ಬೆಂಗಳೂರು: ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ ಶ್ರೀರಾಮನನ್ನು ಯಾಕೆ ಪೂಜಿಸ್ತೀರಿ ಎನ್ನೋ ಹೇಳಿಕೆ ನೀಡುವ ಮೂಲಕ ಮೇಲುಕೋಟೆ ಶಾಸಕ ಕೆ ಎಸ್ ಪುಟ್ಟಣ್ಣಯ್ಯ ಇದೀಗ ವಿವಾದಕ್ಕೀಡಾಗಿದ್ದಾರೆ.
ಟೌನ್‍ಹಾಲ್‍ನಲ್ಲಿ ನಡೆದ ಎಡಪಂಥಿಯರ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ, ಮಹಿಳೆಯರು ಹುಷಾರಾಗಿರಬೇಕು. ಜಗತ್ತಿನಲ್ಲಿ ಗಂಡ-ಹೆಂಡಿತಿಗೆ ಜಗಳ ಆಗಿ ಯಾರಾದ್ರೂ ತುಂಬು ಬಸಿರನ್ನು ಕಾಡಿಗಟ್ಟುತ್ತಾರೆಯೇ? ಅವರ ಅಪ್ಪನ ಮನೆಗೆ ಕಳುಹಿಸಿ ಬಳಿಕ ಮತ್ತೆ ಕರೆಸಿಕೊಳ್ಳುತ್ತಾರೆ. ಹೀಗಾಗಿ ತುಂಬು ಬಸ್ರಿನ ಕಾಡಿಗಟ್ಟಿದವನ್ನ ನೀವು ಟಿವಿ ಮುಂದೆ ರಾಮ ರಾಮ ಅಂತ ರಂಗೋಲಿ ಹಾಕ್ತೀರಲ್ವಾ ಇದ್ಯಾನ ನ್ಯಾಯ ಅಂತ ಹೇಳಿದ್ದಾರೆ.
ಕಟ್ಟಿಕೊಂಡ ಹೆಂಡ್ತಿಯನ್ನೇ ಕಾಡಿಗೆ ಅಟ್ಟಿದವನು ಅವನು, ಅವನಿಗ್ಯಾಕೆ ಪೂಜೆ-ಪುನಸ್ಕಾರ ಅಂತ ಹೇಳುವ ಮೂಲಕ `ಮರ್ಯಾದಾ ಪುರುಷೋತ್ತಮ’ ಎಂದು ಪೂಜಿಸುವ ಶ್ರೀರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಮತ್ತು ಮೋದಿಯನ್ನು ತೆಗಳುವ ಭರದಲ್ಲಿ ರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಈಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
https://www.youtube.com/watch?v=FnNjQckQklk