ಬೆಂಗಳೂರು: ಮೇಕೆದಾಟು ಆಣೆಕಟ್ಟು ಯೋಜನೆ ಕಾಮಗಾರಿಗೆ ಒತ್ತಾಯಿಸಿ ನೀರಿಗಾಗಿ ನಡಿಗೆ ಹೆಸರಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಎರಡನೇ ಹಂತದ ಪಾದಯಾತ್ರೆಗೆ ಇಂದು 2ನೇ ದಿನ.
ಇಂದು ಬೆಳಗ್ಗೆ ಬಿಡದಿಯಿಂದ ಪಾದಯಾತ್ರೆ ಶುರುವಾಗಲಿದೆ. ನಿನ್ನೆಯಷ್ಟೇ ಕನಕಪುರ ಸರ್ಕಲ್‍ನಲ್ಲಿ ನಗಾರಿ ಬಾರಿಸುವ ಮೂಲಕ ಪಾದಯಾತ್ರೆಗೆ ಉಸ್ತುವಾರಿ ಸುರ್ಜೆವಾಲಾ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತಿತರ ಮುಖಂಡರು ಚಾಲನೆ ನೀಡಿದ್ರು. ನಟ ನೆನಪಿರಲಿ ಪ್ರೇಮ್, ಸಾಧುಕೋಕಿಲಾ ಕೂಡ ಪಾಲ್ಗೊಂಡಿದ್ರು.
Advertisement
Advertisement
ರಾಮನಗರದಿಂದ ಹೊರಟ ಪಾದಯಾತ್ರೆ ಸದ್ಯ ಬಿಡದಿ ತಲುಪಿದೆ. ಮತ್ತೊಂದೆಡೆ ಬೆಂಗಳೂರಲ್ಲಿ ಕಾಂಗ್ರೆಸ್ ಪಾದಯಾತ್ರೆಗೆ ಸರ್ಕಾರ ಷರತ್ತು ವಿಧಿಸಬಹುದು ಎನ್ನಲಾಗ್ತಿದೆ. ಪಾದಯಾತ್ರೆಗೆ ಅನುಮತಿ ಪಡೆಯದ ಕಾಂಗ್ರೆಸ್‍ಗೆ ಇಂತದೊಂದು ಆತಂಕ ಎದುರಾಗಿದೆ. ಕೇವಲ ಪಾದಯಾತ್ರೆ ಬಗ್ಗೆ ಮಾಹಿತಿ ನೀಡಿರುವ ಕಾಂಗ್ರೆಸ್ ನಾಯಕರಿಗೆ ಈ ಬಾರಿಯು ಕೊನೆಗಳಿಗೆಯ ತೊಡಕಿನ ಆತಂಕ ಎದುರಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಡಬಲ್ ಇಂಜಿನ್ ಸರ್ಕಾರ ಕರ್ನಾಟಕಕ್ಕೆ ಡಬಲ್ ಮೋಸ ಮಾಡಿದೆ: ರಣದೀಪ್ ಸಿಂಗ್ ಸುರ್ಜೇವಾಲಾ
Advertisement
ಇದು ಜನರಿಂದ ಜನರಿಗಾಗಿ ನಡೆಯುತ್ತಿರುವ ಯಾತ್ರೆ, ಜನಶಕ್ತಿಯೇ ನಮ್ಮ ಬಲ#Mekedatu #NammaNeeruNammaHakku pic.twitter.com/EvHyfdRN3T
— DK Shivakumar (@DKShivakumar) February 27, 2022
Advertisement
ಟ್ರಾಫಿಕ್ ಸಮಸ್ಯೆ ತಪ್ಪಿಸಲು ಸರ್ಕಾರವೇ ಬದಲಿ ಮಾರ್ಗ ಸೂಚಿಸಬಹುದು ಎನ್ನಲಾಗ್ತಿದೆ. ಬೆಂಗಳೂರು ನಗರದ ಒಳಗೆ ಸಾವಿರಾರು ಜನರ ನಡಿಗೆಗೆ ಅವಕಾಶ ಸಿಗೋದು ಅನುಮಾನ. ಮಹಾನಗರದ ವ್ಯಾಪ್ತಿಯಲ್ಲಿ ಇಂತಿಷ್ಟೆ ಜನ ನಡೆಯಬೇಕು ಎಂಬ ಷರತ್ತು ವಿಧಿಸುವ ಸಾಧ್ಯತೆ ಇದೆ. ಇಲ್ಲವೆ ಬೇರೆ ಮಾರ್ಗದಲ್ಲಿ ನಡೆಯಿರಿ ಎಂಬ ಮಾರ್ಗದರ್ಶನ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಡಬಲ್ ಇಂಜಿನ್ ಸರ್ಕಾರವಿದ್ದರೂ, ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ: ಸಿದ್ದು ವ್ಯಂಗ್ಯ
ಒಟ್ಟಾರೆ ಬೆಂಗಳೂರು ಮಹಾನಗರದ ಒಳಗೆ ಪಾದಯಾತ್ರೆ ನಡೆಸಲು ಮುಂದಾದ ಕೈ ನಾಯಕರುಗಳಿಗೆ ಇನ್ಯಾವುದೋ ರೀತಿಯ ಅಡ್ಡಿ ಆತಂಕ ಎದುರಾಗಬಹುದು ಎಂಬ ಆತಂಕ ಎದುರಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಶುಭ ಭಾನುವಾರ, ಶುಭ ಗಳಿಗೆಯಲ್ಲಿ ಇಂದು ಪಾದಯಾತ್ರೆಗೆ ಚಾಲನೆ: ಡಿಕೆಶಿ