ಬೆಂಗಳೂರು: ಮೇಲುಕೋಟೆಯ ಯದುಗಿರಿ ಮಠದ ಪೀಠಾಧಿಪತಿ ಯತಿರಾಜ ರಾಮಾನುಜ ಜೀಯರ್ ಸ್ವಾಮೀಜಿ ಅವರಿಗೆ (Ramanujacharya Jeeyar Swamiji Melukote) ಕೇಂದ್ರ ಗೃಹ ಸಚಿವಾಲಯ ವೈ ಕೆಟಗರಿ ಭದ್ರತೆ (Y Category Security) ನೀಡಿದೆ.
ಯದುಗಿರಿ ಮಠದಿಂದ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ವಿಶಿಷ್ಟಾದ್ವೈತ ತತ್ವದ ಜನಕರಾದ ರಾಮಾನುಜಾಚಾರ್ಯರ ಪ್ರತಿಮೆಯನ್ನು 2022ರ ಜುಲೈನಲ್ಲಿ ಲೋಕಾರ್ಪಣೆ ಮಾಡಲಾಗಿತ್ತು.
Advertisement
Advertisement
ಪ್ರತಿಮೆ ಲೋಕಾರ್ಪಣೆ ಮಾಡಿದ ಬಳಿಕ ನಿಷೇಧಿತ ಸಂಘಟನೆಯ ಸದಸ್ಯರು ಮೇಲುಕೋಟೆಯ ರಾಮಾನುಜ ಜೀಯರ್ ಸ್ವಾಮೀಜಿಗೆ ಜೀವ ಬೆದರಿಕೆ ಹಾಕಿದ್ದರು. ಇಂಟರ್ನೆಟ್ ಕರೆ ಮಾಡಿ ದುಷ್ಕರ್ಮಿಗಳು ಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಶ್ರೀಗಳಿಗೆ ವೈ ಕೆಟಗರಿ ಭದ್ರತೆ ಕಲ್ಪಿಸಲಾಗಿದೆ. ಇದನ್ನೂ ಓದಿ: ಫೆ.14 – ಹಸುಗಳನ್ನಪ್ಪಿಕೊಳ್ಳೊ ದಿನ ಆಚರಿಸಲು ಪ್ರಾಣಿ ಕಲ್ಯಾಣ ಮಂಡಳಿ ಕರೆ
Advertisement
ಗುಪ್ತಚರ ಇಲಾಖೆಯ ಬೆದರಿಕೆ ಗ್ರಹಿಕೆ ವರದಿಯ ಆಧಾರದ ಮೇಲೆ ಗೃಹ ಸಚಿವಾಲಯ (Ministry of Home Affairs) ಭದ್ರತೆಯನ್ನು ನೀಡಿದೆ. ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ರಾಮಾನುಜ ಜೀಯರ್ ಸ್ವಾಮೀಜಿ ಅವರಿಗೆ ವೈ ಕೆಟಗರಿ ಭದ್ರತೆ ಸಿಗಲಿದೆ. ಒಟ್ಟು 8-10 ಭದ್ರತಾ ಸಿಬ್ಬಂದಿ 24×7 ಸಮಯದಲ್ಲಿ ಭದ್ರತೆಯಲ್ಲಿರುತ್ತಾರೆ.
Advertisement
ಪ್ರಸ್ತುತ ಈಗ ಯತಿರಾಜ ರಾಮಾನುಜ ಜೀಯರ್ ಸ್ವಾಮೀಜಿ ಬೆಂಗಳೂರಿನ ಮಲ್ಲೇಶ್ವರಂ ಶಾಖಾ ಮಠದಲ್ಲಿ ವಾಸ್ತವ್ಯ ಹೊಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k