀವ್ರವಾಗಿ ಖಂಡಿಸುತ್ತೇವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ನಿಧನ
Advertisement
Advertisement
ಈ ಕುರಿತಂತೆ ನಾಳೆ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ ಚರ್ಚೆ ಮಾಡುತ್ತೇವೆ. ನಾನು ಯಾರ ಬಗ್ಗೆಯೂ ಮಾತನಾಡೋದಿಲ್ಲ. ಆರೋಪಗಳು ಬಂದ ಸದಸ್ಯರ ಮೇಲೆ ಹಿಂದೆ ಸದನದಲ್ಲಿ ಚರ್ಚೆ ಮಾಡಿಲ್ಲವೆ? ಕಾನೂನು ಪ್ರಕಾರ ನೋಟಿಸ್ ಕೊಡಬೇಕು ಎಂದರು. ಇದನ್ನೂ ಓದಿ: ಕಲಾಪಕ್ಕೆ ಅಡ್ಡಿ- ವಿಧಾನ ಪರಿಷತ್‌ನ 15 ಕಾಂಗ್ರೆಸ್ ಸದಸ್ಯರು ಅಮಾನತು
Advertisement
ಉತ್ತರ ಹೇಳಿ ನಾವು ಆರೋಪಿ ಅಂತ ಹೇಳಿದ್ದವಾ? ಯಡಿಯೂರಪ್ಪನವರ ಮೇಲೆ ಕೇಸ್ ಆಯ್ತು ಅವರು ಜೈಲಿಗೆ ಹೋದ ತಕ್ಷಣ ಆರೋಪಿಯಾದರಾ? ಅಕ್ರಮ ಮಾಡಿದ ಸಚಿವರ ಮೇಲೆ ಗಂಭೀರ ಆರೋಪ ಬಂದಾಗ ಹಿಂದೆ ಯಾವ ರೀತಿ ನಡೆದುಕೊಂಡಿದ್ದರೋ ಅದೇ ರೀತಿ ನಡೆದುಕೊಳ್ಳಬೇಕು ಎಂದು ಹೇಳಿದರು.