ನವದೆಹಲಿ: ಕಳೆದ 5 ವರ್ಷಗಳಲ್ಲಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಶಿಕ್ಷಣಕ್ಕಾಗಿ ಯಾವುದೇ ಅಭಿವೃದ್ಧಿಯನ್ನು ಮಾಡಿಲ್ಲ. ಒಂದೇ ಒಂದು ಶಾಲೆಯನ್ನು ನಿರ್ಮಿಸಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.
ಉತ್ತರಪ್ರದೇಶದ ರುಧಾಲಿಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ ರಾಜಧಾನಿಯಲ್ಲಿ ಶಾಲಾ ಮೂಲಸೌಕರ್ಯ ಮತ್ತು ಶಿಕ್ಷಣವನ್ನು ಸುಧಾರಿಸುವುದಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದೇವೆ. ಅದಕ್ಕಾಗಿ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಕಳೆದ ವಾರ ದೆಹಲಿ ಸರ್ಕಾರವು 240 ಸರ್ಕಾರಿ ಶಾಲೆಗಳಲ್ಲಿ 12,000ಕ್ಕೂ ಹೆಚ್ಚು ಸ್ಮಾರ್ಟ್ ರೂಮ್‍ಗಳನ್ನು ಉದ್ಘಾಟಿಸಿದ್ದೇವೆ ಎಂದು ಹೇಳಿದರು.
Advertisement
Advertisement
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಫೆಬ್ರವರಿ 2020ರಲ್ಲಿ ಭಾರತಕ್ಕೆ ಬಂದಾಗ ಸರ್ಕಾರಿ ಶಾಲೆಗಳನ್ನು ನೋಡಬೇಕು ಎಂದು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದ್ದರು. ನಾನು ಕೇಜ್ರಿವಾಲ್ ಅವರ ಸರ್ಕಾರಿ ಶಾಲೆಗಳನ್ನು ನೋಡಲು ಹೋಗುತ್ತೇನೆ ಎಂದಿದ್ದರು. ಅವರು ಪ್ರಪಂಚದಾದ್ಯಂತ ಸುತ್ತಿದ್ದಾರೆ. ಆದರೆ ಅವರು ಎಲ್ಲಿಯೂ ಶಾಲೆಗಳಿಗೆ ಭೇಟಿ ನೀಡಿರಲಿಲ್ಲ ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಭೂ ಕುಸಿತ – ಆತಂಕದಲ್ಲಿ ಗ್ರಾಮಸ್ಥರು
Advertisement
Addressing a public meeting in Rudhauli constituency of Uttar Pradesh | LIVE https://t.co/8yE5IzVi0y
— Arvind Kejriwal (@ArvindKejriwal) February 22, 2022
Advertisement
ಆದರೆ ಮೋದಿ, ಮೆಲಾನಿಯಾ ಟ್ರಂಪ್ ಬಳಿ ಯೋಗಿ ಆದಿತ್ಯನಾಥ್ ಅವರ ಶಾಲೆ ಹಾಗೂ ಮಧ್ಯಪ್ರದೇಶದ ಶಾಲೆಗಳನ್ನು ನೋಡಿ ಎಂದು ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ ಮೆಲಾನಿಯಾ ಇದಕ್ಕೆ ಒಪ್ಪದೇ ಕೇಜ್ರಿವಾಲ್ ಅವರ ಶಾಲೆಯನ್ನು ಮಾತ್ರ ನೋಡುತ್ತೇನೆ ಎಂದು ಹೇಳಿದ್ದರು ಎಂದರು. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ದೇಗುಲಕ್ಕೆ ಕಾಣಿಕೆ – ಯೋಜನೆಗೆ ಬುಧವಾರ ಸಿಎಂ ಚಾಲನೆ
ವಿಶ್ವದ ಪ್ರಮುಖ ವ್ಯಕ್ತಿಯ ಪತ್ನಿ ನಮ್ಮ ಶಾಲೆಯನ್ನು ನೋಡಲು ಬಂದಿದ್ದರು. ಸುಮಾರು ಒಂದು ಗಂಟೆಗಳ ಕಾಲ ವಿದ್ಯಾರ್ಥಿಗಳೊಂದಿಗೆ ಕಳೆದರು. ಇದು ನಮಗೆ ಹೆಮ್ಮೆಯ ವಿಷಯ ಎಂದು ಹೇಳಿದರು.