ಮಂಡ್ಯ: ಸಲಾಂ ಆರತಿ ಹೆಸರನ್ನು ತೆಗೆಯುವಂತೆ ಮೇಲುಕೋಟೆ ಸ್ಥಾನಿಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸಂಧ್ಯಾರತಿ ಹೆಸರನ್ನು ಉಳಿಸಿಕೊಂಡು ಸಲಾಂ ಕೈ ಬಿಡಬೇಕು. ತ್ರಿಕಾಲದಲ್ಲಿ ದೇವರಿಗೆ ಆರತಿ ಮಾಡುವ ಪದ್ಧತಿ ಎಲ್ಲಾ ದೇವಾಲಯದಲ್ಲಿ ಇದೆ. ಸಂಜೆ ವೇಳೆ ಮೇಲುಕೋಟೆ ದೇವಾಲಯದಲ್ಲಿ ಸಂಧ್ಯಾರತಿಯನ್ನ ಸಾವಿರಾರು ವರ್ಷಗಳಿಂದ ಮಾಡಿಕೊಂಡು ಬರಲಾಗಿದೆ ಎಂದು ಸ್ಥಾನಿಕ ಶ್ರೀನಿವಾಸ್ ಹೇಳಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ಮನೆ ಮೇಲೆ ದಾಳಿ- 8 ಮಂದಿ ಬಂಧನ
ಮುಸ್ಲಿಂ ದಾಳಿಕೋರರಿಂದ ದಾಳಿಯಾದ ಸಂದರ್ಭದಲ್ಲಿ ಅಥವಾ ಟಿಪ್ಪುವಿನ ಕಾಲದಲ್ಲಿ ಸಂಧ್ಯಾರತಿಗೆ ಸಲಾಂ ಪದ ಸೇರಿದೆ. ಮೂಲ ಮೂರ್ತಿಗೆ ಆರತಿಯಾಗುವ ಸಂದರ್ಭದಲ್ಲಿ ದೇವಾಲಯದ ಹೊರಗಡೆ ದೀವಟಿಗೆ ಸಲಾಂ ಮಾಡಲಾಗುತ್ತೆ. ಬಳಿಕ ದೇವಾಲಯ ಗರ್ಭಗುಡಿಯ ಬಳಿಯು ದೀವಟಿಗೆ ಸಲಾಂ ಮಾಡಲಾಗುತ್ತೆ. ಚಲುವನಾರಾಯಣ ಸ್ವಾಮಿ ಎಲ್ಲಾ ಉತ್ಸವ ಮುಗಿಸಿ ಆಸ್ಥಾನಕ್ಕೆ ಬರುವ ವೇಳೆ ಈ ದೀವಟಿಗೆ ಸಲಾಂ ಮಾಡಲಾಗುತ್ತೆ ಎಂದರು. ಇದನ್ನೂ ಓದಿ: ಬಾಯಿ ಮುಚ್ಚು, ಇದು ನಿನಗೆ ಒಳ್ಳೆಯದಲ್ಲ: ಪತ್ರಕರ್ತ ವಿರುದ್ಧ ರಾಮದೇವ್ ಕಿಡಿ
ಸಂಧ್ಯಾರತಿಗೆ ಯಾರ ಆಕ್ಷೇಪಣೆ ಇಲ್ಲ. ಆದರೆ ಇಲ್ಲಿ ಹೇಳಲಾಗುವ ಸಲಾಂ ಪದಕ್ಕೆ ಎಲ್ಲರ ಆಕ್ಷೇಪಣೆ ಇದೆ. ಸಲಾಂ ಪದ ರದ್ದು ಮಾಡಲು ಹಲವು ವರ್ಷಗಳಿಂದ ಕೂಗಿದೆ. ಈ ವಿಚಾರವಾಗಿ ಸರ್ಕಾರ ಪರಿಶೀಲನೆ ಮಾಡಿ ಸಲಾಂ ಪದ ತೆಗೆಯಬೇಕು ಎಂದು ಮನವಿ ಮಾಡಿರು.