ಮಂಡ್ಯ: ಜನಸಾಮಾನ್ಯರ ಕಷ್ಟ ಬಗೆಹರಿಸಬೇಕಾದ ಚುನಾಯಿತ ಸದಸ್ಯರೇ ತಮಗಾಗುತ್ತಿರುವ ಕಷ್ಟ ಹೇಳಿಕೊಂಡು ಬಿಕ್ಕಳಿಸಿ ಅತ್ತ ಘಟನೆ ಮಂಡ್ಯ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಂದಮ್ಮ ಎಂಬವರು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಎದುರು ಕಣ್ಣೀರು ಹಾಕಿ ತಮ್ಮ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ.
Advertisement
Advertisement
ಏನಿದು ಘಟನೆ: ನಾಗಮಂಗಲ ತಾಲ್ಲೂಕಿನ, ಶಿಕಾರಿಪುರ ಗ್ರಾಮದ ಹಾಸ್ಟೆಲ್ ವಾರ್ಡನ್‍ಗಳಾದ ಲೋಕೇಶ್ ಮತ್ತು ಪಾರ್ವತಿ ಎಂಬವರು ರೌಡಿಗಳ ಮೂಲಕ ನನಗೆ ಧಮ್ಕಿ ಹಾಕಿಸಿದ್ದಾರೆ ಎಂದು ಸುನಂದಮ್ಮ ಆರೋಪಿಸಿದ್ದಾರೆ. ಅನಗತ್ಯವಾಗಿ ತಮ್ಮಗೆ ಕಿರುಕುಳ ನೀಡುತ್ತಿರುವ ಕುರಿತು ಎರಡು ವರ್ಷದಿಂದ ದೂರು ಸಲ್ಲಿಸುತ್ತಿದ್ದರು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸುನಂದಮ್ಮ ಆರೋಪಿಸಿದ್ದಾರೆ.
Advertisement
ಸಭೆಯಲ್ಲಿ ಈ ಕುರಿತು ಎಲ್ಲರ ಎದುರು ವಿಷಯ ಪ್ರಸ್ತಾಪಿಸಿದ ಸುನಂದಮ್ಮ ಅವರು ದುಃಖ ತಡೆಯಲಾಗದೇ ಕಣ್ಣೀರು ಹಾಕಿದರು. ಈ ವೇಳೆ ಸಭೆಯಲ್ಲಿ ಹಾಜರಿದ್ದ ಕೆಲ ಸದಸ್ಯರು ಸುನಂದಮ್ಮ ಪರ ಧ್ವನಿಗೂಡಿಸಿದ್ದು, ಕೊನೆಗೆ ಎಲ್ಲ ಸದಸ್ಯರು ಸೇರಿ ಅವರನ್ನು ಸಮಾಧಾನ ಪಡಿಸಿದ್ದಾರೆ. ಅಲ್ಲದ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv