ಶಿವಮೊಗ್ಗ: ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಗ್ರಾಮ ಪಂಚಾಯತ್ ಮಹಿಳಾ ಸದಸ್ಯೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ದೊಣಬಘಟ್ಟದಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಸದಸ್ಯೆಯನ್ನು ಕೌಸರ್ ಭಾನು(50) ಎಂದು ಗುರುತಿಸಲಾಗಿದೆ.
ದೊಣಬಘಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ಪೊಲೀಸ್ ಬಂದೋಬಸ್ತ್ ನಲ್ಲಿ ನಡೆದಿದ್ದು ಡ್ರಾಮಾ, ಹೈಡ್ರಾಮಾಕ್ಕೆ ಎಡೆಮಾಡಿಕೊಟ್ಟಿದೆ. ಅಧ್ಯಕ್ಷರಾಗಿ ಖಲೀಲ್, ಉಪಾಧ್ಯಕ್ಷರಾಗಿ ಮಾಲಮ್ಮ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೌಸರ್ ಭಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದ ಫೋಟೋಗೆ 500 ರೂ. ಬಹುಮಾನ: ನಿತಿನ್ ಗಡ್ಕರಿ
Advertisement
Advertisement
ಆತ್ಮಹತ್ಯೆಗೆ ಯತ್ನಿಸಿದ್ದೇಕೆ?
2021 ಫೆಬ್ರವರಿಯಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆದಿತ್ತು. ಕೌಸರ್ ಭಾನು ಸಹ ದೊಣಬಘಟ್ಟದ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಈ ವೇಳೆ ಖಲೀಲ್ ತಾನು 14 ತಿಂಗಳು ಅಧ್ಯಕ್ಷನಾಗುತ್ತೇನೆ, ನೀವು 14 ತಿಂಗಳ ಬಳಿಕ ಅಧ್ಯಕ್ಷರಾಗಿ ಎಂದು ಕೌಸರ್ ಭಾನು ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಇದನ್ನೂ ಓದಿ: ಆ್ಯಸಿಡ್ ಸಂತ್ರಸ್ತೆಯ ಸರ್ಜರಿಗೆ ನೆರವಾದ ಪೊಲೀಸರು
Advertisement
Advertisement
ಖಲೀಲ್ ಮಾತಿಗೆ ತಕ್ಕಂತೆ 14 ತಿಂಗಳು ಅವಧಿ ಮುಗಿಸಿ ರಾಜೀನಾಮೆ ನೀಡಿದ್ದಾರೆ. ಒಡಂಬಡಿಕೆಯ ಪ್ರಕಾರ ಕೌಸರ್ ಭಾನು ಅಧ್ಯಕ್ಷರಾಗಬೇಕಿತ್ತು ಎಂಬುದು ಅವರ ಬೆಂಬಲಿಗರ ವಾದ. ಆದರೆ ಇಂದು ಗ್ರಾಪಂ ಅಧ್ಯಕ್ಷರಾಗಿ ಖಲೀಮ್ ಆಯ್ಕೆಯಾಗಿದ್ದಾರೆ.
ಖಲೀಲ್ ಮತ್ತು ಎಲ್ಲಮ್ಮ ನನ್ನ ಬಳಿ ಹಣ ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಬೇಕಿದ್ದ ನನಗೆ ಅಧ್ಯಕ್ಷ ಸ್ಥಾನ ತಪ್ಪಿಸಿದ್ದಾರೆ ಎಂದು ಕೌಸರ್ ಭಾನು ಆರೋಪಿಸಿದ್ದಾರೆ. ವಿಷ ಸೇವಿಸಿದ್ದ ಕೌಸರ್ ಭಾನು ಅವರನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.